ಮಕರಂದ/ದೋಣಿ

ಕವನ ಜೀವನ

Published On :

ಭಾವನೆಗಳ ಒರೆತದ ರತಿ ಬೆರಳುಗಳ ತುದಿಯಿಂದ
ಅಕ್ಷರಗಳಾಗಿ, ಪದಗಳಾಗಿ, ವಾಕ್ಯಗಳಾಗಿ
ವಯ್ಯಾರವಾಗಿ ಒರಗಿದಾಗ ಜನನ ಕವನ
ಕವನ ಕಣ್ತುಂಬಿದರೂ ಕಿವಿಗಳನ್ನು ಓಲೈಸಿದರೂ
ನಿಧಿನಿಕ್ಷೇಪಗಳು ನಡೆದಾಡಿದ ಸಂತೋಷ
ನವನಾಡಿಗಳನ್ನು ಬಿಗಿದು ಕಟ್ಟಿದ ಬೆನ್ನುಹುರಿಯ ತಂತಿಯನ್ನು
ನಯವಾಗಿ ಮೀಟಿದ ಅನುಭವ
ಕಲ್ಪನೆಯ ಕೂಸು ಸೃಷ್ಟಿಸುವ ಇಂದ್ರಜಾಲದಲ್ಲಿ
ನೋವು ಒಮ್ಮೆ ಕೆನೆದರೂ-
ಒಮ್ಮೆ ಕಾಲು ಮುರಿದ ಕುದುರೆಯಾಗುತ್ತೆ
ಆನಂದವು ಮರುಭೂಮಿಯಲ್ಲಿ ಓಯಸಿಸ್ ಆದರೆ
ದುಃಖವು ಹನಿಸಿದ ಹನಿಗಳು ನದಿಗಳಾಗಿ ಹರಿಯುತ್ತವೆ
ಮನೋಸಮುದ್ರ ಮಥನದಲ್ಲಿ ವಿಷಾದ ಗರಳವಾದರೂ
ವಿನೋದ ಮಧುಪಾನದ ಪಾತ್ರೆಯಾಗುತ್ತದೆ
ವಿಯೋಗ ವಿರಹವು ಗ್ರೀಷ್ಮತಾಪವಾದಾಗ
ಸರಸ ಸಮಾಗಮವು ಚೈತ್ರದ ಹೂಬನಗಳಾಗುತ್ತವೆ
ಹೀಗೆ ಕಲ್ಪನೆಯ ಕೂಸಿನ ಸೃಷ್ಟಿಯು ಚಕ್ರತೀರ್ಥವಾಗುತ್ತದೆ
ಆ ಸುಳಿಯಲ್ಲಿ ಕವನಗಳು ಏಕವಾಗಿ ಅನೇಕವಾಗುತ್ತವೆ
ಅನೇಕವಾಗಿ ಮತ್ತೆ ಏಕವಾಗುತ್ತವೆ
ಹಾಗೆ ಸುತ್ತುತ್ತಾ ಕವನ ಜೀವನವಾಗುತ್ತೆ
ಕಡೆಗೆ ಜೀವನವೇ ಕವನವಾಗುತ್ತದೆ.


-ರೋಹಿಣಿ ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.