ನ್ಯಾನೋಕಥೆಗಳು
ಆ ಮನೆಯಲ್ಲಿ ಎಲ್ಲವೂ ಇತ್ತು, ಸಿರಿ, ಸಂಪತ್ತು, ನಗು, ಎಲ್ಲವೂ ಒಮ್ಮೆಗೇ ಮಂಕಾಗಿ ಕತ್ತಲೆಯಾವರಿಸಿದಂತಾಗಿತ್ತು. ಏಕೆಂದರೆ ಮನೆಯೊಡೆಯನಿಗೆ ಏಡ್ಸ್ ತಗುಲಿರುವುದು ತಪಾಸಣೆಯಿಂದ ಸಾಬೀತಾಗಿತ್ತು. ವ್ಯರ್ಥವಾಗಿ ನೀರಿನಲ್ಲಿ ಹೋಮ ಮಾಡಿದಂತಾಯಿತು.
ಮನೆಯೊಳಗಿದ್ದ ಗರ್ಭಿಣಿ ಪತ್ನಿಗೂ, ಕೊಟ್ಟಿಗೆಯೊಳಗಿದ್ದ ಹಸುವಿಗೂ ಏಕ ಕಾಲಕ್ಕೆ ಪ್ರಸವವೇದನೆ ಆರಂಭವಾಯಿತು. ಕೆಲ ಸಮಯದ ನಂತರ ಪತ್ನಿ ಹೆಣ್ಣು ಮಗುವಿಗೂ, ಹಸು ಗಂಡು ಕರುವಿಗೂ ಜನ್ಮವಿತ್ತ ವಿಷಯ ತಿಳಿದಾಗ ಯಜಮಾನ ತಲೆ ಮೇಲೆ ಕೈ ಹೊತ್ತು ಲಾಭ- ನಷ್ಟಗಳ ಲೆಕ್ಕಾಚಾರ ಹಾಕುತ್ತ ಕುಳಿತ.
'ಆರೋಗ್ಯವಂತ ಮಗು' ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಗಳಿಸಿದ ಮಗುವಿನ ತಂದೆ- ತಾಯಿ ಸಿಹಿ ಹಂಚಿ ಸಂಭ್ರಮಿಸತೊಡಗಿದರು. ಪ್ರಥಮ ಬಹುಮಾನ ಗಳಿಸಿದ್ದ ಮಗು ಅನಾಥಾಶ್ರಮದಿಂದ ಬಂದಿತ್ತು.
ಇವರನ್ನೇ ಅಚ್ಚರಿಯಿಂದ ನೋಡಲಾರಂಭಿಸಿತು.
ತಮ್ಮ ಮಗುವಿಗೆ ದೇವತೆಯರ ಹೆಸರನ್ನು ಇಡೋಣವೆಂದು ಪತ್ನಿ ಪತಿಗೆ ತಿಳಿಸಿದಳು. ಆ ನೆಪದಲ್ಲಿ ದೇವರನ್ನು ಪದೇ ಪದೇ ಸ್ಮರಿಸಬಹುದೆಂಬುದು ಅವಳ ಉದ್ದೇಶವಾಗಿತ್ತು. ಅವನು ಒಂದು ದೇವಿಯ ಹೆಸರನ್ನೇ ಸೂಚಿಸಿದ. ತನ್ನನ್ನು ತೊರೆದು ಹೋದ ಪ್ರೇಯಸಿಯ ಹೆಸರನ್ನು ಪದೇ ಪದೇ ಸ್ಮರಿಸುವುದು ಅವನ ಉದ್ದೇಶವಾಗಿತ್ತು.
ಶಾಲೆಯಲ್ಲಿ ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದ. ವಿದ್ಯಾರ್ಥಿಗೆ ಟಿ.ಸಿ. ಕೊಟ್ಟು ಕಳುಹಿಸಿದ್ದ ಮುಖ್ಯೋಪಾಧ್ಯಾಯರು, ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಸಹೋದ್ಯೋಗಿಯೋರ್ವರ ಮಗನಿಗೆ ಪ್ರಶ್ನೆ ಪತ್ರಿಕೆಗಳ ನಕಲು ಪ್ರತಿಯನ್ನು ಒದಗಿಸಿದ್ದರು.
- ಸುಮಾ, ಮಂಡ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

