ನಮ್ಮ ನುಡಿಗೆ ಹೊಸ ರೂಪ
ಕನ್ನಡ ಗಣಕ ಪರಿಷತ್ ಅಭಿವೃದ್ಧಿಪಡಿಸಿದ್ದ 'ನುಡಿ' ಲಿಪಿ ಈಗ ಹೊಸ ರೂಪ ತಳೆದಿದೆ. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ 'ನುಡಿ- 5.0' ಕೊಡುಗೆ ನೀಡುವ ಮೂಲಕ ಹೊಸ ಫಾಂಟ್‌ಗಳನ್ನು ಗಣಕದ ಕಿಟಕಿಯೊಳಗೆ ತೂರಿಸಿದೆ. ಇದರಿಂದ ಆನ್‌ಲೈನ್‌ನಲ್ಲಿ ಕನ್ನಡದ ಬಳಕೆ ಇನ್ನಷ್ಟು ಸುಲಭವಾಗಿದೆ. ಸುಲಭವಾಗಿ ಯುನಿಕೋಡ್‌ಗೆ ಮಾರ್ಪಡಿಸಬಲ್ಲಂಥ, ಮೊಬೈಲಿನಲ್ಲಿ ಸರಾಗವಾಗಿ ಓದಬಲ್ಲಂಥ 11 ಹೊಸಫಾಂಟ್‌ಗಳನ್ನು ನುಡಿ- 5.0 ಹೊಂದಿದೆ. ಅಲ್ಲದೆ, ಕೆಲವು ವೆಬ್‌ಸೈಟ್‌ಗಳು- ಬ್ಲಾಗ್‌ಗಳು ಹಳೇ ಫಾಂಟ್‌ಗಳನ್ನೇ ಬಳಸುತ್ತಿವೆಯಾದ್ದರಿಂದ ಅವುಗಳ ಸುಧಾರಣೆಯೂ ಈ ತಂತ್ರಾಂಶದಿಂದ ಸಾಧ್ಯವಾಗಬಹುದು. 'ನುಡಿ'ಯಲ್ಲಿ ಈ ಹಿಂದೆ ಇದ್ದ ಎಲ್ಲ ಸೌಲಭ್ಯಗಳು ಇಲ್ಲಿಯೂ ದೊರಕುತ್ತವೆ. ಪದಪರೀಕ್ಷೆಯೂ ಹೆಚ್ಚು ವ್ಯಾಪಕವಾಗಿದೆ. 1,50,000 ಪದಗಳನ್ನು ಇದು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

