ಯಂಕ ಮಂಕ ಡೊಂಕ
ಅದೊಂದು ಶಾಲೆ. ಶಾಲೆಯೆಂದ ಮೇಲೆ ಶಾಲಾ ನಾಯಕನಿರಲೇಬೇಕಲ್ಲವೇ. ಆ ಶಾಲೆಗೆ ಯಂಕ ಶಾಲಾ ನಾಯಕ. ಅವನಿಗೆ ಮಂಕ, ಡೊಂಕ ಮುಂತಾದವರು ಹಿಂಬಾಲಕರು. (ಸ್ನೇಹಿತರಲ್ಲ). ಕೆಲವರ ಒಳಸಂಚಿನಿಂದ ಮತ್ತು ತಾನೇ ಮಾಡಿದ ಕೆಲವೊಂದು ಯಡವಟ್ಟುಗಳಿಂದ ಯಂಕನ ಶಾಲಾ ನಾಯಕನ ಪಟ್ಟವನ್ನು ತೆಗೆದು ಮಂಕನಿಗೆ ಕಟ್ಟಲಾಯಿತು. ಇದರಿಂದ ಯಂಕನಿಗೆ ಅವಮಾನ, ಮುಜುಗರ, ಅಸಹನೆ, ಕೋಪ, ಉಕ್ಕಿ ಉಕ್ಕಿ ಬರತೊಡಗಿತು. ಮಂಕನನ್ನು ನಾಯಕನನ್ನಾಗಿ ಒಪ್ಪಿಕೊಳ್ಳುವುದು ಯಂಕನಿಗೆ ನುಂಗಲಾರದ ತುತ್ತಾಯಿತು. ಯಂಕ, ಮಂಕನ ನಾಯಕತ್ವ ಕಳೆಯಲು ನಾನಾ ತಂತ್ರಗಳನ್ನು ಹೆಣೆಯತೊಡಗಿದ. ಮಂಕನೂ ತಿರುಗುಬಾಣಗಳನ್ನು ಬಿಡತೊಡಗಿದ. ಹೀಗೆ ಇವರಿಬ್ಬರ ಜಟಾ-ಪಟಿ ಬರಬರುತ್ತಾ ತಾರಕಕ್ಕೇರಿತು. ಗಂಡ-ಹೆಂಡಿರ ಜಗಳದ ನಡುವೆ ಕೂಸು ಬಡವಾದಂತೆ, ಇವರಿಬ್ಬರ ಜಟಾ-ಪಟಿಯ ನಡುವೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಿಕ್ಕಿಕೊಂಡು ನಲುಗತೊಡಗಿದರು. ತರಗತಿಗಳಲ್ಲಿ ಸರಿಯಾಗಿ ಪಾಠಗಳನ್ನು ಮಾಡಲು ಬಿಡುತ್ತಿಲ್ಲ, ಪರೀಕ್ಷೆಗಳು ಹತ್ತಿರ ಬರುತ್ತಿವೆ, ಬೇಸತ್ತ ವಿದ್ಯಾರ್ಥಿಗಳು ಶಿಕ್ಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಶಿಕ್ಷಕರೂ ಕೂಡಾ ಇದಕ್ಕೆ ಸ್ಪಂದಿಸಿದರು. ಈ ವಿಷಯವನ್ನು ಮುಖ್ಯ ಶಿಕ್ಷಕರ ಬಳಿಗೆ ಒಯ್ದರು.
ಮುಖ್ಯ ಶಿಕ್ಷಕರು ಎಲ್ಲವನ್ನೂ ಆಲಿಸಿದರು. "ತಕ್ಕ ಪರಿಹಾರ ಸೂಚಿಸುತ್ತೇನೆ" ಎಂದರು. ವಿದ್ಯಾರ್ಥಿಗಳೆಲ್ಲಾ ನಮಗೆ ಶಾಲಾ ನಾಯಕನೇ ಬೇಡ ಎಂಬ ಬೇಡಿಕೆಯಿಟ್ಟರು. ಶಾಲೆ ಎಂದಮೇಲೆ ನಾಯಕ ಇರಲೇಬೇಕು ಎಂದು ಹೇಳಿದ ಮುಖ್ಯ ಗುರುಗಳು, ಮಂಕನ ನಾಯಕತ್ವವನ್ನು ಕಿತ್ತುಕೊಂಡು ಅಲ್ಲೇ ಇದ್ದ ಡೊಂಕನಿಗೆ ನಾಯಕತ್ವವನ್ನು ವಹಿಸಿದರು. "ಬಾಂಡಲೆಯಿಂದ ಬೆಂಕಿಗೆ" ಎನ್ನುತ್ತಾ ಶಿಕ್ಷಕರು ನಿಟ್ಟುಸಿರು ಬಿಟ್ಟರೆ, ವಿದ್ಯಾರ್ಥಿಗಳೆಲ್ಲಾ "ನಮ್ಮ ಹಣೆ ಬರಹ" ಎಂದು ಹಣೆ ಚಚ್ಚಿಕೊಂಡರು. (ಈ ಕಥೆಯೂ, ನಮ್ಮ ನಾಡಿನ ಪ್ರಸ್ತುತ ಸಂದರ್ಭವೂ ಬೇರೆಯಿಲ್ಲ. ಅಲ್ಲವೇ?)
= ರಾಘವೇಂದ್ರ ಉಪ್ಪಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

