ಮಕರಂದ/ದೋಣಿ

ನಂಬಿಕೆ

Published On :

ಆ ಹಳ್ಳಿಯಲ್ಲಿ ಬರಗಾಲ ತಾಂಡವವಾಡುತ್ತಿತ್ತು. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಮಳೆಗಾಗಿ ನಿರೀಕ್ಷಿಸಿ  ಬತ್ತಿ ಹೋದ ಕಣ್ಣೀರು, ಭೂಮಿ ತಾಯಿಯ ಬೆಂದೊಡಲ ದಾಹ, ಸಾವು ನೋವುಗಳ ಸಂಕಟದ ನಡುವೆ ಹಳ್ಳಿ ಜನರು ಕೊನೆಯ ಪ್ರಯತ್ನವೆಂಬಂತೆ ಹೋಮವೊಂದನ್ನು ನಡೆಸಲು ಮುಂದಾದರು. ಇತ್ತ ಮಳೆಗಾಗಿ ಹೋಮ ಶುರುವಾಗುತ್ತಿದ್ದಂತೆ ಹಳ್ಳಿ ಜನರೆಲ್ಲ ನಿರೀಕ್ಷೆಯ ಭಾವ ಹೊತ್ತು ದೇವರನ್ನು ಭಕ್ತಿಯಿಂದ ಬೇಡುತ್ತಿದ್ದರೆ, ಒಬ್ಬ ಬಾಲಕ ಮಾತ್ರ ಕೊಡೆ ಹಿಡಿದುಕೊಂಡು ಆಕಾಶವನ್ನೇ ದಿಟ್ಟಿಸಿ ನೋಡುತ್ತಿದ್ದಾನೆ.

ಊಟದ ಸಮಯ
ಬಹುಮಹಡಿ ಕಟ್ಟಡದ ಒಂದು ಫ್ಲಾಟ್‌ನಲ್ಲಿ 'ದೀಪು.. ಬಡಿಸಿಟ್ಟ ಅನ್ನ ಎಲ್ಲಾ ಆರತಾ ಇದೆ, ಊಟದ ಸಮಯ ಮೀರಿಹೋಗ್ತಾ ಇದೆ. ಬಾ ಮರಿ ಊಟಕ್ಕೆ' ಅಮ್ಮನ ಪ್ರೀತಿಯ ಕರೆ. ಕಂಪ್ಯೂಟರ್ ಗೇಮ್‌ನಲ್ಲಿ ದೀಪುಗೆ ಊಟದ ಕಡೆ ಲಕ್ಷ್ಯವಿಲ್ಲ. ಅಲ್ಲೇ ಕಟ್ಟಡದ ಕೆಳಗೆ ಗುಡಿಸಿಲೊಂದರ ಮಂದ ಬೆಳಕಿನಲ್ಲಿ ಅರೆ ಬೆತ್ತಲ ಎಳೆ ಹುಡುಗನಿಗೆ ಅಂದಾದರೂ ಹಿಡಿ ಅನ್ನ ಸಿಕ್ಕರೆ ಅದೇ ಅವನಿಗೆ ಊಟದ ಸಮಯ.

ಬಂದ್ ಗಲಾಟೆ
ವಿರೋಧ ಪಕ್ಷ ನೀಡಿದ ಬಂದ್ ಕರೆಗೆ ಊರೊಳಗೆಲ್ಲಾ ಗಲಾಟೆ ಎಬ್ಬಿಸಲು ಇವನಿಗೂ ಬುಲಾವ್ ಬಂದಿತ್ತು. ಒಂದು ಪೆಗ್ ಏರಿಸಿ ತನ್ನ ಸಂಗಡಿಗರೊಂದಿಗೆ ಎರಡು ಬಸ್ಸಿಗೆ ಬೆಂಕಿ ಹಚ್ಚಿದ. ವಿಜಯೋತ್ಸವದ ನಗೆ ಬೀರುತ್ತ  ಆವೇಶದಿಂದ ಎಲ್ಲರ ಜೊತೆ ಸಿಕ್ಕ ಸಿಕ್ಕ ಅಂಗಡಿ ಗಾಜುಗಳಿಗೆ ಕಲ್ಲು ಎಸೆಯುತ್ತ ಓಡತೊಡಗಿದ. ಇವನು ಹೊಡೆದ ಕಲ್ಲೊಂದು ಅಲ್ಲೇ ಅಂಗಡಿಯ ಒಳಗಿದ್ದ ಮಗನ ತಲೆಗೆ ಬಡಿದು ರಕ್ತ ಸುರಿಸುತ್ತ ಎಚ್ಚರ ತಪ್ಪಿ ಬಿದ್ದದ್ದು ಇವನಿಗೆ ಗೊತ್ತೇ ಅಗಲಿಲ್ಲಾ.


- ಆರತಿ ಘಟಿಕಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.