ನಗಬೇಕಮ್ಮಾ ನಗಬೇಕು
ಗುಂಡಿ: ಸಾರ್... ನಿನ್ನೆ ರಾತ್ರಿ ಕಳ್ಳ ಮನೆಗೆ ಬಂದು ಎಲ್ಲ ದೋಚಿಕೊಂಡು ಹೋಗ್ಬಿಟ್ಟಾ ಸಾರ್...
ಪೋಲಿಸ್: ಆದ್ರೆ ನಿಮ್ಮ ಬಳಿ ಪಿಸ್ತೂಲ್ ಇತ್ತಲ್ಲಾ ಮೇಡಂ?
ಗುಂಡಿ: ಇತ್ತು ಸಾರ್... ಅದನ್ನು ಬಚ್ಚಿಟ್ಕೊಂಡು ಬಿಟ್ಟೆ. ಇಲ್ಲಾಂದ್ರೆ ಅದು ಕೂಡಾ ಕಳ್ಳನ ಪಾಲಾಗ್ತಿತ್ತು.
-
ಗುಂಡ ಅಡುಗೆ ಮನೆಗೆ ಹೋಗಿ ಸಕ್ಕರೆ ಡಬ್ಬವನ್ನು ಓಪನ್ ಮಾಡಿ, ನೋಡಿ ಮತ್ತೆ ಮುಚ್ಚಿದ. ಪ್ರತಿ ಒಂದು ಗಂಟೆಗೆ ಒಂದು ಬಾರಿ ಈ ರೀತಿ ಮಾಡುತ್ತಿದ್ದ. ಇದನ್ನೆಲ್ಲ ಗಮನಿಸುತ್ತಿದ್ದ ಗುಂಡನ ಮಡದಿ ಕೇಳಿದಳು; 'ರೀ ನಾನೂ ಆವಾಗಿಂದ ನೋಡ್ತಾನೆ ಇದ್ದೀನಿ, ಸಕ್ಕರೆ ಡಬ್ಬ ಓಪನ್ ಮಾಡ್ತೀರಾ, ನೋಡ್ತಿರಾ, ಮತ್ತೆ ಮುಚ್ಚುತ್ತೀರಾ. ಏನು ಮಾಡ್ತಾ ಇದ್ದೀರಾ ನೀವು?
ಗುಂಡ: ಡಾಕ್ಟರ್ ಹೇಳಿದ್ದಾರೆ ಪ್ರತಿ ಗಂಟೆಗೊಮ್ಮೆ ಶುಗರ್ ಲೆವೆಲ್ ಚೆಕ್ ಮಾಡೀಂತಾ!
-
ಆಗಾಗ ಭಿಕ್ಷುಕನೊಬ್ಬನಿಗೆ ಭಿಕ್ಷೆ ನೀಡುತ್ತಿದ್ದ ವ್ಯಕ್ತಿಗೆ ಆ ದಿನ ಒಂದು ಅಚ್ಚರಿ ಕಾದಿತ್ತು. ಭಿಕ್ಷುಕ ಎಂದಿನಂತೆ ತಾನು ಕುಳಿತಿದ್ದ ಜಾಗದಲ್ಲಿ ಒಂದು ಪಾತ್ರೆಯ ಬದಲು, ಎರಡು ಪಾತ್ರೆ ಇಟ್ಟಿದ್ದ.
ವ್ಯಕ್ತಿ: ಏನಪ್ಪಾ, ಒಂದು ಪಾತ್ರೆಯ ಬದಲು ಎರಡು ಪಾತ್ರೆ ಇಟ್ಟಿದ್ದೀಯಲ್ಲ, ಯಾಕೆ?
ಭಿಕ್ಷುಕ: ನಿಜ ಸಾರ್, ಇತ್ತೀಚೆಗೆ ಬಿಸಿನೆಸ್ ಚೆನ್ನಾಗಿದೆ. ಆದ್ದರಿಂದ ಬ್ರಾಂಚ್ ಆಫೀಸ್ ಓಪನ್ ಮಾಡಿದ್ದೀನಿ!
-
ಅಮ್ಮ: ಯಾಕೋ ಪುಟ್ಟ ಶಾಲೆಯಿಂದ ಇಷ್ಟು ಬೇಗನೆ ಬಂದಿದ್ದೀಯಾ? ಶಾಲೆ ಬೇಗನೆ ಬಿಡ್ತಾ?
ಪುಟ್ಟ: ಹೌದಮ್ಮ, ಮಿಸ್ ಒಂದು ಪ್ರಶ್ನೆ ಕೇಳಿದ್ದರು. ನಾನು ಅದಕ್ಕೆ ಉತ್ತರ ಕೊಡದಿದ್ದರಿಂದ ಕ್ಲಾಸಿನಿಂದ ಹೊರಗಟ್ಟಿದರು.
ಅಮ್ಮ: ಹೌದೇನೋ... ಯಾವ ಪ್ರಶ್ನೆ ಕೇಳಿದರು?
ಪುಟ್ಟ: ಮಿಸ್ಸು, ನನ್ನ ಮೇಲೆ ಚಾಕ್‌ಪೀಸ್ ಎಸೆದದ್ದು ಯಾರೆಂದು ಕೇಳಿದ್ರು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

