ತುಳಸಿ ಪ್ರಾಣಾಯಾಮ

ಮನೆ ಮುಂದೆ ತುಳಸಿ ಗಿಡ ಇದ್ದರೆ, ಅದೊಂದು ದೈವಿಕ ಚಿಹ್ನೆ. ಹಾಗೆಯೇ ಆರೋಗ್ಯದ ಭರವಸೆ ಕೂಡ. ಈ ಪುರಾತನ ಪವಿತ್ರ ಸಸ್ಯದಲ್ಲಿ ರೋಗ ನಿರೋಧಕ ಗುಣಗಳು ಅಗಾಧ. ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಟ್ಟು, ಇದರ ಗಾಳಿ ನೇರವಾಗಿ ಮನೆಯೊಳಗೆ ಪ್ರವೇಶಿಸಿದರೆ ಮತ್ತೂ ಆರೋಗ್ಯದಾಯಕ.
ಸಮುದ್ರ ಮಥನ ಕಾಲದಲ್ಲಿ ಅಮೃತವನ್ನು ಪಡೆಯಲು ದೇವತೆಗಳಿಗೆ ಮತ್ತು ದಾನವರ ನಡುವೆ ಯುದ್ಧ ನಡೆಯಿತು. ಆಗ ಹೊರಗೆ ಬಿದ್ದ ಅಮೃತ ಬಿಂದುಗಳಿಂದ 'ತುಳಸಿ' ಜನಿಸಿತೆಂಬುದು ಪ್ರತೀತಿ. ಯಾವ ಮನೆಯಲ್ಲಿ ತುಳಸಿ ಇದೆಯೋ ಅಲ್ಲಿ ಅನಿಷ್ಟ ಆಗಮಿಸಲು ಹೆದರುತ್ತದೆ. ಭೂತ, ಪ್ರೇತ, ದುಷ್ಟ ಶಕ್ತಿಗಳು ಮನೆಬಾಗಿಲಿಗೆ ಸುಳಿಯವು.
ಪ್ರಾಣಾಯಾಮದಲ್ಲಿ ಸಾಕಷ್ಟು ವಿಧಗಳಿದ್ದು, ಈಗದಕ್ಕೆ ಹೊಸ ಸೇರ್ಪಡೆ ತುಳಸಿ ಪ್ರಾಣಾಯಾಮ! ವಾಯುಮಾಲಿನ್ಯದಿಂದ ಆಮ್ಲಜನಕದ ಕೊರತೆ ಎದುರಿಸುತ್ತಿರುವ ಈ ದಿನಗಳಲ್ಲಿ ಕೃತಕ ಆಮ್ಲಜನಕಕ್ಕೆ ಮೊರೆ ಹೋಗಿರುವ ಜನರಿಗಾಗಿ ಇದೊಂದು ನೂತನ ಪ್ರಯೋಗ. ಕುಂದಾಪುರ ತಾಲೂಕಿನ ಹೂವಿನಕೆರೆ ವಾದಿರಾಜ ಮಠದ ರಸ್ತೆಯ ಪಕ್ಕದಲ್ಲಿನ ಗುಂಡು ಶೆಟ್ಟಿಗಾರ ಎಂಬುವವರ ಮನೆಯ ಎದುರು ಈ ತುಳಸಿ ಪ್ರಾಣಾಯಾಮ ಜನ್ಮ ತಾಳಿದೆ.
ಆ ಮನೆಯೆದುರು ಮರದ ಸುತ್ತ 3 ಅಡಿ ಸುತ್ತಳತೆಯ ಕಟ್ಟೆ ಕಟ್ಟಲಾಗಿದೆ. ಅದರ ಕೆಳಗೆ 4 ಅಡಿ ಆಗಲ ಸುತ್ತಳತೆ ಜಾಗವನ್ನು ಬಿಟ್ಟು 70- 80 ಕೃಷ್ಣ ತುಳಸಿ ಗಿಡವನ್ನು ಬೆಳೆಸಿದ್ದಾರೆ ಶೆಟ್ಟಿಗಾರ ಅವರು. 5 ವರ್ಷಗಳಿಂದ ನಿತ್ಯ ಬೆಳಗ್ಗೆ ಒಂದು ತಾಸು ಬ್ರಾಹ್ಮೀ ಮಹೂರ್ತದಲ್ಲಿ ದೊಡ್ಡವರಿಂದ ಹಿಡಿದು ಮಕ್ಕಳು ಕೂಡ ಈ ಕಟ್ಟೆಯಲ್ಲಿ ಕುಳಿತು, ಪ್ರಾಣಾಯಾಮ ಮಾಡುತ್ತಿದ್ದಾರೆ.
ಬೆಳಗ್ಗೆ ಗಿಡಗಳು ಕಾರ್ಬನ್ ಡೈ ಆಕ್ಸೈಡ್ ತೆಗೆದುಕೊಂಡು ಆಕ್ಸಿಜನ್ ಬಿಡುಗಡೆಮಾಡುವ ಸಂದರ್ಭದಲ್ಲಿ ಈ ತುಳಸಿಯಿಂದ ಹೊರಡುವ ಎಲ್ಲಾ ಔಷಧೀಯ ಅಂಶಗಳು ಮನುಷ್ಯನ ಶರೀರವನ್ನು ಪ್ರವೇಶಿಸಿ ಬೇರೆ ಬೇರೆ ಅವಯವಗಳಿಂದ ಉತ್ವನ್ನವಾಗುವ ಕಾಬೋನಿಕ್ ಗ್ಯಾಸ್ ಅನ್ನು ಹೊರಹಾಕುತ್ತದೆ. ಆಗ ದೇಹದಲ್ಲಿ ರಕ್ತ ಪರಿಚಲನಾ ಕಾರ್ಯ ಸುಗಮವಾಗಿ ನಡೆಯುತ್ತದೆ. ಶರೀರ, ಮನಸ್ಸು, ಇಂದ್ರಿಯದ ಕಲ್ಮಶಗಳು ಮಾಯವಾಗಿ ಚಿಂತೆ, ಕ್ರೋಧ, ನಿರಾಶೆ, ಖಿನ್ನತೆ, ಭಯ ದೂರವಾಗಿ ಸಮಾಧಾನ ಸಿಗುತ್ತದೆ. ಇಲ್ಲಿಯವರೆಗೆ ಆ ಮನೆ ಸದಸ್ಯರ ಆರೋಗ್ಯ ಕೆಟ್ಟಿಲ್ಲ. ಈ ಸ್ವಚ್ಛ ಉಸಿರೇ ಅವರ ಆರೋಗ್ಯದ ಗುಟ್ಟು. ಹೆಚ್ಚಿನ ಮಾಹಿತಿಗೆ ಮೊ. 9035035288 ಸಂಪರ್ಕಿಸಬಹುದು.
-ಚಿತ್ರ, ಲೇಖನ: ಸುಧಾಕರ ವಕ್ವಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


