ನ್ಯಾನೋಕಥೆಗಳು
ಚಿಕ್ಕವನಿದ್ದಾಗ ಐಸ್‌ಕ್ಯಾಂಡಿ ತಿನ್ನುವ ಆಸೆಯಿಂದಾಗಿ, ಅಪ್ಪನ ಜೇಬಿನಿಂದ ದುಡ್ಡು ಕದಿಯಲು ಹೋಗಿದ್ದೆ. ಅಪ್ಪನ ತೂತು ಜೇಬಿನಿಂದ ನನ್ನ ಕೈ ಈಚೆಗೆ ತೂರಿಬಂತು.
ಕಾಲೇಜು ದಿನಗಳಲ್ಲಿ ಸಿಗರೇಟ್ ಸೇದಬೇಡ ಕ್ಯಾನ್ಸರ್ ಬರುತ್ತದೆಂದು ಸದಾ ಸಲಹೆ ನೀಡುತ್ತಿದ್ದ ಗೆಳೆಯನೇ ಇಂದು, ಬಾರಿನ ಮುಂದೆ ಬೀಡಾ ಅಂಗಡಿ ಇಟ್ಟಿದ್ದಾನೆ!
ಅವಳು ಅವನನ್ನು ಬಿಟ್ಟು ಹೋದಳು. ಅವನು ಬೇರೊಬ್ಬಳನ್ನು ಮದುವೆಯಾಗಿ, ಅವಳಿಗಿಂತಲೂ ಹೆಚ್ಚಾಗಿ ತನ್ನ ಹೆಂಡತಿಯನ್ನು ಪ್ರೀತಿಸಿದ, ಪ್ರೀತಿಯಿಂದ ನೋಡಿಕೊಂಡ ಅವಳ ಕೈ ಹಿಡಿದವನು ಸದಾ ಅವಳನ್ನು ಅನುಮಾನಿಸುತ್ತಿದ್ದ. ಅವಳಿಗೇ ಒಮ್ಮೆ ಅನ್ನಿಸಿತು, ಬಡವನಾದರೂ ಅವನೇ ಪ್ರೀತಿಯಲ್ಲಿ ಶ್ರೀಮಂತ.
ಎದ್ದು ದೇವರ ಮುಖ ನೋಡಿ ದೇವರಿಗೆ ಕೈ ಮುಗಿಯೆಂದು. ಅಮ್ಮ ಕೂಗಿ ಹೇಳಿದ ಧ್ವನಿ ಕಿವಿಗೆ ಬಿದ್ದು, ಹಾಸಿಗೆಯಿಂದೆದ್ದವನ ಕಣ್ಣಿಗೆ ಗೋಡೆಯ ಮೇಲಿನ ಯಾವ ಫೋಟೋದಲ್ಲಿಯೂ ದೇವರು ಕಾಣಲಿಲ್ಲ. ಸೀದಾ ದೇವರ ಕೋಣೆಗೆ ಹೋಗಿ ದೇವರಿಗೆ ಪೂಜೆ ಮಾಡುತ್ತಿದ್ದ ಅಮ್ಮನ ಮುಖ ನೋಡಿ ಕೈ ಮುಗಿದೆ.
= ನವೀನ್ ಮಧುಗಿರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

