ಮಕರಂದ/ದೋಣಿ

ನಗಬೇಕಮ್ಮಾ ನಗಬೇಕು

Published On :

=     Love is blind @ ಅಂತಾರೆ ಏನಕ್ಕೆ ಗೊತ್ತಾ? ನಮ್ಮ ಮುಖ ನೋಡುವ ಮುಂಚೆನೇ ಅಪ್ಪ ಅಮ್ಮ ನಮ್ಮನ್ನು ಪ್ರೀತಿಸಲು ಶುರುಮಾಡಿರುತ್ತಾರಲ್ಲಾ? ಅದಕ್ಕೆ!
=     'ಪ್ರಿಯೆ, ಜೀವನವಿಡೀ ಹೀಗೇ ನಗುನಗ್ತಾ ಇರ್ತೀಯಲ್ಲ? ನನ್ನ ಮೇಲೆ ಸಿಡುಕೋದು ಗೊಣಗೋದು ಮಾಡೋಲ್ಲ ಅಂತ ದೇವರ ಮುಂದೆ ಆಣೆ ಮಾಡ್ತೀಯ?' ಹುಡುಗ ಆಸೆಯಿಂದ ಅವಳನ್ನು ಕೇಳಿದ.
    'ಪ್ರಿಯಾ, ನಾನು ನಿನ್ನ ಮದುವೆ ಆಗ್ತಾ ಇದ್ದೀನಿ ಅನ್ನೋದನ್ನು ಮರೆತೇ ಬಿಟ್ಟೆಯಾ?' ಹುಡುಗಿ ನೆನಪಿಸಿದಳು.
=     ಮ್ಯಾರಾಥಾನ್ ರೇಸ್ ನೋಡಲು ಬಂದಿದ್ದ ಪರ್ಗತ್ ಸಿಂಗ್ ಪಕ್ಕದಲ್ಲಿ ನಿಂತಿದ್ದವನನ್ನು ಕೇಳಿದ,
    'ಯಾಕೆ ಎಲ್ಲಾ ಓಡ್ತಿದ್ದಾರೆ?' ಪಕ್ಕದಲ್ಲಿದ್ದವ 'ಅಲ್ಲಿ ಮ್ಯಾರಾಥಾನ್ ನಡೀತಿದೆ. ರೇಸಲ್ಲಿ ಗೆದ್ದವನಿಗೆ ಟ್ರೋಫಿ ಕೊಡುತ್ತಾರೆ' ಎಂದ. ಅದಕ್ಕೆ ಪರ್ಗತ್ ಸಿಂಗ್, 'ಅವನೊಬ್ಬನಿಗೇ ಟ್ರೋಫಿ ಕೊಡುವುದಾದರೆ, ಹುಚ್ಚರಂತೆ ಉಳಿದವರು ಏಕೆ ಓಡಬೇಕು?"
=     ಬಲ್ಚಿತ್ ಸಿಂಗ್ ಗಹಗಹಿಸಿ ನಗುತ್ತಿರುತ್ತಾನೆ. ಏಕೆಂದು ಸ್ನೇಹಿತ ಕೇಳಿದಾಗ, 'ನಿನ್ನೆ ರಾತ್ರಿ ಸೊಳ್ಳೆಗಳನ್ನು ಮುರ್ಖರನ್ನಾಗಿ ಮಾಡಿದೆ' ಅಂತ ಮಾಳಿಗೆ ಕಿತ್ತುಹೋಗುವಂತೆ ನಗು ಮುಂದುವರೆಸಿದ. 'ಯಾಕೆ ಏನಾಯ್ತು?' ಅಂತ ಸ್ನೇಹಿತ ಪ್ರಶ್ನಿಸುತ್ತಾನೆ. ಅದಕ್ಕೆ ಬಲ್ಚಿತ್‌ನ ಉತ್ತರ: 'ಹಾಸಿಗೆಗೆ ಸೊಳ್ಳೆ ಪರದೆ ಕಟ್ಟಿ ನಾನು ಹೊರಗಡೆ ಮಲಗಿಬಿಟ್ಟೆ!'
=     ಗುಂಡ ಮತ್ತು ಅವನ ಹೆಂಡತಿ ಬಟ್ಟೆ ಅಂಗಡಿಯಲ್ಲಿದ್ದರು.
    ಗುಂಡ: ಸೀರೆಯನ್ನು ನೀನೆ ಆರಿಸು. ನೀನೇ ತಾನೇ ಉಡೋದು...
    ಗುಂಡಿ: ಪರವಾಗಿಲ್ಲ, ನೀವೇ ಆರಿಸಿ. ನೀವೇ ತಾನೇ ಒಗೆಯೋದು!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.