ಮಕರಂದ/ದೋಣಿ

ನ್ಯಾನೋ ಕಥೆಗಳು

Published On :

ಹುಡುಗಿಯ ಅಣ್ಣನ ದೆಸೆಯಿಂದ, ಹಗಲಿನಲ್ಲಿ ಅವಳ ಮನೆಯ ಮುಂದೆ ಅಡ್ಡಾಡಲು ಸಹ ಹಿಂಜರಿಯುವ ಹುಡುಗ... ನಡುರಾತ್ರಿ ಯಾವ ಎಗ್ಗಿಲ್ಲದೆಯೇ ಅವಳ ಕನಸಿಗೆ ನುಸುಳಿ ಬರುತ್ತಾನೆ!
===
ಮನ ಮೆಚ್ಚಿದವಳನ್ನೇ ಮನಸಾರೆ ಪ್ರೀತಿಸಿ ಮದುವೆಯಾದ... 'ಹೆಂಡತಿ ಪ್ರೇಯಸಿಯಲ್ಲ' ಎಂಬ ಸತ್ಯ ಅವನಿಗೆ ಬಹಳ ಬೇಗನೆ ಅರ್ಥವಾಯ್ತು!
===
ವಿರಹಿಯೊಬ್ಬನ ಸಮಾಧಿಯ ಮೇಲೆ ಹೀಗೆ ಬರೆದಿತ್ತು... 'ಅವಳಿಲ್ಲದೆಯೂ ಬದುಕಿದ್ದಾನೆ!'
===
ಬಡವನ ಗುಡಿಸಲಿನಲ್ಲಿ ಬೆಳದಿಂಗಳಿದೆ... ಮುರುಕು ಸೂರಿನಲ್ಲಿ ಚಂದಿರ ಇಣುಕುತ್ತಿದ್ದಾನೆ !
===
ಹೂವೊಂದು ದುಂಬಿಯ ಧ್ಯಾನಕ್ಕೆ ಕೂತು, ಅರೆ ಜೀವವಾಗಿದೆ... ದುಂಬಿಯನ್ನು, ಮತ್ತೊಂದು ಮಲ್ಲಿಗೆಯ ತೋಟ ಆಹ್ವಾನಿಸುತ್ತಿದೆ... !!
===
ರಾತ್ರಿ ಬಿದ್ದ ಕನಸುಗಳನ್ನುರಿಸಲು ಮುಂಜಾನೆಯೇ ಅವಳ ಮನೆಯಂಗಳಕ್ಕೆ ಓಡಿದೆ... ಆಗಷ್ಟೇ ಅವಳು ಅಂಗಳದ ಕಸ ಗುಡಿಸಿದ್ದಳು !

- ನವೀನ್ ಮಧುಗಿರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.