ಮಕರಂದ/ದೋಣಿ

ನಿನಗಾಗಿ ಕಾಯುತ್ತಿರುವೆ...

ಯಾರಿಗೂ ಜಾಗವಿಲ್ಲದ ಈ ಮನಸ್ಸಿನೊಳಗೆ ಅಷ್ಟು ಸುಲಭವಾಗಿ ಹೇಗೋ ಬಂದೆ ನೀನು? ಯಾಕೋ ಹಾಗ್ ಕಾಡ್ತಿಯಾ ಪುಟ್ಟ? ...

ನಿನಗಾಗಿ ಕಾಯುತ್ತಿರುವೆ...
Published On :

ಯಾರಿಗೂ ಜಾಗವಿಲ್ಲದ ಈ ಮನಸ್ಸಿನೊಳಗೆ ಅಷ್ಟು ಸುಲಭವಾಗಿ ಹೇಗೋ ಬಂದೆ ನೀನು? ಯಾಕೋ ಹಾಗ್ ಕಾಡ್ತಿಯಾ ಪುಟ್ಟ? ನನ್ನ ನೆನಪಲ್ಲೇ, ಮನಸಲ್ಲೇ ಇದಿಯಾ. ಆದರೆ ನನ್ನ ಕಣ್ಣಿಂದ ಮಾತ್ರ ದೂರ ಇದೀಯ. ನಿನ್ನ ನೋಡ್ಬೇಕು ಅಂತ ಮನಸ್ಸು ಪರಿತಪಿಸ್ತಾ ಇದೆ.
ಈ ಮುಂಗಾರು ಶುರುವಾದ ಗುಂಗಿನಲ್ಲೇ ಮನಸ್ಸು ಸುರಿಸುತ್ತಿದೆ ನಿನ್ನ ನೆನಪಿನ ಸುರಿಮಳೆ. ಬಂಗಾರಾ, ನಿನ್ನ ನೋಡ್ಬೇಕು, ನಿನ್ನ ಕೈ ಹಿಡ್ಕೊಂಡು ನಿನ್ನ ಜೊತೆ ಐಸ್‌ಕ್ರೀಮ್ ತಿಂತಾ ಮಳೆಯಲ್ಲಿ ನೆನ್ಕೊಂಡು ನಿನ್ನ ಜೊತೆ ಒಂದಷ್ಟು ದೂರ ಹೋಗಬೇಕು ಅನ್ನೋ ಆಸೆ ಚಿಗುರೊಡೆದು ಬಳ್ಳಿಯಾಗಿ ಹಬ್ಬುತಾ ಇದೆ. ದಿನದಿನಕ್ಕೆ ಈ ಕನಸು ಎರಡರಷ್ಟಾಗ್ತಿದೆ. ಆದರೆ ನೀನು ಮಾತ್ರ ನನ್ನ ಬಿಟ್ಟು ಎಷ್ಟು ದೂರ ಇದೀಯಾ...? ನನ್ನ ನೆನಪು ಇಲ್ವ ನಿಂಗೆ? ನಿನಗೆ ನನ್ನ ನೋಡ್ಬೇಕು ಅಂತ ಅನ್ಸಲ್ವ ಹೇಳು ಪುಟ್ಟಾ? ನಿನ್ನ ನೋಡಿ ಒಂದು ತಿಂಗಳು ಆಯ್ತು, ಗೊತ್ತೇನೋ ನಿಂಗೆ? ಫೋನ್ ಮಾಡಿದ್ರೆ ನಾನು ಸ್ವಲ್ಪ ಬ್ಯುಸಿ ಇದೀನಿ ಅಂತ ಹಾಗೇ ಫೋನ್ ಕಟ್ ಮಾಡ್ತಿಯಾ. ನನ್ಗೆ ಕೋಪ ಬರುತ್ತೆ. ನಿನ್ನ ಹತ್ರ ಜಗಳ ಮಾಡ್ತೀನಿ. ನಿಂಗೂ ಕೋಪ ಬರಿಸ್ತೀನಿ, ಬೈಸ್ಕೊಂಡು ಸುಮ್ನಾಗ್ತೀನಿ. ಎಷ್ಟೋ ಸಾರಿ ನೀನ್ ಮಾತಾಡ್ಲಿಲ್ಲ ಅಂತ ಬೇಜಾರಾಗಿ ಅತ್ತಿದ್ದೀನಿ ಗೊತ್ತಾ? ನಂಗೆ ಅಂತ ನನ್ನೋರು ಯಾರೂ ಇಲ್ಲ. ನೀನೋಬ್ಬನೇ ಕಣೋ ಬಂಗಾರ ನಂಗೆ ಅಂತ ಇರೋ ಜೀವ. ನಿನ್ ಜೊತೆ ಅಲ್ದೆ ಇನ್ಯಾರ್ ಜೊತೆನೋ ಮಾತಾಡ್ಲಿ!! ನೀನೇ ಹೇಳು... ಈಗ ಕಾಲೇಜು ಬೇರೆ ಮುಗೀತು. ನನ್ನ ಫ್ರೆಂಡ್ಸ್ ಕೂಡ ನನ್ ಜೊತೆ ಇಲ್ಲ. ಮನಸ್ಸಿಗೆ ಎಷ್ಟು ನೋವಾಗುತ್ತೆ ಗೊತ್ತಾ? ನಿನ್ನ ಹತ್ರ ಮಾತಾಡ್ತಾ ಆ ನೋವು ಮರಿತೀನಿ ನಾನು....
ನನ್ನಪ್ಪ ಅಮ್ಮ ಎಲ್ಲ ನೀನೇ ಕಣೋ.... ನಿನ್ನ ನೋಡ್ದೇನೇ ಇರೋಕೆ ನಂಗೆ ಆಗಲ್ಲ ಕಣೋ. ಮನಸಲ್ಲಿ ಏನೋ ಒಂಥರಾ ಗೊಂದಲ. ನೀರಿಲ್ಲದೆ ಮೀನು ಹೇಗೆ ಒದ್ದಾಡುತ್ತೋ ಹಾಗೇ ನಿನ್ನ ನೋಡ್ದೆ ನನ್ನ ಮನಸ್ಸು ವಿಲವಿಲ ಅಂತ ಒದ್ದಾಡ್ತಿದೆ. ಬೇಗ ಬಾರೋ ನೋಡ್ಬೇಕು. ನನ್ನ ಕಣ್ಣ ತುಂಬ್ಕೋಬೇಕು. ಈ ಹೃದಯ ಹಾಡ್ತಿದೆ ಕೇಳೋ. ಮಳೆಗಾಲದಲ್ಲಿ ಸೂರ್ಯನ ಕಿರಣಗಳ ಸ್ಪರ್ಶವಿಲ್ಲದೇ ಚಳಿಗೆ ಮುದುಡಿಕೊಂಡಿರುವಂತೆ ನಿನ್ನ ಕಾಣದೇ ಮಬ್ಬಲ್ಲಿ ಕೂತಂತಾಗಿದೆ. ಗೆಳೆಯಾ, ಸೂರ್ಯನ ಕಿರಣದಂತಿರುವ ಆ ನಿನ್ನ ಕಣ್ಣ ಹೊಳಪಿನ ಕಿರಣಗಳನ್ನು ನನ್ನ ಮೇಲೆ ಒಮ್ಮೆ ಹಾಯಿಸು. ಆ ಕತ್ತಲಿನಿಂದ ಹೊರಬಂದು ನಿನ್ನ ಮೊಗವನ್ನು ನೋಡಿ ಕಣ್ತುಂಬಿಕೊಳ್ಳುವೆ.
ನಿನಗಾಗಿ ಕಾಯುತ್ತಿರುವ ಇಂತಿ ನಿನ್ನವಳು.

-ಶಿಲ್ಪ ಎಸ್ ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.