ಚಿತ್ರಸಂತೆಗೆ ಬನ್ನಿ...
ಬೆಂಗಳೂರಿನ ಚಿತ್ರಸಂತೆ ವರ್ಷಕ್ಕೊಮ್ಮೆ ಮಾತ್ರ ನಡೆಯೋದು. ಆದರೆ, ಅಂತರ್ಜಾಲದಲ್ಲೊಂದು ಚಿತ್ರಸಂತೆ ಇದೆ. ವರ್ಷದ 365 ದಿನವೂ ನಡೆಯುತ್ತೆ. ಆದರೆ, ಯಾವ ಕಲಾವಿದರೂ ಅಲ್ಲಿ ಚಿತ್ರಗಳನ್ನು ಪ್ರದರ್ಶಿಸುತ್ತಾ ಅದಕ್ಕೆ ಇಷ್ಟು ಬೆಲೆ ಅಂತ ನಿಗದಿ ಮಾಡಿ ಕಾದು ಕೂತಿರುವುದಿಲ್ಲ. ಇಲ್ಲಿರುವ ಚಿತ್ರಗಳು ಸಂಪೂರ್ಣ ನಿಸರ್ಗಕ್ಕೆ ಸಂಬಂಧಿಸಿದ್ದು, ಬದುಕಿಗೆ ಹತ್ತಿರವಾಗಿ ಪೋಣಿಸಿದ ಆಲ್ಬಂ. ಧೂದ್ ಸಾಗರದಿಂದ ಹಿಡಿದು ಹಿಮಾಲಯದ ನೆತ್ತಿಯವರೆಗೂ; ಸಿಗ್ನೇಚರ್ ಸ್ಪೈಡರ್ನಿಂದ, ವುಡ್ ಸ್ಪೈಡರ್ ತನಕ; ಬ್ಲ್ಯಾಕ್ ಆ್ಯಂಡ್ ವೈಟ್ ಕೊಕ್ಕರೆಗಳಿಂದ, ಕಪ್ಪು ಬಿಳುಪು ಡ್ರೆಸ್ಸು ಹಾಕಿದ ಎಂ.ಜಿ. ರೋಡಿನ ಮಾನಿನಿ ತನಕ; ಆಗಷ್ಟೇ ನೆನೆದ ಬಣ್ಣದ ಕೊಡೆಯಿಂದ, ಮರದ ಬುಡದಲ್ಲಿ ಬಿಟ್ಟ ನಾಯಿಕೊಡೆ ತನಕ ಚಿತ್ರಗಳುಂಟು. ಈ ಎಲ್ಲ ಚಿತ್ರಗಳನ್ನು ತೆಗೆದವರು ಕೃಷ್ಣಭಟ್. ಸಂಗ್ರಹಕ್ಕೆ ಒಪ್ಪುವ ತಲೆಬರಹ ನೀಡಿ, ದೃಶ್ಯ ವ್ಯಾಕರಣವನ್ನು ತೆರೆದಿಟ್ಟಿದ್ದಾರೆ. ನೀವೂ ಭೇಟಿ ನೀಡಿ, http://chithrasanthe.blogspot.in.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

