ಬೇಂದ್ರೆಯ ಸಂಖ್ಯಾಪಾಠ

ಬೇಂದ್ರೆ ಅಂದ್ರೆ ಕವಿತೆಗಳ ಮಳೆ. ಧಾರವಾಡದ ಭಾಷೆಯನ್ನು ಧಾರಾಕಾರವಾಗಿ ಸುರಿದು, ಕನ್ನಡದ ಕಾವ್ಯ ಲೋಕದಲ್ಲಿ ಚೆಲುವು ಸೃಷ್ಟಿಸಿದವರು. ಅವರನ್ನು ಅಳೆಯಲು, ಹಾಡಿ ಹೊಗಳಲು ಕಾವ್ಯವನ್ನೇ ಮುಖ್ಯವಸ್ತು ಮಾಡಿಕೊಳ್ಳಬೇಕು ಅಂತಿಲ್ಲ. ಅವರ ಸಂಖ್ಯಾಶಾಸ್ತ್ರ ಪಾಂಡಿತ್ಯವನ್ನು ವರ್ಣನೆಗೆ ವಸ್ತುವಾಗಿಸಿಕೊಳ್ಳಬಹುದು.
ಹೌದು, ವರಕವಿ ಅದ್ಭುತ ಸ್ಟ್ಯಾಟಿಸ್ಟಿಕ್ಸ್ ಅರಿತವರು. ಅದು ಅವತ್ತು ಬಯಲಾಯ್ತು ನೋಡಿ...
ಸಾಹಿತಿ ಎಚ್.ಜಿ. ಸಣ್ಣಗುಡ್ಡಯ್ಯನವರ ಕೃತಿ ಬಿಡುಗಡೆಗೆ ಬೇಂದ್ರೆ ತುಮಕೂರಿಗೆ ಬಂದಿದ್ದರು. ಆ ದಿನ ಪ್ರವಾಸಿಮಂದಿರದಲ್ಲಿ ತಂಗಲು ಸಕಲ ವ್ಯವಸ್ಥೆ ಮಾಡಲಾಗಿತ್ತು. 1974ರ ಸುಮಾರದು. ಬೇಂದ್ರೆಗೆ ಆಗತಾನೆ ಜ್ಞಾನಪೀಠ ಗೌರವ ಬಂದ ಹೊತ್ತು. ಕಾರ್ಯಕ್ರಮಕ್ಕೂ ಮುನ್ನ (ಬೆಳಗ್ಗೆ) ಪ್ರವಾಸಿ ಮಂದಿರಕ್ಕೆ ತೆರಳಿದ ಸಣ್ಣಗುಡ್ಡಯ್ಯ ಮತ್ತು ಜಿಲ್ಲಾ ಬರಹಗಾರರ ಸಂಘದವರು ತಮಗೇನಾದರೂ ಉಪನ್ಯಾಸ ನೀಡಿ ಎಂದು ಕೇಳಿಕೊಂಡರಂತೆ. ಬೇಂದ್ರೆ ಒಪ್ಪಿದರು. ಈಗೇನು ಅವರು ಸಾಹಿತ್ಯದ ಪಾಠ ಶುರುಮಾಡಬಹುದೆಂದು ಎಲ್ಲರೂ ಅಂದುಕೊಂಡಿದ್ದರು. ಬೇಂದ್ರೆಯವರೂ ಕರಿಹಲಗೆಯ ಮುಂದೆ ಸೀಮೆಸುಣ್ಣವನ್ನು ಹಿಡಿದು ನಿಂತುಬಿಟ್ಟರು. ಆದರೆ, ಅಲ್ಲವರು ಚಿತ್ರಿಸಿದ್ದು ಸಂಖ್ಯಾಶಾಸ್ತ್ರದ ಮ್ಯಾಜಿಕ್ಕನ್ನು!
'ಜಗಜ್ಯೋತಿ' ಬಸವಣ್ಣನವರು ಜನಿಸಿದ ದಿನಾಂಕ ಬರೆದು ಅದನ್ನು ಕೂಡಿಸಿ, ಗುಣಿಸಿ, ಇನ್ನೂ ಏನೇನೋ ಮಾಡಿ ಈ ಜನ್ಮ ದಿನಾಂಕವೇ ಅವರನ್ನು ಮಹಾನ್ ದಾರ್ಶನಿಕನಾಗಲು ನೆರವಾಯಿತು ಎಂಬ ಫಲಿತಾಂಶವನ್ನು ಬಿಡಿಸಿಟ್ಟರು.
ಆಗ ಸಣ್ಣಗುಡ್ಡಯ್ಯ ಸಣ್ಣ ಅಪಸ್ವರ ತೆಗೆದರು. 'ಇವೆಲ್ಲ ನಮ್ಗೆ ಅರ್ಥವಾಗಲ್ಲ. ಬೇರೆ ಏನಾದ್ರೂ ಸಾಹಿತ್ಯ ಪಾಠ ಮಾಡಿ' ಎಂದರು. ಬೇಂದ್ರೆ ಒಮ್ಮೆಲೆ ಸಿಡಿದೆದ್ದು, 'ನಿನ್ಗೆ ಅರ್ಥವಾಗಲ್ಲ ಅಂದ್ರೆ ಆಚೆ ಹೋಗಯ್ಯ' ಎಂದರು. ಕೂಡಲೇ ಶಾಂತರಾಗಿ ಸಂಖ್ಯಾಶಾಸ್ತ್ರದ ಪಾಠ ಮುಂದವರಿಸಿದರು.
ಆದರೆ, ಸಂಜೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬೆಳಗ್ಗೆ ಯಾವ ಘಟನೆಯೂ ನಡೆದೇ ಇಲ್ಲ ಎಂಬ ಖುಷಿಯಲ್ಲಿದ್ದರು ಬೇಂದ್ರೆ!
- ಸಂಕೇತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


