ಕೈ ಗಡಿಯಾರದಲ್ಲಿ ಹರಳುಗಳು ಏಕಿರುತ್ತವೆ?
ನಾವು ಕೈಗಡಿಯಾರವನ್ನು ಕೊಳ್ಳುವಾಗ ಅದರಲ್ಲಿ ಎಷ್ಟು ಹರಳುಗಳಿವೆ ಎಂಬುದನ್ನು ವಿಚಾರಿಸುತ್ತೇವೆ. ವಾಚ್‌ನ ಹೊರಭಾಗದಲ್ಲಿ ಅಥವಾ ಡಯಲ್‌ನ ಮೇಲೆ ಅದರಲ್ಲಿರುವ ಹರಳುಗಳ ಸಂಖ್ಯೆಯನ್ನು ಸೂಚಿಸಲಾಗಿರುತ್ತದೆ. ಹರಳುಗಳ ಸಂಖ್ಯೆ ಹೆಚ್ಚಾದಷ್ಟೂ ಕೈಗಡಿಯಾರ ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ.
ಏಕೆಂದರೆ ಒಳ್ಳೆಯ ಕೈಗಡಿಯಾರ ಯಾವಾಗಲೂ ಸರಿಯಾದ ವೇಳೆಯನ್ನೇ ತೋರಿಸುತ್ತದೆ. ಅದು ಸುಲಭವಾಗಿ ಕೆಡುವುದಿಲ್ಲ. ಒಂದು ಕೈಗಡಿಯಾರವನ್ನು ಬಿಚ್ಚಿ ನೋಡಿದರೆ ಅದರೊಳಗೆ ಎಷ್ಟು ಸೂಕ್ಷ್ಮವಾದ ಯಂತ್ರಗಳಿವೆ ಎನ್ನುವುದು ತಿಳಿಯುತ್ತದೆ. ಇದರಲ್ಲಿ ದೊಡ್ಡ ಭಾಗಗಳು ಮತ್ತು ಅನೇಕ ಸಣ್ಣ ಸಣ್ಣ ಭಾಗಗಳಿರುತ್ತವೆ. ಒಂದು ಕೈಗಡಿಯಾರದಲ್ಲಿ ಸುಮಾರು 211 ಭಾಗಗಳಿರುತ್ತವೆ. ಅವುಗಳಲ್ಲಿ ಒಂದು ಸಣ್ಣ ಚಕ್ರ ಯಾವಾಗಲೂ ಸುತ್ತುತ್ತಿರುತ್ತದೆ. ಇದಲ್ಲದೆ ಇನ್ನೂ ಕೆಲವು ಚಕ್ರಗಳಿರುತ್ತವೆ. ಅವೂ ಸದಾ ಸುತ್ತುತ್ತಿರುತ್ತವೆ. ಈ ಚಕ್ರಗಳು ಗಂಟೆ, ನಿಮಿಷ ಮತ್ತು ಸೆಕೆಂಡ್ ಮುಳ್ಳುಗಳು ಚಲಿಸುವಂತೆ ಮಾಡುತ್ತವೆ. ಈ ಚಕ್ರಗಳ ಆಕ್ಸೆಲ್‌ಗಳು ಬೇಗನೇ ಸವೆದುಹೋಗಬಹುದು. ಇದರಿಂದ ಗಡಿಯಾರ ಸಮಯ ತೋರಿಸುವುದಿಲ್ಲ. ಕಡೆಗೆ ಅದರ ಕೆಲಸವೇ ನಿಂತುಹೋಗುತ್ತದೆ.
ಈ ಘರ್ಷಣೆಯನ್ನು ಕಡಿಮೆಮಾಡಲು ತುಂಬಾ ಗಟ್ಟಿಯಾದ ಮತ್ತು ನಯವಾದ ಹರಳುಗಳನ್ನು ಆಕ್ಸೆಲ್‌ಗಳಿಗೆ ಆಧಾರಪೀಠವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಮಾಣಿಕ್ಯ ಮತ್ತು ನೀಲಮಣಿಗಳನ್ನು ಬಳಸಲಾಗುತ್ತದೆ. ವಜ್ರವನ್ನು ಬಿಟ್ಟರೆ ಇವೆರಡೂ ಅತ್ಯಂತ ಗಟ್ಟಿಯಾದ, ಪ್ರಶಸ್ತವಾದ ಹರಳುಗಳು. ಗಡಿಯಾರದ ಚಕ್ರಗಳ ಆಕ್ಸೆಲ್‌ಗಳು ಈ ಹರಳುಗಳ ಮೇಲೆ ತಿರುಗುವುದರಿಂದ ಹೆಚ್ಚಿನ ಘರ್ಷಣೆ ಉಂಟಾಗುವುದಿಲ್ಲ. ತುಂಬಾ ಗಡುಸಾಗಿರುವುದರಿಂದ ಹರಳುಗಳು ಸವೆಯುವುದಿಲ್ಲ. ಬೇಗನೆ ಗಡಿಯಾರ ಕೆಡುವುದಿಲ್ಲ. ಹೀಗೆ ಹರಳುಗಳು ಗಡಿಯಾರದ ದೀರ್ಘ ಬಾಳಿಕೆಗೆ ಸಹಾಯ ಮಾಡುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

