ಆ ಜಲಧಾರೆಯ ಮುಂದೆ ಇದೇನ್ ಮಹಾ?
ಗಾಂಧೀಜಿ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಅವರ ಕಾರ್ಯಕಲಾಪದ ನಂತರ ಜತೆಯಲ್ಲಿದ್ದವರು ಸಮೀಪದಲ್ಲಿದ್ದ ಜೋಗ ಜಲಪಾತದ..

ಗಾಂಧೀಜಿ ಒಮ್ಮೆ ಶಿವಮೊಗ್ಗಕ್ಕೆ ಬಂದಿದ್ದರು. ಅವರ ಕಾರ್ಯಕಲಾಪದ ನಂತರ ಜತೆಯಲ್ಲಿದ್ದವರು ಸಮೀಪದಲ್ಲಿದ್ದ ಜೋಗ ಜಲಪಾತದ ಬಗ್ಗೆ ವಿವರಿಸುತ್ತ 'ಇಂಥ ದೊಡ್ಡ ಜಲಪಾತವನ್ನು ಹಿಂದೆಂದೂ ನೀವು ನೋಡಿರುವುದಿಲ್ಲ' ಎಂದರು. ಆಗ ಅವರನ್ನು ಮಧ್ಯದಲ್ಲೇ ತಡೆದ ಗಾಂಧೀಜಿ ಹೇಳಿದರು; 'ನಾನು ಇದಕ್ಕಿಂತ ದೊಡ್ಡ ಅದ್ಭುತ ಜಲಪಾತ ನೋಡಿದ್ದೇನೆ. ನೀವೂ ನೋಡಿರುವಿರಿ. ಅದರ ಮುಂದೆ ಜೋಗದ ಜಲಪಾತ ಯಾವ ಲೆಕ್ಕದ್ದು?'. ಆಗ ಗಾಂಧೀಜಿಯ ಜೊತೆಗಿದ್ದವರು ಪೆಚ್ಚಾಗಿ ಕೇಳಿದರು; 'ಬಾಪೂ, ನಾವು- ನೀವೆಲ್ಲರೂ ನೋಡಿರುವ ಆ ಜಲಪಾತ ಯಾವುದು?' ಎಂದು ಪ್ರಶ್ನಿಸಿದಾಗ ಬಾಪೂ ಉತ್ತರಿಸಿದರು; 'ಆಕಾಶದಿಂದ ಸುರಿಯುವ ಧಾರಾಕಾರ ಮಳೆ'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


