ರಾಧೆಯ ಸ್ವಗತ
ಬೇಕಿರಲಿಲ್ಲ ನನಗೆ, ವಿರಹಿಣಿ ರಾಧೆಯ ಪಟ್ಟ
ಪ್ರೇಮದ ಔನ್ನತ್ವಕ್ಕೆ ರಾಧಾ - ಕೃಷ್ಣರ ಮಾದರಿ
ಹದಿನಾರು ಸಾವಿರ ಗೋಪಿಕೆಯರ ವಲ್ಲಭ ಪ್ರೀತಿಸಿದ್ದು ರಾಧೆಯೊಬ್ಬಳನ್ನೇ!
ಇದ್ದರು ರಾಧೆಯ ಗೆಜ್ಜೆಗೂ ದನಿಯಾಗುವವರು, ಕಣ್ಣೋಟಕ್ಕೆ ಸೋತವರು,
ಏಕಾಂತಕ್ಕೆ ಸಂಗಾತಿಯಾಗಬಯಸಿದವರು ಎಷ್ಟೋ!
ಬೇಕಿರಲಿಲ್ಲ ರಾಧೆಗೆ ಆತ್ಮವಂಚನೆ, ಆಕೆ ಆರಾಧಿಸಿದ್ದು
ಒಬ್ಬನೇ ಒಬ್ಬ ಕೃಷ್ಣನನ್ನು
ಗಾಂಧರ್ವ ವಿವಾಹದ ಕೆಲವು ಮಧುರಕ್ಷಣ, ಬಾಲ್ಯದ ಒಡನಾಟವೇ
ನನ್ನ ಸಂಗಾತಿಗಳಾದವು,
ಬೆದರಿದೆಯಾ? ಕೃಷ್ಣ, ಗೀತೆಯ ಸಾರದ ಸಾಲುಗಳಲ್ಲಿ ರಾಧೆಯೂ
ಪಾಲು ಕೇಳುವಳು ಎಂದು?
ಅಳುಕಿದೆಯಾ, ಭಾಮೆ, ರುಕ್ಮಿಣಿಯರೊಡನೆ ಸಲ್ಲಾಪ
ನಿರಾಕರಿಸುವಳು ಎಂದು?
ಅಂಜಿದೆಯಾ, ಧರ್ಮರಕ್ಷಣೆಯಲ್ಲಿ ತನ್ನ ಭೂಮಿಕೆ ಸಲ್ಲಿಸುವಳು ಎಂದು?
ದೇವನಾದರೇನಂತೆ, ನಿನಗೂ ಬೇಕಿತ್ತು ಧರ್ಮರಕ್ಷಣೆಯಲ್ಲಿ
ನಿನಗೊಂದೇ ಗೌರವ, ಪಟ್ಟ!
ತುಳಿಯಲಾರಿರಿ ನೀವು ನಮ್ಮನ್ನು ಶತಶತಮಾನಗಳವರೆಗೆ
ಬಂಧಿಸಲಾರಿರಿ ನಮ್ಮ ಭಾವನೆಗಳನ್ನು ನಿಮ್ಮ ಸಮರ್ಥ ಮಾತುಗಳಲ್ಲಿ
ವೈದ್ಯೆ, ಪೈಲಟ್, ರಾಜಕಾರಣಿ, ಸಮಾಜಸುಧಾರಕಿ
ವೇದಾಂತಿ, ಸಾಹಿತಿ ಇವರೆಲ್ಲಾ ರಾಧೆಯ ಪ್ರತಿನಿಧಿಗಳೇ
ನೋಡಿ ನಮ್ಮತ್ತ ನಿಡುಸುಯ್ಯದಿರು
ದೇವನೆಂಬ ಪಟ್ಟಕ್ಕೆ ಅಪಚಾರವಾದೀತು!
ಉಷಾ ಶಶಿಧರ್, ನಿಟ್ಟೂರು, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

