ಮಕರಂದ/ದೋಣಿ

ಕುಂವೀ ಮಾತಲ್ಲಿ ಕನ್ನಡದ ಕಥಾಹಾದಿ...

ಮಣಿಪುರದ ಇಂಫಾಲ್‌ನಲ್ಲಿ ಇತ್ತೀಚೆಗೆ ನಡೆದ 'ರಾಷ್ಟ್ರೀಯ ಸಾಹಿತ್ಯ ಉತ್ಸವ'ದಲ್ಲಿ ಕನ್ನಡದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ...

ಕುಂವೀ ಮಾತಲ್ಲಿ ಕನ್ನಡದ ಕಥಾಹಾದಿ...
Published On :

ಮಣಿಪುರದ ಇಂಫಾಲ್‌ನಲ್ಲಿ ಇತ್ತೀಚೆಗೆ ನಡೆದ 'ರಾಷ್ಟ್ರೀಯ ಸಾಹಿತ್ಯ ಉತ್ಸವ'ದಲ್ಲಿ ಕನ್ನಡದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಪಾಲ್ಗೊಂಡಿದ್ದರು. ವಿವಿಧ ಪ್ರಾದೇಶಿಕ ವಿದ್ವಾಂಸರು, ಜನಪ್ರಿಯ ಲೇಖಕರು ಪಾಲ್ಗೊಂಡು ತಾಯ್ನೆಲದ ಬಗ್ಗೆ ಉಪನ್ಯಾಸ ನೀಡಿದರು. 'ಕನ್ನಡ ಕಥೆಗಳು ನಡೆದು ಬಂದ ದಾರಿ'ಯನ್ನು ಕುಂವೀ ಬಗೆ ಬಗೆಯಾಗಿ ವಿವರಿಸಿದರು. ಆ ದೀರ್ಘ ಭಾಷಣದ ಆಯ್ದ ಭಾಗ ಇಲ್ಲಿದೆ...

  • ಸಾಮಾನ್ಯವಾಗಿ ಕಥೆಯನ್ನು 'ಮೈನರ್ ಸಾಹಿತ್ಯ' ಪ್ರಕಾರವೆಂದು ಪರಿಗಣಿಸಲಾಗುತ್ತದೆ. ಆದರೆ, ಇದು ಯಾವುದೇ ಮೇಜರ್ ಪ್ರಕಾರಕ್ಕಿಂತ ಕಡಿಮೆ ಇಲ್ಲ. ಕನ್ನಡದ ಎಲ್ಲಾ ಪ್ರಮುಖ ಲೇಖಕರು ಕಥೆಗಳನ್ನು ರಚಿಸಿದ್ದಾರೆ. ಕನ್ನಡದ ಕಥಾಲೋಕ ಪ್ರಭಾವಿತಗೊಂಡಿದ್ದು ಪಾಶ್ಚಾತ್ಯ ಸಾಹಿತ್ಯ ಮಾದರಿಯಿಂದ. 19ನೇ ಶತಮಾನದ ಅಂತಿಮ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸಣ್ಣಕಥೆ ಜನಪ್ರಿಯವಾಗಿ ಬೆಳೆಯಿತು. ಅದರ ಪ್ರಭಾವ ಕನ್ನಡ ಸಾಹಿತ್ಯ ಮೇಲೂ ಆಯಿತು. ಇಂಗ್ಲಿಷ್ ಬಲ್ಲ ಕನ್ನಡ ಲೇಖಕರು ಅತ್ಯುಚ್ಚ ಮಾದರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. 1891ರಲ್ಲಿ ಪ್ರಾರಂಭವಾದ 'ದಿ ಸ್ಟ್ರಾಂಡ್ ಮ್ಯಾಗಜೀನ್‌'ನಲ್ಲಿ ಪ್ರಕಟವಾದ ಕೆಲವು ಕಥೆಗಳನ್ನು ಓದುವುದರ ಮೂಲಕ ಪ್ರಭಾವಿತರಾಗಿ ತಾವು 'ರಂಗನ ಮದುವೆ' ಎಂಬ ಅಪ್ಪಟ ಕನ್ನಡ ಕಥೆ ಬರೆದುದಾಗಿ ಮಾಸ್ತಿ ಒಂದೆಡೆ ಹೇಳಿಕೊಂಡಿದ್ದಾರೆ.
  • ಸ್ವಾತಂತ್ರ್ಯ ನಂತರದ ಲೇಖಕರಾದ ಅನಂತಮೂರ್ತಿಯವರಂಥ ಆಧುನಿಕ ಮನೋಭಾವದ ಲೇಖಕರಿಗೆ ಸಾಮಾಜಿಕ ಸಮಸ್ಯೆಗಳಿಗಿಂತ ವೈಯಕ್ತಿಕ ಮತ್ತು ಮನುಷ್ಯನ ಅಂತರ್ಗತ ಸಮಸ್ಯೆಗಳೇ ಮುಖ್ಯವಾದವು. 1970ರಿಂದ ಈಚೆಗೆ ಬರೆದ, ಬರೆಯುತ್ತಿರುವ ತೇಜಸ್ವಿ, ದೇವನೂರು ಮಹಾದೇವರಂಥ ಸಮಾಜಮುಖಿ ಆಸ್ಥೆಗಳು ವೈಯಕ್ತಿಕ ನೆಲೆಯಲ್ಲಿ ಅಧಿಕೃತವಾಗುವ ಮೂಲಕ ಹೆಚ್ಚು ಪ್ರಾಮಾಣಿಕವಾಗಿ ಅವರ ಕಥೆಗಳಲ್ಲಿ ಮೂಡಿಬಂದವು.
  • ಇವರ ಮತ್ತು ಇವರ ನಂತರದ ಬಹುಪಾಲು ಲೇಖಕರಿಗೆ ಪಾಶ್ಚಾತ್ಯವಾದ, ಅಸ್ತಿತ್ವವಾದಗಳಂಥ ವಿದೇಶಿ ಮೂಲದ ವಿಚಾರ ಪ್ರಣಾಲಿಗಳಿಗಿಂತ ಲೋಹಿಯಾವಾದ, ಅಂಬೇಡ್ಕರ್‌ವಾದಗಳಂಥ ದೇಶೀಯವಾದಗಳೇ ಮುಖ್ಯವಾದವು.
  • ಎಂಭತ್ತರ ದಶಕದಲ್ಲಿ ಬರೆಯಲಾರಂಭಿಸಿದ ಸಮಕಾಲೀನ ಲೇಖಕರು ಸಣ್ಣಕಥೆಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಕನ್ನಡದ ಕಥೆಗೆ ಈಗ ನೂರಾಇಪ್ಪತ್ತು ವರ್ಷದ ಸಂಭ್ರಮ. ಲಿಖಿತ ಪರಂಪರೆಯೊಂದೇ ಅಲ್ಲದೆ ಮೌಖಿಕ ಪರಂಪರೆಯೂ ಕನ್ನಡ ಕಥೆಯನ್ನು ಸಶಕ್ತಗೊಳಿಸಿದೆ.
  • ಕನ್ನಡಿಗರಿಗೆ ಕಥೆ ಹೇಳುವುದೆಂದರೆ ಕೊನೆಮೊದಲಿಲ್ಲದ ಉತ್ಸಾಹ. ಕನ್ನಡ ಪ್ರತಿಯೊಬ್ಬ ಸೃಜನಶೀಲ ಲೇಖಕರೂ ಪರಂಪರೆಯನ್ನು ಅರಗಿಸಿಕೊಳ್ಳುತ್ತಲೇ ಕಥನ ಕಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.