ಮಕರಂದ/ದೋಣಿ

ಗಾಂಧೀಜಿ ಹೇಳಿದ್ದು...

Published On :

ಪರಮಾತ್ಮ ಜಗತ್ತು ಕಂಡ ಪ್ರಜಾಪ್ರಭುತ್ವವಾದಿಗಳಲ್ಲೆಲ್ಲ ಮಹಾ ಪ್ರಜಾಪ್ರಭುತ್ವ ವಾದಿ. ಏಕೆಂದರೆ ಒಳಿತು ಕೆಡಕುಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಲು ಅವನು ನಮಗೆ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಅವನು ನಿರಂಕುಶ ಪ್ರಭುಗಳಲ್ಲೆಲ್ಲ ಮಹಾ ನಿರಂಕುಶ ಪ್ರಭು. ಏಕೆಂದರೆ ಎಷ್ಟೋ ಸಲ ಅವನು ಕೈಗೆ ಬಂದದ್ದನ್ನು ಬಾಯಿಗೆ ಬಾರದಂತೆ ಮಾಡುತ್ತಾನೆ. ಮತ್ತು ಜೀವಸ್ವಾತಂತ್ರ್ಯದ ಸೋಗಿನಲ್ಲಿ ಅವನು ನಮಗೆ ಕೊಟ್ಟ ಅವಕಾಶದ ಇಕ್ಕಟ್ಟಿನಲ್ಲಿ ನಾವು ಒದ್ದಾಡುವುದನ್ನು ಮೋಜಿನಿಂದ ನೋಡುತ್ತಾನೆ. ಆದ್ದರಿಂದಲೇ ಹಿಂದೂ ಧರ್ಮ ಇದನ್ನೆಲ್ಲ ಅವನ ಲೀಲೆ ಎಂದೂ, ಮಾಯೆಯೆಂದೂ ಕರೆಯುತ್ತದೆ. ನಾವು ಇಲ್ಲ; ಅವನು ಮಾತ್ರವೇ ಇದ್ದಾನೆ. ನಾವು ಇರಬೇಕೆಂದರೇ ಅದಕ್ಕೆ ಅನಂತವಾಗಿ ಅವನ ಮಹಿಮೆಗಳನ್ನು ಕೊಂಡಾಡುತ್ತ ಅವನ ಇಚ್ಚೆಗೆ ತಲೆಬಾಗುವುದು ಒಂದೇ ದಾರಿ. ನಾವು ಅವನ ಕೊಳಲಿನ ಗಾನಕ್ಕೆ ಸರಿಯಾಗಿ ಕುಣಿಯೋಣ. ಆಗ ಎಲ್ಲವೂ ಸರಿ ಹೋಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.