ಮಕರಂದ/ದೋಣಿ

ನ್ಯಾನೋಕಥೆಗಳು

Published On :

ಎಂದಿನಂತೆ ಅವರಿಬ್ಬರೂ ಆ ರಾತ್ರಿಯೂ ಕೂಡ ಅದೇ ಹೋಟೆಲ್‌ನಲ್ಲಿ ಅದೇ ಜಾಗದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಆದರೆ ಆತ ಮಾತ್ರ ತನ್ನ ಮನಸ್ಸಿನ ಆಸೆಯನ್ನು ಇವತ್ತು ಹೇಳಿಯೇ ತೀರಬೇಕೆಂದು ತೀರ್ಮಾನಿಸಿಬಿಟ್ಟಿದ್ದ. ತಕ್ಷಣವೇ ಮಂಡಿಯೂರಿ ತನ್ನ ಜೇಬಿನೊಳಗಿದ್ದ ಸಣ್ಣ ಡಬ್ಬಿಯಿಂದ ಉಂಗುರ ತೆಗೆದವನೇ 'ನಾ ನಿನ್ನ ಪ್ರೀತಿಸುತ್ತೇನೆ, ನನ್ನ ಮದುವೆಯಾಗುತ್ತೀಯಾ?' ಎಂದು ಕೇಳಿಯೇ ಬಿಟ್ಟ. 'ಹೌದು, ನಾನು ಕೂಡ ನಿನ್ನನ್ನು ಪ್ರೀತಿಸುತ್ತೇನೆ' ಎಂದು ಸಂತೋಷದಿಂದ ಎದುರಿಗಿದ್ದವನು ಒಪ್ಪಿಗೆ ನೀಡಿದ.
---
ಆ ರಾತ್ರಿ ಪಾರ್ಟಿ ಮುಗಿಯುವುದು ತಡವಾದ್ದರಿಂದ ಅವಳು ಒಬ್ಬಳೇ ಹೋಗುವುದು ಒಳಿತಲ್ಲ ಎಂದುಕೊಂಡಳು. ಅದೇ ಪಾರ್ಟಿಗೆ ಬಂದಿದ್ದ ಗೆಳೆಯನೊಬ್ಬನಿಗೆ, ತನ್ನನ್ನು ಮನೆಗೆ ಬಿಡುವಂತೆ ಕೇಳಿಕೊಂಡಳು. ಆತ ಒಪ್ಪಿಕೊಂಡ. ಕೂಡಲೇ ಗಾಡಿ ಹತ್ತಿ ಇಬ್ಬರೂ ಅವಳ ಮನೆಗೆ ಹೊರಟರು. ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ನಿರ್ಜನ ರಸ್ತೆಯಲ್ಲಿ ಗಾಡಿ ಸರಕ್ಕನೆ ನಿಂತು ಬಿಟ್ಟಿತು. ಆಕೆ ಏನಾಯ್ತು ಎಂದು ಕೇಳುವ ಹೊತ್ತಿಗೆ, ಆತನ ಕೈ ಅವಳ ಎದೆಯ ಮೇಲೆ ಇತ್ತು. ಇಬ್ಬರು ಚಿಕ್ಕ ವಯಸ್ಸಿನ ಪುಟಾಣಿ ಮಕ್ಕಳು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಅವರವರ ಮನೆಗೆ ಅಳುತ್ತಾ ಹೋದರು. ಒಂದು ಮಗುವಿನ ಮನೆಯಲ್ಲಿ ಅದರ ತಾಯಿ ಅವನನ್ನು ಅಪ್ಪಿಕೊಂಡು ಮುದ್ದಾಡಿ ಸಮಾಧಾನ ಮಾಡಿ ಇನ್ನು ಮುಂದೆ ಹುಷಾರಾಗಿರುವುದಕ್ಕೆ ಹೇಳಿದಳು. ಇನ್ನೊಂದು ಮಗು ಮನೆಗೆ ಹೋಗಿ ನಡೆದಿದ್ದೆಲ್ಲಾ ಹೇಳುತ್ತಲೇ ಅದರ ತಂದೆ 'ಯಾವ ಬೋಳಿಮಗನೋ ಹೊಡೆದಿದ್ದು. ಕೈ ಕಾಲು ಮುರೀತೀನಿ' ಎಂದು ಕೂಗಾಡಿದನು.
---
ಆತ ಎಂದಿನಂತೆ ಆ ಮಧ್ಯಾಹ್ನ ಕೂಡ ತನ್ನ ಮನೆಗೆ ಹೊರಡುವ ಬಸ್‌ಗಾಗಿ ಆ ಜಾಗದಲ್ಲಿ ಕಾಯುತ್ತಿದ್ದ. ಆಗ ಭಿಕ್ಷುಕನೊಬ್ಬ ಇವನ ಹತ್ತಿರ ಬಂದು 'ಅಣ್ಣ.... ಭಿಕ್ಷೆ ಹಾಕಿ' ಎಂದು ಬೇಡತೊಡಗಿದ. ಮೊದಮೊದಲು ಭಿಕ್ಷುಕನ ಕಡೆ ಗಮನ ಕೊಡದಂತೆ ಆತ ನಟಿಸಿದ. ಆದರೆ ಭಿಕ್ಷುಕ ಪದೇ ಪದೇ ಪೀಡಿಸತೊಡಗಿದಾಗ, ತನ್ನ ಜೇಬಿನಿಂದ 5 ರುಪಾಯಿ ತಗೆದು ಆತನಿಗೆ ನೀಡಿ 'ಇಷ್ಟೇ ಇರೋದು, ಹೋಗು ಇಲ್ಲಿಂದ' ಅಂತ ಗದರಿದ. ಸ್ವಲ್ಪ ದಿನಗಳ ನಂತರ ಆತ ಮತ್ತದೇ ಬಸ್‌ಗಾಗಿ ಅದೇ ಜಾಗದಲ್ಲಿ ಕಾಯುತ್ತಿದ್ದ. ಆದರೆ ಆ ಮಧ್ಯಾಹ್ನ ವಿಪರೀತ ಬಿಸಿಲು ಇದ್ದದ್ದರಿಂದ ಅವನಿಗೆ ಬಾಯಾರಿಕೆ ಆಗಿ ಏನಾದರೂ ಕುಡಿಯಬೇಕು ಎನಿಸಿತು. ಆದರೆ ಬಸ್ ಟಿಕೆಟ್‌ಗೆ ಬೇಕಾಗಿದ್ದ ದುಡ್ಡು ಮಾತ್ರ ಇದ್ದದ್ದರಿಂದ ತೆಪ್ಪಗೆ ನಿಂತಿದ್ದ. ಆಗ ಇವನ ಮುಂದೆ ಸ್ವಲ್ಪ ದಿನಗಳ ಹಿಂದೆ ಸಿಕ್ಕ ಅದೇ ಭಿಕ್ಷುಕ ಐಸ್ ಕ್ಯಾಂಡಿ ನೆಕ್ಕುತ್ತ ಹೊರಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.