ಪಾಯಸ
ದಶರಥ ಮಹಾರಾಜನಿಗೆ ಮೂವರು ಪತ್ನಿಯರಿದ್ದರೂ ಬಹಳ ಕಾಲ ಮಕ್ಕಳಿರಲಿಲ್ಲ. ಗುರುಹಿರಿಯರ ಸಲಹೆಯಂತೆ ಋಷ್ಯಶೃಂಗಮುನಿಗಳ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಾಗವನ್ನು ಮಾಡಿದನು. ಯಾಗದ ಪೂರ್ಣಾಹುತಿಯ ನಂತರ ಸುಮಿತ್ರೆ ಎಲ್ಲೋ ಹೋಗಿರುತ್ತಾಳೆ. ಆಗ ಅಗ್ನಿ ಕುಂಡದಿಂದ ದಿವ್ಯ ಪುರುಷನೊಬ್ಬ ಪ್ರತ್ಯಕ್ಷನಾಗಿ ಚಿನ್ನದ ಕಲಶದಲ್ಲಿದ್ದ ದಿವ್ಯ ಪಾಯಸವನ್ನು ದಶರಥನಿಗೆ ಕೊಟ್ಟು, ಅದನ್ನು ಪತ್ನಿಯರಿಗೆ ಕೊಡಬೇಕೆಂದೂ ಪುತ್ರರ ಜನನವಾಗುವುದೆಂದೂ ಹೇಳಿ ಅದೃಶ್ಯನಾಗುತ್ತಾನೆ. ಆಗ ದಶರಥನು ಪಾಯಸದಲ್ಲಿ ಅರ್ಧವನ್ನು, ಪಟ್ಟಮಹಿಷಿ ಕೌಸಲ್ಯೆಗೂ, ಉಳಿದರ್ಧವನ್ನು ಇಷ್ಟಮಹಿಷಿ ಕೈಕೇಯಿಗೂ ಹಂಚಿಬಿಡುತ್ತಾನೆ. ನಂತರ ಬಂದ ಸಮಿತ್ರೆ ಪೆಚ್ಚಾಗಿ ನಿಲ್ಲುತ್ತಾಳೆ. ಆ ಕೌಸಲ್ಯೆಯು ತನ್ನಲ್ಲಿದ್ದ ಪಾಯಸದಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ಕೊಡುತ್ತಾಳೆ. ಕೈಕೇಯಿಯೂ ತನ್ನಲ್ಲಿದ್ದ ಪಾಯಸದಲ್ಲಿ ಅರ್ಧ ಭಾಗವನ್ನು ಸುಮಿತ್ರೆಗೆ ಕೊಡುತ್ತಾಳೆ.
ಕಾಲಾ ನಂತರ ಕೌಸಲ್ಯೆಗೆ ರಾಮನೂ, ಕೈಕೇಯಿಗೆ ಭರತನೂ, ಸುಮಿತ್ರೆಗೆ ಲಕ್ಷ್ಮಣ- ಶತೃಘ್ನರೂ ಜನಿಸುತ್ತಾರೆ. ಕೌಸಲ್ಯೆ ಕೊಟ್ಟ ಪಾಯಸದ ವರಬಲದಿಂದ ಜನಿಸಿದ ಲಕ್ಷ್ಮಣನು ರಾಮನ ಅನುಯಾಯಿಯಾಗುತ್ತಾನೆ. ಕೈಕೇಯಿ ಕೊಟ್ಟ ಪಾಯಸದ ವರಬಲದಿಂದ ಜನಿಸಿದ ಶತೃಘ್ನನು ಭರತನ ಅನುಯಾಯಿಯಾಗುತ್ತಾನೆ. ಮುಂದೆ ರಾಮನು ವನವಾಸಕ್ಕೆ ಹೋದಾಗ ಲಕ್ಷ್ಮಣನೂ ಅವನೊಂದಿಗೆ ಕಾಡಿಗೆ ಹೋಗುತ್ತಾನೆ. ಶತೃಘ್ನ ಭರತನೊಂದಿಗೆ ಅಯೋಧ್ಯೆಯಲ್ಲಿಯೇ ಇರುತ್ತಾನೆ.
= ಸೀತಾ ಎಸ್. ನಾರಾಯಣ, ಹರಿಹರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

