ನಾಳೆ ಬಾ...

ಹಳ್ಳಿ ಮನೆಗಳ ಕೊಟ್ಟಿಗೆಯ ಕದದ ಮೇಲೆ ರಾರಾಜಿಸುತ್ತಿದ್ದ 'ನಾಳೆ ಬಾ' ಎಂಬ ಬರಹ ಈಗೀಗ ಅಷ್ಟಾಗಿ ಕಂಡು ಬರುತ್ತಿಲ್ಲ. ಇದು ಮೌಢ್ಯದ ಕಾವು ಕೊಂಚವಾದರೂ ಕಡಿಮೆಯಾಗಿರುವ ಸೂಚನೆಯೋ? ಗೊತ್ತಿಲ್ಲ.
ದೆವ್ವ ಹಳ್ಳಿ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಅಗೋಚರ ಜೀವಿ (ಭ್ರಮಾಧೀನ ಲೋಕದಲ್ಲಿ). ಹುಣಸೇಮರ ದೆವ್ವಗಳ ಆಸ್ಥಾನ, ರಾತ್ರಿ ವೇಳೆಯಲ್ಲಿ ದೆವ್ವಗಳ ಕಾರುಬಾರು ಜೋರಾಗಿರುತ್ತದೆ. ದೆವ್ವಗಳು ಕತ್ತಲಾದ ಮೇಲೆ ಮನೆಗಳಿಗೆ ಬರುತ್ತವೆ. ಅದೂ ಕೊಟ್ಟಿಗೆ ಅಥವಾ ಹಿಂಬಾಗಿಲ ಮೂಲಕ. ಒಂದು ವೇಳೆ ಬಾಗಿಲಿನ ಮೇಲೆ ನಾಳೆ ಬಾ ಎಂದು ಬರೆದಿದ್ದರೆ ಅದನ್ನು ನೋಡಿಕೊಂಡು ವಾಪಸ್ ಹೋಗುತ್ತವೆ ಎಂಬ ನಂಬಿಕೆ ಚಿಕ್ಕವರಿದ್ದಾಗ ನಮ್ಮೊಳಗೆ ಬೇರು ಬಿಟ್ಟಿತ್ತು. ಈ ಕಾರಣದಿಂದಲೇ ಮನೆಯ ಬಾಗಿಲಿನ ಮೇಲೆ ದಪ್ಪಕ್ಷರದಲ್ಲಿ 'ನಾಳೆ ಬಾ' ಎಂದು ಬರೆಯುತ್ತಿದ್ದೆವು! ಅವತ್ತಿನ ಕಾಲಕ್ಕೆ ಬಾಗಿಲಿನ ಮೇಲೆ ಬರೆಯಲು ಪೇಂಟ್ ಸಿಗುತ್ತಿರಲಿಲ್ಲ. ಹಲವರು ಇದ್ದಿಲು ಬಳಸಿಯೇ 'ನಾಳೆ ಬಾ' ಎಂದು ಬರೆಯುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲಿ ನಡೆದು ಬರುವ ದೆವ್ವಕ್ಕೆ (!?) ಇದ್ದಿಲಿನಲ್ಲಿ ಬರೆದದ್ದು ಕಾಣಿಸದೇ ಹೋಗಬಹುದು ಎಂಬ ಕಾರಣದಿಂದ, ಸೀಮೆಸುಣ್ಣವನ್ನು ನೀರಿಗೆ ಅದ್ದಿ ಆನಂತರವೇ 'ನಾಳೆ ಬಾ' ಎಂದು ಬರೆಯಲಾಗುತ್ತಿತ್ತು! ಆ ಮೂಲಕ ದೆವ್ವಗಳಿಂದ ಪಾರಾದೆವೆಂದು ಭಾವಿಸುವ ಮಹಾಬುದ್ಧಿವಂತರೂ ಇದ್ದರು. ಇಂಥ ಕೆಲಸದ ಮೂಲಕ ದೆವ್ವಗಳನ್ನು ನಾವು ಅಕ್ಷರಸ್ಥರನ್ನಾಗಿಸಿದ್ದೆವು!
- ಎಚ್.ಕೆ. ಶರತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


