ಹಿಂದೂ ಧರ್ಮದ ಅನನ್ಯತೆ
'ವಿಶ್ವಧರ್ಮವೆನಿಸಿದ ಹಿಂದೂ ಧರ್ಮವು ದೇಶದೇಶಗಳ ಗಡಿಗಳನ್ನು ಮೀರಿ ವಿಶ್ವವನ್ನು ಒಂದಾಗಿಸಿ, ಇಡೀ ಮಾನವ ಜನಾಂಗಕ್ಕೆ ಸಂಬಂಧಿಸಿದುದಾಗಿದೆ. ಇದು ಎಲ್ಲಿಯೂ 'ತನ್ನನ್ನೇ ಅನುಸರಿಸು, ಪಾಲಿಸು' ಎಂದು ಬೋಧಿಸುವುದಿಲ್ಲ. ಎಲ್ಲರೂ ಅವರವರ ಮಾರ್ಗಗಳ ಮೂಲಕ ಗುರಿಯನ್ನು ಸೇರಬಹುದು ಎಂದು ಸಾರುತ್ತದೆ.
ಸಮಸ್ತ ಹಿಂದೂಗಳಿಗೂ ಪವಿತ್ರವಾದ ಗ್ರಂಥಗಳೆಂದರೆ ವೇದಗಳು. ಆದ್ದರಿಂದ ನಾವೆಲ್ಲರೂ ವೇದಗಳ ಹೆಸರಿನಲ್ಲಿ ಸಹೋದರರು. ಎರಡನೆಯದಾಗಿ ನಾವು ಪ್ರತಿಯೊಬ್ಬರೂ ದೇವರನ್ನು ಒಪ್ಪುತ್ತೇವೆ. ಆ ದೇವರ ಕಲ್ಪನೆಗಳು ಪರಸ್ಪರ ಎಷ್ಟೇ ಭಿನ್ನವಾಗಿರಬಹುದು ಮತ್ತು ಇವುಗಳಲ್ಲಿ ಒಂದು ಕಲ್ಪನೆ ಮತ್ತೊಂದಕ್ಕಿಂತ ಉತ್ತಮವಾಗಿರಬಹುದು; ಆದರೆ ಯಾವುದೂ ತುಚ್ಛವಾದದ್ದಲ್ಲ. ಸೃಷ್ಟಿಯು ಆದ್ಯಂತರಹಿತವಾದುದು ಎಂದು ಸಾರುವುದು ಹಿಂದೂ ಧರ್ಮ.
ಹಿಂದೂ ಧರ್ಮದಲ್ಲಿ ಮಾತ್ರವೇ ಕಂಡುಬರುವ ಒಂದು ತತ್ವಎಂದರೆ, ಮುಕ್ತಿಯ ಕಲ್ಪನೆ. ಮುಕ್ತಿಯೆಂದರೆ ಇಂದ್ರಿಯ ಭೋಗಗಳೆಲ್ಲವನ್ನೂ ಮೀರಿದ ಅತ್ಯುನ್ನತ ಸ್ಥಿತಿ. ಆತ್ಮವು ಸಹಜವಾಗಿಯೇ ಪರಿಶುದ್ಧವಾದುದು, ಅನಂತ ಶಕ್ತಿಯುಳ್ಳದ್ದು ಎಂಬ ತತ್ವವನ್ನು ಹಿಂದೂ ಧರ್ಮವು ಬೋಧಿಸುವುದು. ಧರ್ಮವಿರುವುದು ಬೋಧನೆಯಲ್ಲಿಲ್ಲ, ಅನುಷ್ಠಾನದಲ್ಲಿ- ಸಾಕ್ಷಾತ್ಕಾರದಲ್ಲಿ, ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲೇಬೇಕು ಎಂದು ಮತ್ತೆ ಮತ್ತೆ ಸಾರುವುದು ಹಿಂದೂ ಗ್ರಂಥಗಳು ಮಾತ್ರ'.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

