ಮಕರಂದ/ದೋಣಿ

ಹನಿ ಹನಿ

ಹನಿ ಹನಿ
Published On :


ಬೆಳ್ಳಂಬೆಳಗ್ಗೆ ಹೂವೊಂದು ನಕ್ಕಿತ್ತು
ಅವಳ ಹಿತಸ್ಪರ್ಶಕ್ಕೆ
-
ಅವಳು ಬಂದು ನನ್ನೆದೆಯ
ಕಪ್ಪು ಕಲೆಗಳನ್ನೆಲ್ಲ ತೊಳೆದಳು.
-
ನನ್ನ ಕಪ್ಪು ಕೆನ್ನೆಯ ಮೇಲೆ
ನೀನಿಟ್ಟ ಮುತ್ತು ಬೆಳದಿಂಗಳನ್ನು ಚೆಲ್ಲಿತ್ತು.
-
ಒಮ್ಮೊಮ್ಮೆ ಇರುವೆಗಳ ಸಾಲನ್ನು ಬೆನ್ನಟ್ಟಿಕೊಂಡು ಹೋಗುತ್ತೇನೆ.
ಅವಳು ಸಿಗಬಹುದೇನೋ ಎಂದು.
-
ನನ್ನ ನೋವು ಹತಾಶೆಗಳೆಲ್ಲವೂ
ಅವಳ ಪ್ರೀತಿಯ ಆಳದೊಳಗೆ ಮುಳುಗಿ ಹೋದವು
-
ಅವಳು ಬಂದೊಡನೆ ತೋಟದಲ್ಲಿದ್ದ ಹೂವುಗಳೆಲ್ಲ ನಾಚಿ ತಲೆತಗ್ಗಿಸಿದವು
-
ಅವಳು ಮನದೊಳಗೆ ಕಾಲಿಟ್ಟಾಗಿನಿಂದ
ಬೆಳಕಿಗಾಗಿ ನಾನು ಎಂದೂ ಪರಿತಪಿಸಲಿಲ್ಲ.

ಜಗವೆಲ್ಲ ಹುಡುಕಿದೆ
ನೀನು ಸಿಗದೇ ಹೋದೆ
ನನ್ನೆದೆಯೊಳಗೆ ಇಣುಕಿದೆ
ಅಲ್ಲಿ ನೀನು ನಗುತ್ತಿದ್ದೆ.


- ನಾಗರಾಜ್ ವಾಯ್ ಕಾಂಬಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.