ಅಮಾಯಕತೆ
ಮನೆಯ ಹಜಾರದಲ್ಲಿ ಕುಳಿತಿದ್ದ ಅಣ್ಣ ತಮ್ಮಂದಿರಿಬ್ಬರ ಮಧ್ಯೆ ಆಸ್ತಿಗಾಗಿ ದೊಡ್ಡ ಜಗಳ ನಡೆಯುತ್ತಿತ್ತು.
ಏನೂ ಅರಿಯದ ಪುಟ್ಟ ಕಂದ "ೆಐಸ್ ಕ್ರೀಂ" ಕೊಡಿಸೆಂದು, ಜಗಳವಾಡುತ್ತಿದ್ದ ದೊಡ್ಡಪ್ಪನ ಪಂಚೆ ಎಳೆಯುತ್ತಿತ್ತು!
ಸ್ವಾತಂತ್ರ್ಯ
'ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟಿದ್ರೂ ನಂಗೆ ಇನ್ನೂ ಯಾಕೆ ಸಿಕ್ಕಿಲ್ಲ' ಅಂತ ಅಕ್ಕಪಕ್ಕದ ಮನೆಯವರಿಗೆ ಕೇಳಿಸುವಂತೆ ಆಕೆ ಕೂಗಾಡುತ್ತಿದ್ದಳು.
'ನಿನ್ನ ಪ್ರಶ್ನೆಗೆ ಉತ್ತರಿಸಲು ಅವಕಾಶ ಕೊಡು' ಎಂದು ಗಂಡ ಅವಳಲ್ಲಿ ಸ್ವಾತಂತ್ರ್ಯ ಬೇಡುತ್ತಿದ್ದ!
ಕನ್ನಡ
'ಕನ್ನಡವನ್ನೇ ಪ್ರೀತಿಸಿ, ಕನ್ನಡವನ್ನೇ ಮಾತಾಡಿ, ಕನ್ನಡ ಬೆಳೆಸಿ' ಎಂದು ಭಾಷಣ ಬಿಗಿಯುತ್ತಿದ್ದವನ ಮೊಬೈಲಿಗೆ ಹೆಂಡತಿ ಕಳಿಸಿದ ಸಂದೇಶ...
'ಆದಷ್ಟು ಬೇಗ ಭಾಷಣ ಮುಗಿಸಿ ಬನ್ನಿ. ನಮ್ಮ ಮಗಳನ್ನು ಆ ಇಂಗ್ಲೀಷ್ ಕಾನ್ವೆಂಟ್‌ಗೆ ಸೇರಿಸಲು ಅರ್ಜಿ ಹಾಕುವ ಕೊನೆಯ ದಿನ ಇವತ್ತು'!
ಪುಸ್ತಕ
ಆಕೆ ಈಗ ತಾನೇ ಬಿಡುಗಡೆ ಹೊಂದಿ ಪ್ರಸಿದ್ಧಿಯಾಗಿದ್ದ ಪುಸ್ತಕವೊಂದನ್ನು ಕೊಂಡು ತಂದು ಓದಲಾರಂಭಿಸಿದಳು.
ಆಗಲೇ ಗೊತ್ತಾಗಿದ್ದು, ಅದರಲ್ಲಿದ್ದವೆಲ್ಲ ಆಕೆ ತಿರಸ್ಕರಿಸಿದ್ದ ಹುಡುಗ ಬರೆದ ಪ್ರೇಮಪತ್ರಗಳು!
- ಸಂತೋಷ ಕುಮಾರ್ ಎಲ್.ಎಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

