ಮಕರಂದ/ದೋಣಿ

ನಗಬೇಕು

Published On :

ಗಂಡ: ಸಾಹೇಬ್ರೆ, ನನ್ನ ಹೆಂಡತಿ ಇತ್ತೀಚಿಗೆ ಸಿಕ್ಕಾಪಟ್ಟೆ ಸುಳ್ಳು ಹೇಳುತ್ತಿದ್ದಾಳೆ. ಈ ಸಮಸ್ಯೆಗೆ ದಯವಿಟ್ಟು ಪರಿಹಾರ ದೊರಕಿಸಿಕೊಡಿ.
ಸೈಕಿಯಾಟ್ರಿಸ್ಟ್: ನಿಮಗ್ಯಾಕೆ ಈ ಅನುಮಾನ ಬಂತು?
ಗಂಡ: ನಿದ್ದೆಯಲ್ಲಿ ಐ ಲವ್ ಯೂ ಅಂತ ಬಡಬಡಿಸುತ್ತಿರುತ್ತಾಳೆ!
=
ಮನಃಶ್ಶಾಸ್ತ್ರ ಪಾಠ ಮಾಡುವ ಶಿಕ್ಷಕನೊಬ್ಬ ಮೊದಲ ದಿನ ತನ್ನ ವಿದ್ಯಾರ್ಥಿಗಳು ಎಷ್ಟು ಸತ್ಯವಂತರು, ಎಷ್ಟು ಸುಳ್ಳುಗಾರರು ಎಂದು ತಿಳಿಯಬಯಸುತ್ತಾನೆ.
ವಿದ್ಯಾರ್ಥಿಗಳೆ, ನಿಮಗೆ ಇಂದು ಸುಳ್ಳಿನ ಬಗ್ಗೆ ಪಾಠ ಮಾಡಬೇಕೆಂದು ಬಯಸುತ್ತೇನೆ. ಪುಸ್ತಕದ 35ನೇ ಪುಟದಲ್ಲಿರುವ ಸುಳ್ಳಿನ ಕುರಿತ ಅಧ್ಯಯನವನ್ನು ಎಷ್ಟು ಜನ ಓದಿದ್ದೀರಿ ಕೈ ಎತ್ತಿರಿ ಎಂದು ವಿದ್ಯಾರ್ಥಿಗಳನ್ನು ಕೇಳುತ್ತಾನೆ.
ಕೂಡಲೇ ಎಲ್ಲಾ ವಿದ್ಯಾರ್ಥಿಗಳೂ ಕೈ ಎತ್ತುತ್ತಾರೆ.
'ವಾವ್, ಈ ಪಾಠ ಕೇಳಲು ನೀವು ತಕ್ಕ ವಿದ್ಯಾರ್ಥಿಗಳು. ಪಾಠ ಓದಿದ್ದೀರೆಂದು ಎಲ್ಲರೂ ಕೈ ಎತ್ತಿದ್ದೀರಿ ಸರಿ. ಆದರೆ ಆ ಪುಸ್ತಕದಲ್ಲಿ ಸುಳ್ಳಿನ ಕುರಿತು ಯಾವುದೇ ಅಧ್ಯಾಯವೇ ಇಲ್ಲ!'
=
ಒಂದು ದಿನ ಅದೇನಾಯಿತೋ ಏನೋ. ಬಂತಾಸಿಂಗ್ ಮರವೇರಿದ್ದ. ಅದೇ ಮರದಲ್ಲಿ ಕುಳಿತಿದ್ದ ಕೋತಿಯೊಂದಕ್ಕೆ ಅಚ್ಚರಿಯೋ ಅಚ್ಚರಿ. ಸರಿ, ಬಂತಾನ ಜೊತೆ ಮಾತನಾಡೋಣ ಎಂದು ಕೋತಿ ನಿರ್ಧರಿಸಿತು.
ಕೋತಿ: ಹಾಯ್ ಬಂತಾ, ಯಾಕೋ ಮರವೇರಿದೆ?
ಬಂತಾ: ಸೇಬು ಹಣ್ಣು ತಿನ್ನೋಣ ಅಂತ ಬಂದೆ.
ಕೋತಿ: ಲೇ ಕೋತಿ ನನ್ ಮಗನೆ, ಇದು ಮಾವಿನ ಮರ.
ಬಂತಾ: ಲೇ, ಕೋತಿ ನನ್ನ ಮಗನೆ. ಸೇಬು ಹಣ್ಣನ್ನು ಜೊತೆಗೇ ತಂದಿದ್ದೇನೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.