ಹನಿಹನಿ
ಹೆತ್ತಮ್ಮನನ್ನು ಮರೆತು
ಹುಡುಗಿಯ ಹಿಂದೆ ಹೋದ
ಅವಳು ಕೈ ಕೊಟ್ಟಳು
ಅಮ್ಮ ಹೆಗಲು ಕೊಟ್ಟು
ನಿಲ್ಲಿಸಿದಳು !
=
ಹಣತೆ ಹಚ್ಚಿದ
ತನಗೆ ಮಾತ್ರ ಬೆಳಕು ಬೇಕೆಂದ
ಗಾಳಿ ಹೊಕ್ಕಿತು
ದೀಪ ನಕ್ಕಿತು !
=
ಕಾಮ ತೀರಿಸಿಕೊಳ್ಳಲು
ಸೂಳೆಯ ಮನೆಗೆ
ಹೋದವನು
ಹಸಿವಾದಾಗ ಮಡದಿಯ
ಬಳಿ ಬಂದಿದ್ದ !
=
ಧರ್ಮಗಳ ಹೆಸರಲ್ಲಿ
ಯುದ್ಧ ಮಾಡಿದರು
ಗೆದ್ದಿದ್ದು-ಅಧರ್ಮ !
=
ಅವನು ಸಿಗರೇಟು
ಸುಟ್ಟ,
ಸಿಗರೇಟು ಅವನನ್ನು
ಸುಟ್ಟಿತು !
=
ನೂರಾರು ಡಿಗ್ರಿ
ಕಲಿತ
ಮಾನವೀಯತೆ
ಮರೆತ !
=
ಬದುಕಿರುವಾಗ
ಊಟ ಹಾಕಲಿಲ್ಲ, ದುರ್ಗತಿ;
ಸತ್ತ ಮೇಲೆ ತಿಥಿ, ಒಣ ಸ್ತುತಿ !
= ಪರೇಶ ಸರಾಫ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

