ನ್ಯಾನೋಕಥೆಗಳು
ವೃದ್ಧಾಶ್ರಮದಿಂದ ಅಪ್ಪನನ್ನು ಮನೆಗೆ ಮಗ ಕರೆತಂದಾಗ, ಮೊಮ್ಮಗನಿಗೆ ಬೇಸಿಗೆ ರಜೆ ಬಂದಿತ್ತು. ಶಾಲೆ ಪ್ರಾರಂಭ ಆದಾಗ ಅಪ್ಪನನ್ನು ಆಶ್ರಮಕ್ಕೆ ಸೇರಿಸಲಾಗಿತ್ತು.
ಜಾತ್ಯತೀತ ಪಕ್ಷ ಕಟ್ಟಿದ ನಾಯಕನೊಬ್ಬ, ತನ್ನ ಜಾತಿಯವರಿಗೇ ಆತಿಥ್ಯ, ಆದ್ಯತೆ ಕೊಟ್ಟು ಚುನಾವಣೆಗೆ ಟಿಕೆಟ್ ನೀಡಿದ.
ಶಿವರಾತ್ರಿಯಲ್ಲಿ ಉಪವಾಸ ಮಾಡಿದರೆ ಶಿವ ಐಶ್ವರ್ಯ ನೀಡುತ್ತಾನೆ ಅಮ್ಮ ಹೇಳಿದಳು. 'ಬಡವರು ದಿನಾಲೂ ಉಪವಾಸ ಮಾಡ್ತಾರಲ್ಲ ಅವರಿಗೇಕೆ ಐಶ್ವರ್ಯ ನೀಡಿಲ್ಲ?' ಎಂಬ ಮಗನ ಪ್ರಶ್ನೆಗೆ ಅಮ್ಮನ ಬಳಿ ಉತ್ತರವಿರಲಿಲ್ಲ.
- ಗಂಗಾಚಾರಿ, ಮಾರತಹಳ್ಳಿ
----
ಪ್ರೀತಿಸು
ಹುಡುಗಿಯನ್ನು ಪ್ರೀತಿಸು
ಅವಳ ಸೌಂದರ್ಯ ಕೊಂಡು
ಸಾಕುವ ಶಕ್ತಿ
ನಿನಗಿದ್ದರೆ....
ಹುಡುಗಿಯನ್ನು ಪ್ರೀತಿಸು
ಅವಳು ಹೃದಯ ಒಡೆದರೂ
ತಡೆದುಕೊಳ್ಳುವ ಶಕ್ತಿ
ನಿನಗಿದ್ದರೆ...
ಹುಡುಗಿಯನ್ನು ಪ್ರೀತಿಸು
ಅವಳ ಪ್ರೀತಿ ಇಲಿ ಬಲೆಯಂತಾದರೆ
ಹೊರಬರುವ ಶಕ್ತಿ
ನಿನಗಿದ್ದರೆ...
ಹುಡುಗಿಯನ್ನು ಪ್ರೀತಿಸು
ಅವಳು ದೂರಾದರೆ ಅತ್ತು ಅತ್ತು
ಕಣ್ಣು ಕಳೆದುಕೊಳ್ಳುವ ಶಕ್ತಿ
ನಿನಗಿದ್ದರೆ...
ಹುಡುಗಿಯನ್ನು ಪ್ರೀತಿಸು
ಬರುವ ಕಷ್ಟಗಳನ್ನು
ಎದುರಿಸುವ ಶಕ್ತಿ
ನಿನಗಿದ್ದರೆ...
ಹುಡುಗಿಯನ್ನು ಪ್ರೀತಿಸು
ಅವಳ ನೆನಪಲಿ ನಿರಂತರ
ನೋವು ಅನುಭವಿಸುವ ಶಕ್ತಿ
ನಿನಗಿದ್ದರೆ...
ಹುಡುಗಿಯನ್ನು ಪ್ರೀತಿಸು
ಅವಳು ಹೆಣವಾಗಿಸಿದರೂ ಆರಾಮವಾಗಿ
ಗೋರಿಯಲ್ಲಿ ಮಲಗುವ ಶಕ್ತಿ
ನಿನಗಿದ್ದರೆ...
- ಎ.ಎಸ್.ಹೂಲಗೇರಿ, ಅಂಕೋಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

