ಮಕರಂದ/ದೋಣಿ

ರಾಮ ಕೇವಲ ರಾಮನಲ್ಲ, ಆತ ಶ್ರೀರಾಮ!

ರಾಮ ಕೇವಲ ರಾಮನಲ್ಲ, ಆತ ಶ್ರೀರಾಮ!
Published On :

ಮೊನ್ನೆ ಬೆಂಗಳೂರಿನ ಅಕ್ಷರನಗರದಲ್ಲೊಂದು ಯಕ್ಷಗಾನ ಪ್ರಸಂಗ 'ಪಂಚವಟಿ- ಶೂರ್ಪನಖಾ ಗರ್ವಭಂಗ'. ಪೆರ್ಲ ಜಗನ್ನಾಥ ಶೆಟ್ಟಿಯವರ ರಾಮ. ರಾಮ - ಸೀತೆ - ಲಕ್ಷ್ಮಣರು ಪಂಚವಟಿಯಲ್ಲಿ ನೆಲೆ ನಿಲ್ಲುವ ಸಂದರ್ಭದಲ್ಲಿ ರಾಮನ ಪೀಠಿಕೆ.
'ತಂದೆಯಾದಂಥ ದಶರಥ ಮಹಾರಾಜ, ಈ ರಾಮನಿಗೆ ಅಯೋಧ್ಯೆಯ ಪಟ್ಟಾಭಿಷೇಕ ಮಾಡುವುದಕ್ಕೆ ಉತ್ಸಾಹದಿಂದ ಉದ್ಯುಕ್ತನಾದರೂ, ಚಿಕ್ಕಮ್ಮ ಕೈಕೇಯಿ ಮಾತೆಗೆ ಸಮಾಧಾನವಿಲ್ಲ.
ಹತ್ತು ಪುಸ್ತಕ ಓದುವುದು ಒಂದೇ. ನಾಲ್ಕು ಊರು ಸುತ್ತುವುದೂ ಒಂದೇ. ಮಗನಾದ ರಾಮ ರಾಜನಾಗುವ ಮೊದಲು, ನಾಲ್ಕಾರು ಊರು ಸುತ್ತಬೇಕು. ಲೋಕಜ್ಞಾನ ಸಂಪಾದಿಸಬೇಕು. ಮತ್ತೆ ರಾಜಾಧಿರಾಜನಾಗಿ ಮೆರೆಯಬೇಕು ಎಂಬ ದೃಷ್ಟಿಯಿಂದ ನನ್ನನ್ನು ವಸವಾಸಕ್ಕೆ ಕಳುಹಿಸಿದಳು. ಅಯೋಧ್ಯೆಯ ಪ್ರಜೆಗಳಿಗಷ್ಟೆ ಅಲ್ಲ, ಕಾಡಿನಲ್ಲಿ ತಪಸ್ಸು ಮಾಡುವ ಋಷಿ- ಮುನಿಗಳಿಗೂ ರಾಮನ ಸೇವೆ ಸಲ್ಲಬೇಕು. ತನ್ಮೂಲಕ ಶಿಷ್ಟರ ರಕ್ಷಣೆಯಾಗಬೇಕು. ದುಷ್ಟರಿಗೆ ಶಿಕ್ಷೆಯಾಗಬೇಕು ಎಂಬ ದೂರಾಲೋಚನೆ ನನ್ನ ಚಿಕ್ಕಮ್ಮನದು. ಲೋಕಸೇವೆಯ ಅವಕಾಶ ಮಾಡಿಕೊಟ್ಟ ಚಿಕ್ಕಮ್ಮ ಕೈಕೇಯಿ ದೇವಿಗೆ ನನ್ನ ನಮನ' ವನವಾಸ ಹೊರಟಾಗ ರಾಮಚಂದ್ರ ಹೇಳುವ ಮಾತುಗಳಿವು!
ಹೇಗಿದೆ ರಾಮನ ಧನಾತ್ಮಕ ಚಿಂತನೆ? ಅದಕ್ಕೇ ಅಲ್ಲವೇ? ರಾಮ ಕೇವಲ ರಾಮನಲ್ಲ, ಆತ 'ಶ್ರೀರಾಮ' ಎನ್ನುವುದು?

- ಸುರೇಖಾ ಭಟ್ ಭೀಮಗುಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.