ಮಕರಂದ/ದೋಣಿ

ನ್ಯಾನೋ ಕಥೆಗಳು

Published On :
  1. ಒಬ್ಬ ಸೂರ್ಯನ ಜನನಕ್ಕೆ ಕೋಟಿ ಇಬ್ಬನಿ ಹನಿಗಳು ಸಾವನ್ನಪ್ಪಿದವು!
  2. ಮದುವೆ ಮಂಟಪದಲ್ಲಿ ಉಂಡೆದ್ದವರ ಎಲೆಗಳಲ್ಲಿ ಚಲ್ಲಾಡಿದ ಭಾರೀ ಭೋಜನ, ಬಡವನ ಹಸಿವನ್ನು ಅಣಕಿಸುತ್ತಿದೆ.
  3. ಶಬರಿಯಂತೆ ಅವನಿಗಾಗಿ ಕಾಯುತ್ತಾ ಕುಳಿತವಳ ತಲೆಯಲ್ಲೀಗ ನೆರೆಗೂದಲು!
  4. ಕ್ಯಾಲೆಂಡರ್ ಬದಲಾಯಿತು, ಬದುಕಿನ್ನೂ ಹಾಗೇ ಇದೆ!
  5. ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಿರುತ್ತವಂತೆ!? ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡರು. ಈಗ ಸ್ವರ್ಗದಲ್ಲಿ ಅವರ ಮದುವೆ, ಮಿಲನ ಇತ್ಯಾದಿ...
  6. ಅವನು ಅವಳ ಕೆನ್ನೆಗೆ ಮುತ್ತಿಡುವ ಕ್ಷಣ, ಮನೆ ಮುಂದಿನ ಮಲ್ಲಿಗೆ ಗಿಡದಲ್ಲಿ ಮೊಗ್ಗೊಂದು ಅರಳಿ, ಗಾಳಿಯ ಜೊತೆ ಸುಗಂಧ ಪಸರಿಸಿತು !
  7. ಮನೆಯ ಕಳ್ಳತನಕ್ಕೆಂದು ಬಂದವನ ಮನಸನ್ನು ಆ ಮನೆಯ ಯಜಮಾನನ ಮಗಳು ಕದ್ದುಬಿಟ್ಟಳು !
  8. ನೀರಿಗಾಗಿ ಬಿಂದಿಗೆ ಹಿಡಿದು ಸಾಲುಗಟ್ಟಿ ನಿಂತ ಜನರನ್ನು ನೋಡಿದ ಸಹೃದಯಿ ಮೋಡವೊಂದು ಬಾನಿನಿಂದ ಜಿಗಿಯಿತು !
  9. ಚಲಿಸುತ್ತಿದ್ದ ಬಸ್ಸನ್ನು ಹತ್ತಲು ಓಡುತ್ತಿದ್ದವನನ್ನು ಆಂಬುಲೆನ್ಸ್ ಹೊತ್ತೊಯ್ಯಿತು !

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.