ಐದೇ ನಿಮಿಷಕ್ಕೆ ನಿದ್ರೆ! (JOLLYಮರ)
ತಮ್ಮ ಕಾದಂಬರಿಗಳನ್ನು ಯಾರೂ ಓದೋರೇ ಇಲ್ಲ ಎಂದ ಬೇಜಾರುಪಟ್ಟುಕೊಂಡು ಖ್ಯಾತ ಕಾದಂಬರಿಕಾರರೊಬ್ಬರು ತೀವ್ರ ಅಸ್ವಸ್ಥರಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸ್ವಲ್ಪ ಸುಧಾರಿಸಿಕೊಂಡ ಮೇಲೆ ಅವರನ್ನು ವಾರ್ಡೊಂದಕ್ಕೆ ಶಿಫ್ಟ್ ಮಾಡಲಾಯಿತು. ಆ ಕಾದಂಬರಿಕಾರರಿಗೆ ಅಚ್ಚರಿ. ಅಲ್ಲಿ ಅಡ್ಮಿಟ್ ಆಗಿದ್ದ ಎಲ್ಲ ರೋಗಿಗಳ ಕೈಯಲ್ಲೂ ಅವರದ್ದೇ ಕಾದಂಬರಿಗಳಿದ್ದವು. ಖುಷಿ, ಕುತೂಹಲ ಎರಡೂ ತಡೆಯಲಾಗದೆ ಅವರು ವೈದ್ಯರಿಗೆ ಕೇಳಿದರು, 'ಏನ್ ಸಾರ್ ಈ ಆಸ್ಪತ್ರೇಲಿ ಎಲ್ರಿಗೂ ಇದೇ ಕಾದಂಬರಿ ಕೊಟ್ಟಿದ್ದೀರಲ್ಲ. ಇದು ಅಷ್ಟು ಚೆನ್ನಾಗಿದ್ಯಾ?'.
ಅದಕ್ಕೆ ವೈದ್ಯರು ಹೇಳಿದರು, 'ಛೇ ಛೇ. ಅದರ ಗುಟ್ಟೇ ಬೇರೆ. ಇವರೆಲ್ಲ ನಿದ್ದೆ ಬಾರದಿರೋ ರೋಗಿಗಳು. ಎಷ್ಟೇ ಸ್ಲೀಪಿಂಗ್ ಟ್ಯಾಬ್ಲೆಟ್ ಕೊಟ್ರೂ ಇವರಿಗೆ ನಿದ್ದೇನೆ ಬರ್ತಿರ್ಲಿಲ್ಲ. ಈ ಕಾದಂಬರಿ ಕೊಟ್ಟ ಮೇಲೆ ಎಲ್ರೂ ಐದೇ ನಿಮಿಷದಲ್ಲಿ ನಿದ್ರೆಗೆ ಜಾರತೊಡಗಿದರು...'.
ಎರಡು ನಿಮಿಷದ ನಂತರ...
ನ್ಯೂಸ್ ಚಾನೆಲ್ಲೊಂದರಲ್ಲಿ ಬ್ರೇಕಿಂಗ್‌ನ್ಯೂಸ್... 'ಖ್ಯಾತ ಕಾದಂಬರಿಕಾರರ ನಿಧನ'!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

