ಮಕರಂದ/ದೋಣಿ

ನ್ಯಾನೋ ಕಥೆಗಳು

Published On :

ಹಸಿವು
ಸುಮ್ಮನೆ ಕೂತ ಹಕ್ಕಿಯ ಕಣ್ಣಿಗೆ ಹಸಿವಿನ ಕನಸು ಬಿತ್ತು. ಜೇನುನೊಣ ಹೆಣವಾಗಿ ಅದರ ಉದರ ಸೇರಿತು.

ನಮ್ಮಿಬ್ಬರ ಪ್ರೀತಿ
ನಾನು ನೀರು. ಅವಳು ಕಣ್ಣೀರು, ಪ್ರೀತಿ ಸೂರ್ಯ, ನೋವು ಆವಿ, ನಲಿವು ಬತ್ತದ ಬಾವಿ.

ಮನಸ್ಸು
ಅವಳ ಗುಳಿಬಿದ್ದ ಕೆನ್ನೆಯೊಳಗೆ ನನ್ನ ಹಳಿ ತಪ್ಪಿದ ಕನಸು. ಮನಸ್ಸು ಲವಲವಿಕೆ ಪೂಸಿಕೊಂಡ ಕೂಸು.

ತದ್ವಿರುದ್ಧ
ಬೀದಿಯಲ್ಲಿ ಕೊಳೆತ ಹೆಣ. ಮನುಷ್ಯರು ಮೂಗು ಮುಚ್ಚಿಕೊಂಡು ತಿರುಗುತ್ತಿದ್ದಾರೆ. ನಾಯಿಗಳು ಮೂಗಿನ ಹೊಳ್ಳೆ ಅಗಲಿಸಿಕೊಂಡು ಹೋಗುತ್ತಿವೆ.

ಕಾಮ
ಅವನು ದೇವ ಮಾನವ. ಕಳಚಿಟ್ಟ ಕಾಮ ಮತ್ತೆ ಪುಟಿದೆದ್ದದ್ದು ಅವಳ ಹಸಿ ಮೈ ಬೀರಿದ ಪ್ರಭಾವ.

ಮರುಜೀವ
ರಾತ್ರಿ ಸತ್ತ ನಗು ಮುಂಜಾನೆ ಮರುಜೀವ ಪಡೆಯಿತು. ಬದುಕಿನ ಹೊಳೆಯಲ್ಲಿ ಹೊಸ ನೀರು ಹರಿಯಿತು.

ಮಾನ
ಶವವೂ ಮಾನ ಕಳಕೊಂಡಿತು. ಒಳಗಿನದು ಹೊರಬಂದ ಮೇಲೆ.

ಹಸಿವು
ಹಸಿವು ಕಾಡಿತು. ಹೂವು ಹಣ್ಣಿನ ಗುಣಗಾನ ಮಾಡಿತು. ಹಣ್ಣು ಬೀಜ ಬಿತ್ತಿತು. ಬೀಜ ಹೂ ಬಿಡುವ ಗಿಡವಾಯಿತು. ನೋಡು ನೋಡುತ್ತಲೇ ಹಸಿವು ಇಂಗಿತು.

ಮನುಷ್ಯತ್ವ
ಸುಡುವ ಸೂರ್ಯ ಅವಳ ಕಣ್ಣೀರು ಒರೆಸಿದ.

- ಎಚ್.ಕೆ. ಶರತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.