ಮಕರಂದ/ದೋಣಿ

ವಿವಾಹ ಪೀಡಿತರಿಗೆ ಸಹಾಯ ಮಾಡೀ!

ಇದು 70ರ ದಶಕದ ಮಾತು. ಆಗ ಭೀಕರ ಬರಗಾಲವು ಕನ್ನಡ ನಾಡನ್ನು ಕಾಡಿತ್ತು. ಬರ ಅಂದಮೇಲೆ ವಿವರಿಸಿ ಹೇಳಬೇಕೆ?..

Published On :

ಇದು 70ರ ದಶಕದ ಮಾತು. ಆಗ ಭೀಕರ ಬರಗಾಲವು ಕನ್ನಡ ನಾಡನ್ನು ಕಾಡಿತ್ತು. ಬರ ಅಂದಮೇಲೆ ವಿವರಿಸಿ ಹೇಳಬೇಕೆ? ಮಳೆ- ಬೆಳೆ ಎರಡೂ ಇಲ್ಲದೆ ಜನ ತತ್ತರಿಸಿ ಹೋಗಿದ್ದರು. ಕುಡಿಯಲು ನೀರು ಸಿಗದ ಕಾರಣದಿಂದ ಅದೆಷ್ಟೋ ಜಾನುವಾರು ಸತ್ತು ಹೋದವು. ಹಸಿವು, ಹೆದರಿಕೆ ಮತ್ತು ಅಭದ್ರತೆಯಿಂದ ನಾಗರಿಕರು ತತ್ತರಿಸಿ ಹೋಗಿದ್ದರು.
ಇಂಥ ಸಂದರ್ಭದಲ್ಲಿ, ನಾಡಿನ ಜನತೆಗೆ ನೆರವಾಗಬೇಕೆಂಬ ಸದಾಶಯದಿಂದ ಪಾದಯಾತ್ರೆ ನಡೆಸಿ, ಉದ್ಯಮಿಗಳು ಹಾಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವು ನಿರ್ಧರಿಸಿತು. ಪಾದಯಾತ್ರೆಯ ನೇತೃತ್ವವನ್ನು ವರನಟ ಡಾ॥ ರಾಜ್‌ಕುಮಾರ್ ಅವರು ವಹಿಸುವುದೆಂದೂ ತೀರ್ಮಾನವಾಯಿತು.
ಪಾದಯಾತ್ರೆ ಆರಂಭವಾಯಿತಲ್ಲ; ಆಗ ಕಲಾವಿದರೆಲ್ಲ ಒಂದು ತೀರ್ಮಾನಕ್ಕೆ ಬಂದರು. ವರನಟ ರಾಜ್‌ಕುಮಾರ್ ಅವರು- 'ಬರಗಾಲ ಪೀಡಿತರಿಗೆ' ಎಂದು ಕೂಗಿದಾಗ ಉಳಿದವರೆಲ್ಲ ಒಕ್ಕೊರಲಿನಿಂದ 'ಸಹಾಯ ಮಾಡೀ' ಎಂದು ಕೋರಸ್ ಹೇಳಬೇಕೆಂದು ನಿರ್ಧಾರವಾಯಿತು. ಮೆರವಣಿಗೆಗೆ ಆತ್ಮೀಯ ಸ್ವಾಗತ ಸಿಕ್ಕಿತು. ಬಿಸಿಲೇರಿದಂತೆಲ್ಲ ಪಾದಯಾತ್ರೆ ಹೊರಟಿದ್ದ ಕಲಾವಿದರ ಉತ್ಸಾಹ ತುಸು ತಗ್ಗಿದಂತೆ ಕಾಣಿಸಿತು. ಆಗ ಡಾ॥ ರಾಜ್ ಒಂದು ಉಪಾಯ ಮಾಡಿದರು. ತಮಾಷೆಯ ಮೂಲಕ ಜೊತೆಗಾರರ ಉತ್ಸಾಹ ಹೆಚ್ಚಿಸಬೇಕೆಂದು ನಿರ್ಧರಿಸಿದರು. ಅದುವರೆಗೂ, 'ಬರಗಾಲ ಪೀಡಿತರಿಗೆ' ಎಂದು ಕೂಗುತ್ತಿದ್ದವರು, ಯಾರಿಗೂ ಸಣ್ಣದೊಂದು ಸುಳಿವನ್ನೂ ಕೊಡದೆ- 'ವಿವಾಹ ಪೀಡಿತರಿಗೆ' ಎಂದು ಬಿಟ್ಟರು. ಮರುಕ್ಷಣವೇ ಎಲ್ಲ ಕಲಾವಿದರೂ ಒಕ್ಕೊರಲಿನಿಂದ -'ಸಹಾಯಮಾಡೀ' ಎಂದು ಕೊರಸ್ ಹಾಡಿದರು!
ಅಣ್ಣಾವ್ರ ಮೋಡಿಯ ಮಾತುಗಳಿಂದ ನಾವೆಲ್ಲ ಫೂಲ್ ಆದೆವು ಎಂಬ ವಿಷಯ ಅದೆಷ್ಟೋ ಹೊತ್ತಿನವರೆಗೂ ಹೆಚ್ಚಿನವರಿಗೆ ಗೊತ್ತಾಗಿರಲೇ ಇಲ್ಲ.

ನೀವೂ ಬರೆಯಿರಿ
'ಮಕರಂದ'- ಹನಿಗವನ, ನಾಲ್ಕು ಸಾಲಿನ ಕತೆ, ಮನಸು ತಟ್ಟುವ ಪ್ರೇಮಪತ್ರ. ಆಪ್ತ ಅನಿಸುವ ಪೌರಾಣಿಕ ಪ್ರಸಂಗ, ಅಪರೂಪದ ಛಾಯಾಚಿತ್ರ... ಮುಂತಾದವುಗಳ ಪುಟ್ಟ ಸಂಕಲನ. ಈ ಪುಟಕ್ಕೆ ನೀವೂ ಬರೆಯಿರಿ. ಚಿಕ್ಕ-ಚೊಕ್ಕ ಬರಹಗಳಿಗೆ ಆದ್ಯತೆ. ಬರಹದೊಂದಿಗೆ ನಿಮ್ಮ ವಿಳಾಸ ನಮೂದಿಸಲು ಮರೆಯದಿರಿ. ನಮ್ಮ ವಿಳಾಸ: ಸಂಪಾದಕರು, ಕನ್ನ್ನಡಪ್ರಭ, ಮಕರಂದ ವಿಭಾಗ, ನಂ. 1, ಕ್ವೀನ್ಸ್ ರಸ್ತೆ, ಬೆಂಗಳೂರು-560001. ಇ-ಮೇಲ್: makaranda2012@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.