ಮಕರಂದ/ದೋಣಿ

ಹೂವಿನ ಹಾಡು (ಕಬ್ಬಿಗತೋಟ)

Published On :

ಒಂದು ಮುದ್ದು ಮಲ್ಲಿಗೆ
ಎಲೆ ಮರೆಯಲಿ ಅರಳಿದೆ
ಅತುಳ ಶಾಂತಿ ಧವಳ ಕಾಂತಿ
ತನ್ನಷ್ಟಕ್ಕೆ ಸುಮ್ಮನಿದೆ

ನಿಲುವು ಮೋಹಕ
ಮೌನ ಮಾರ್ದವ
ಸಾವಿರ ಗದ್ದಲದಲ್ಲೂ
ಸದ್ದಿಲ್ಲದ ಸುಗಂಧ ಮಾಟ

ಯಾರ ಮುಡಿಯೇರುವ
ತವಕ ಲವ ಲೇಶವಿಲ್ಲ
ಹರನ ಕೊರಳಿಗೆ ಹಾರವಾಗುವ
ಗುರಿಯೂ ಇಲ್ಲ
ಅರಳುವುದಷ್ಟೇ ದಿವ್ಯ ಕಾಯಕ
ನಿಶ್ಶಬ್ದ ಸಂಗೀತದಲಿ...
ಲೋಕೋತ್ತರ ಚೆಲುವಿನಲ್ಲಿ
ಏಕಾಂಗಿಯಾದರೂ..
ಲೋಕ ದೂರವಿಲ್ಲ
ಲೋಕ ಸಖ್ಯವಿದೆ.
ನೆಲತಾಯಿಯ ಮಡಿಲು
ರವಿ ಕಿರಣದ ಜೀವ ನೇವರಿಕೆ
ತಂಗಾಳಿಯ ಸ್ಪರ್ಶ ಸಾಂಗತ್ಯ...
ಮಲ್ಲಿಗೆಗೆ ನೀರವ ನಗು,
ನೈರ್ಮಲ್ಯದ ಹೊಳಪು !
ಪ್ರತಿ ಕ್ಷಣ ಹೊಸ ಚೆಲುವು ಚೆಲ್ಲುವ
ನಿರ್ಮಲ ನಿಸರ್ಗದಂತೆ
ನಿರ್ಲಿಪ್ತ... ಶಾಂತ !
ಇದು ಲೋಕದೊಳಗಿನ ಏಕಾಂತ.

ಇರಬಹುದು ನೂರು ನೋವು
ಹೂವಿನ ಆಂತರ್ಯದಲ್ಲಿ
ನಮಗೆ ತಿಳಿಯುವುದಿಲ್ಲ
ಯಾಕೆಂದರೆ...
ಹೂವು ಅಳುವುದಿಲ್ಲ.

-ಭಾರತಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.