ನ್ಯಾನೋ ಕಥೆಗಳು

ಜೀವನ ಪ್ರೀತಿ
ಪುಟ್ಟ ಮಗು ನಗುತ್ತಿತ್ತು. ಬುದ್ಧಿವಂತ ಜಗತ್ತು ಅಳುವಾಗ.
ವ್ಯತಿರಿಕ್ತ
ಕಲ್ಲು ಎಸೆದೆ ಕಾಣದ ಹಣ್ಣಿಗೆ. ಮಣ್ಣು ತೆಗೆದೆ ಸಾಯದ ಹೆಣಕ್ಕೆ.
ಅರ್ಥವೇ ಇಲ್ಲ
ಅರ್ಥವಾಗದ್ದಕ್ಕೆ 'ಅರ್ಥವೇ ಇಲ್ಲ' ಎಂಬ ವಿಮರ್ಶೆ ಬರೆದಿಟ್ಟು ಬಿಟ್ಟರೆ ನಾವು ನಿರಾಳ. ಅರ್ಥ ಮಾಡಿಕೊಳ್ಳುವವರು ತೀರಾ ವಿರಳ.
ಸಂತಾಪ
ಏನೂ ಇಲ್ಲದ ದಿನ ನೋವಿಗೆ ಬರಲು ಹೇಳಿದೆ. ನೋವು ಬಂತು. ನಲಿವಿನ ಶವಕ್ಕೆ ಹೂಮಾಲೆ ಹಾಕಿ ಹೊರಟಿತು.
ಕಸರತ್ತು
ಸಾಚಾತನದ ಒಡೆಯನಾಗಲು ಹೊರಟ ಅವನು ತನ್ನ ಮನಸ್ಸಿನ ಪದಕೋಶದಿಂದ ಸೊಂಟದ ಕೆಳಗಿನ ಮಾತುಗಳನ್ನು ಉಚ್ಛಾಟಿಸಿದ.
ಕನಸು
ರಾತ್ರಿ ಒಬ್ಬನೇ ಮಲಗಿದ್ದ. ಮಧ್ಯರಾತ್ರಿ ಯಾರೋ ಬಂದರು. ಮುದ್ದಿಸಿ ಹೋದರು, ಮುಂಜಾನೆ ಮತ್ತವನು ಏಕಾಂಗಿ.
ಕೊನೆ
ಎಲ್ಲದಕ್ಕೂ ಕೊನೆ ಎಂಬುದು ಇರಲೇಬೇಕು ಎಂಬ ವಾದ ಒಪ್ಪದ ಅವನು ಕೊನೆ ಇರದ ಹಾದಿಯಲ್ಲಿ ಸಾಗಿದ. ಕಡಲು ಅವನನ್ನು ನೋಡಿ ನಕ್ಕಿತು.
- ಎಚ್.ಕೆ. ಶರತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


