ಬೆಟ್
ಪದ್ಮಾಳಿಗೆ ಹೆರಿಗೆಯ ದಿನ ಹತ್ತಿರ ಬರುತ್ತಾ ಇತ್ತು. ನೆಂಟರಿಷ್ಟರು, ಸ್ನೇಹಿತರ ಫೋನ್ ಕರೆಗಳಿಂದ ಹೈರಾಣಾಗಿದ್ದೆ. ಹೆರಿಗೆ ಆಯ್ತು?...
ಪದ್ಮಾಳಿಗೆ ಹೆರಿಗೆಯ ದಿನ ಹತ್ತಿರ ಬರುತ್ತಾ ಇತ್ತು. ನೆಂಟರಿಷ್ಟರು, ಸ್ನೇಹಿತರ ಫೋನ್ ಕರೆಗಳಿಂದ ಹೈರಾಣಾಗಿದ್ದೆ. ಹೆರಿಗೆ ಆಯ್ತು? ಇಲ್ವಾ? ದಿನ ಹತ್ತಿರ ಬಂತು. ಯಾವಾಗ ಬೇಕಾದರೂ ಆಗಬಹುದು. ರೆಡಿ ಇರು ಅಂತ ಹಲವರಿಂದ ಸಲಹೆಗಳು. ಇವೆಲ್ಲವುಗಳಿಂದ ಆತಂಕಿತನಾಗಿದ್ದೆ.
ಇದೇ ಆತಂಕದಲ್ಲಿ ಆಫೀಸಿಗೆ ಹೋದೆ. ಮಧ್ಯಾಹ್ನ ಬ್ರೇಕ್‌ನಲ್ಲಿ ಸ್ನೇಹಿತ ಸೂರಿ ಹತ್ತಿರ ನನ್ನ ಆತಂಕ ತೋಡಿಕೊಂಡೆ. ಸೂರಿ ನನ್ನ ಆತ್ಮೀಯ ಸ್ನೇಹಿತ. ಕಷ್ಟ-ಸುಖಗಳನ್ನೆಲ್ಲಾ ಅವನ ಹತ್ತಿರ ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದಾಗಿತ್ತು. ಅವನೆಂದ: 'ಹೆದರಬೇಡ ಕಣೋ! ದಿನಕ್ಕೆ ಎಷ್ಟು ಜನಕ್ಕೆ ಹೆರಿಗೆಯಾಗಲ್ಲ, ಈಗೆಲ್ಲ ಮೆಡಿಕಲ್ ಫೀಲ್ಡ್ ಎಷ್ಟು ಅಡ್ವಾನ್ಸ್ ಆಗಿದೆ. ಏನೂ ಆಗಲ್ಲ ಸುಮ್ಮನಿರು' ಅಂತ ಸಮಾಧಾನ ಮಾಡಿದ. 'ಹೇಯ್! ನಾವೊಂದು ಬೆಟ್ ಕಟ್ಟೋಣ ಮಗು ಹೆಣ್ಣಾದ್ರೆ ನೀನು ನಂಗೆ 500 ರುಪಾಯಿ ಕೊಡು. ಗಂಡಾದ್ರೆ ನಾನು ನಿಂಗೆ 500 ರು. ಕೊಡ್ತೀನಿ' ಅಂದ.
ಅದಕ್ಕೆ ನಾನು ಯೋಚಿಸಿ 'ಸರಿ, ಗಂಡಾದ್ರೆ ನೀನು 500 ರು. ಕೊಡು, ಹೆಣ್ಣಾದ್ರೆ ನಾನು ನಿಂಗೆ ಪಾರ್ಟಿ ಕೊಡಿಸ್ತೀನಿ' ಎಂದೆ. ಸೂರಿ ಅದೇನೋ ಆ ಥರ ಅಂದ. ಅದಕ್ಕೆ ನಾನು, 'ಅಲ್ವೋ ಮಗು ಹೆಣ್ಣಾಗಲೀ, ಗಂಡಾಗಲೀ ನನಗೆ ಎರಡೂ ಒಂದೇ. ಎಲ್ಲ ಸುಸೂತ್ರವಾಗಿ ಆದರೆ ಹೇಗಿದ್ದರೂ ಎಲ್ಲರಿಗೆ ಸ್ವೀಟ್ ಕೊಟ್ಟೇ ಕೊಡ್ತೀನಿ. ಆದ್ರೆ ಹೆಣ್ಣಾದ್ರೆ ದುಡ್ಡಿನ ಬದಲು ನಿಂಗೆ ಪಾರ್ಟಿ. ಎಷ್ಟು ಬೇಕಾದರೂ ಬಿಲ್ ಮಾಡು' ಎಂದೆ. ಅದಕ್ಕೆ ಸೂರಿ, 'ಸರಿ ನಿನ್ನ ಐಡಿಯಾನೂ ಚೆನ್ನಾಗೇ ಇದೆ. ಹಾಗೇ ಆಗ್ಲಿ ನಿನ್ನಿಷ್ಟ ಕಣೋ' ಎಂದ.
ಹೆರಿಗೆ ದಿನ ಬಂತು. ಪದ್ಮಾಳನ್ನು ಆಸ್ಪತ್ರೆಗೆ ಆಡ್ಮಿಟ್ ಮಾಡಿದ್ದೂ ಆಯ್ತು. ಆಸ್ಪತ್ರೆಯಿಂದ ನನಗೆ ಆಫೀಸಿಗೆ ಕರೆಯೂ ಬಂತು ಹೆರಿಗೆ ಸುಸೂತ್ರವಾಗಿ ಆಗಿದೆ ಅಂತ. ನಾನು ಖುಷಿಯಾಗಿ ಆಸ್ಪತ್ರೆಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಅಲ್ಲಿಂದ ಸೀದಾ ಸ್ವೀಟ್ ಹಿಡಿದುಕೊಂಡು ಆಫೀಸಿಗೆ ಹೋದೆ. ಎಲ್ಲರಿಗೂ ಸ್ವೀಟ್ ಕೊಟ್ಟು ಸೂರಿಯನ್ನು ಹುಡುಕುತ್ತಾ ಬಂದಾಗ ಆಫೀಸಿನ ಹೊರಗೆ ಸಿಕ್ಕ. ಅವನಿಗೂ ಸ್ವೀಟ್ ಕೊಟ್ಟು 'ಸೂರಿ 500 ರು. ತೆಗಿ' ಅಂತ ಅಂದೆ. ಅದಕ್ಕೆ ಅವನು 'ಓ ಗೊತ್ತಾಯ್ತು ಬಿಡೋ. ನಾನು ಬೆಟ್‌ನಲ್ಲಿ ಸೋತೆನಾ ಕಂಗ್ರಾಟ್ಸ್' ಅಂತ ಹೇಳಿ 500 ರು. ತೆಗೆದು ಕೊಟ್ಟ. 'ಅವನನ್ನು ಕರೆದು ಬಾರೋ, ನಿನಗೆ ಪಾರ್ಟಿ ಕೊಡೀಸ್ತೀನಿ' ಅಂತ ಅಂದೆ.
'ಯಾಕೋ ನಾನು ತಾನೇ ಸೋತಿದ್ದು; ಇನ್ನು ಪಾರ್ಟಿ ಯಾಕೆ?' ಅಂತ ಅಂದ. 'ಇರಲಿ ಬಾರೋ' ಅಂತ ಕರೆದುಕೊಂಡು ಹೋಗಿ ಅವನ 500 ರು.ನಲ್ಲಿ ಅವನಿಗೆ ಊಟ ಮಾಡಿಸಿದೆ. ಬಿಲ್ ಕೊಟ್ಟು ಹೊರ ಬರುವಾಗ ನಿಜ ಸ್ಫೋಟಿಸಿದೆ! ನನಗೆ ಹುಟ್ಟಿದ್ದು ಅವಳಿಜವಳಿ ಮಕ್ಕಳು! ಒಂದು ಗಂಡು- ಒಂದು ಹೆಣ್ಣು! ಬೆಟ್‌ನಲ್ಲಿ ನಾನೂ ಗೆಲ್ಲಲಿಲ್ಲ, ಅವನೂ ಸೋಲಲಿಲ್ಲ ಅಥವಾ ಇಬ್ರೂ ಗೆದ್ದಿದ್ವಿ.
-ಡಾ. ರಶ್ಮಿ ಭಟ್ ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

