ನ್ಯಾನೋಕಥೆಗಳು
Published On :
- ದಶಕಗಳಿಂದ ಜಗುಲಿಯ ಮೂಲೆಯಲ್ಲಿ ಜಡ್ಡು ಹಿಡಿದು ಮಲಗಿದ್ದರೂ ಕ್ಯಾರೆ ಎನ್ನದ ಮಗ, ಆಸ್ತಿಯನ್ನು ಅನಾಥಾಶ್ರಮಕ್ಕೆ ವಿಲ್ ಮಾಡಿದ್ದಾಳೆ ಎನ್ನುವ ಸುದ್ದಿ ತಿಳಿದು ಮನೆಗೆ ಓಡೋಡಿ ಬಂದು ಕೊನೆಯುಸಿರು ಎಳೆಯುತ್ತಿದ್ದ ತಾಯಿಯನ್ನು ಬದುಕಿಸಿಕೊಳ್ಳಲು ಸಂಜೀವಿನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಆತನ ಹೆಂಡತಿ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದಳು.
- ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿ ಪರಿಸರ ರಕ್ಷಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಪರಿಸರವಾದಿಯೊಬ್ಬರು ನಿಧನರಾದ ಮರುದಿನವೇ ಅದೇ ಗ್ರಾಮದ 5 ಎಕರೆ ವ್ಯಾಪ್ತಿಯಲ್ಲಿದ್ದ ಮರಗಳನ್ನು ಕಡಿದು ಶ್ರೀಯುತರ ಬೃಹತ್ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ ಸರ್ಕಾರದ ತೀರ್ಮಾನಕ್ಕೆ ಜನ ಚಪ್ಪಾಳೆ ತಟ್ಟದೆ ವಿಧಿಯಿರಲಿಲ್ಲ.
- 40 ರಿಂದ 50 ವಸಂತಗಳು ಕಳೆದರೂ ಯುವ ಮುಖಂಡರಾಗಿಯೇ ಇರುವ ಕೆಲವು ರಾಜಕಾರಣಿಗಳು ಯುವಕರ ಪ್ರತಿನಿಧಿಗಳಾಗಿ ಮಂತ್ರಿಗಿರಿಯಲ್ಲಿ ರಾರಾಜಿಸುತ್ತಿರುವಾಗಲೇ, ನಿಜವಾದ ಒಂದಷ್ಟು ಯುವಕರು ಗೂಡಂಗಂಡಿಗಳ ಹಿಂದೆ ಕುಳಿತು ಸಿಗರೇಟನ್ನು ಸುಡುತ್ತಿದ್ದರೆ. ಇನ್ನಷ್ಟು ಯುವಕರು ಫೇಸ್ಬುಕ್ನಲ್ಲಿ ತಮ್ಮದೇ ಫೇಸ್ನ ಲೈಕ್/ ಕಾಮೆಂಟ್ಗಳನ್ನು ಕೌಂಟ್ ಮಾಡುತ್ತಿದ್ದಾರೆ.
- ಪ್ರಕೃತಿ ವಿಕೋಪದಿಂದ ಬದುಕುಳಿದ ನಿರಾಶ್ರಿತ ಶಿಬಿರಕ್ಕೆ ಭೇಟಿ ಕೊಟ್ಟ ಸ್ವಾಮೀಜಿಯೊಬ್ಬರು ಹಸಿವಿನ ಬಗ್ಗೆ ಪ್ರವಚನ ನೀಡುತ್ತಿರುವ ಸಮಯಕ್ಕೆ ಸರಿಯಾಗಿ ಬಂದ ಸೇನೆಯ ಹೆಲಿಕಾಪ್ಟರ್ನಿಂದ ಆಹಾರ ಪದಾರ್ಥಗಳು ಬಿದ್ದವು. ಆಹಾರದ ಪ್ಯಾಕೆಟ್ಗಳನ್ನು ಆಯ್ದುಕೊಳ್ಳಲು ಓಡಿದ ನಿರಾಶ್ರಿತರನ್ನು ಕಂಡ ಸ್ವಾಮೀಜಿಗೆ ಹೆಲಿಕಾಪ್ಟರ್ನ ಕೆಳಗೆ ಮತ್ತೊಮ್ಮೆ ಜ್ಞಾನೋದಯವಾಯಿತು.
- ಹರೀಶ ಹೆಚ್.ಡಿ, ತುಮಕೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

