ಮಕರಂದ/ದೋಣಿ

ನಾರದರು ಕ್ಷಮೆ ಕೇಳಿದರು

ಒಮ್ಮೆ ಲೋಕಸಂಚಾರಿಯಾದ ನಾರದರು ಶ್ರೀಕೃಷ್ಣನ ಅರಮನೆಗೆ ಅಕಸ್ಮಾತ್ತಾಗಿ ಪೂರ್ವ ಸೂಚನೆ ಇಲ್ಲದೆ ಭೇಟಿ ಇತ್ತರು. ಅವರ ಉದ್ದೇಶ...

Published On :

ಒಮ್ಮೆ ಲೋಕಸಂಚಾರಿಯಾದ ನಾರದರು ಶ್ರೀಕೃಷ್ಣನ ಅರಮನೆಗೆ ಅಕಸ್ಮಾತ್ತಾಗಿ ಪೂರ್ವ ಸೂಚನೆ ಇಲ್ಲದೆ ಭೇಟಿ ಇತ್ತರು. ಅವರ ಉದ್ದೇಶ ಶ್ರೀಕೃಷ್ಣನ ಸಂಗಡ ತ್ರಿಲೋಕಗಳಲ್ಲಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸುವುದಾಗಿತ್ತು. ಅರಮನೆಯ ಹೆಬ್ಬಾಗಿಲಲ್ಲಿ ದ್ವಾರಪಾಲಕರ ಸ್ವಾಗತ ದೊರಕಿತು. ಶ್ರೀ ಕೃಷ್ಣನ ದರ್ಶನವೂ ಆಯಿತು. ತಮಾಷೆಯೆಂದರೆ ಅಲ್ಲಿ, ಶ್ರೀಕೃಷ್ಣನ ತೊಡೆಯ ಮೇಲೆ ಅರ್ಜುನ ತನ್ನ ತಲೆಯನ್ನು ಇಟ್ಟುಕೊಂಡಿದ್ದಾನೆ. ಆ ತಲೆಯನ್ನು ಶ್ರೀಕೃಷ್ಣ ನೇವರಿಸುತ್ತಿದ್ದಾನೆ! ನಾರದರಿಗೆ ಈ ದೃಶ್ಯ ಮಹದಾಶ್ಚರ್ಯವನ್ನು ಉಂಟು ಮಾಡಿತು. ಏನು ಮಾತಾಡಬೇಕೆಂಬುದೇ ನಾರದರಿಗೆ ಹೊಳೆಯುತ್ತಿಲ್ಲ. ತಕ್ಷಣವೇ ನಾರದರು 'ನಾರಾಯಣ- ನಾರಾಯಣ' ಎಂದು ಕೂಗುತ್ತ ಶ್ರೀಕೃಷ್ಣನ ಸಮೀಪಕ್ಕೆ ಬಂದರು. ಆಗಲೇ ಶ್ರೀ ಕೃಷ್ಣನಿಗೆ ನಾರದರ ಆಗಮನದ ಅರಿವು ಉಂಟಾಗಿದ್ದು.
"ನಾರಾಯಣನ ಮೇಲೆ ನರ" ನಾರದರ ಅಂಬೋಣ. ಇವರ ಮಾತಿನ ಸೂಕ್ಷ್ಮತೆಯನ್ನು ಅರಿತ ಶ್ರೀಕೃಷ್ಣ ತಕ್ಷಣವೇ ನಾರದರನ್ನು ತನ್ನ ಹತ್ತಿರಕ್ಕೆ ಬರಮಾಡಿಕೊಂಡು ಅರ್ಜುನನ ತಲೆಯ ಮೇಲೆ ಬಾಗಿ ಕಿವಿಯಲ್ಲಿ ಆಲಿಸುವಂತೆ ಕೇಳಿಕೊಂಡನು. ಅದರಂತೆ ನಾರದರು ಅರ್ಜುನನ ತಲೆ ಮೇಲೆ ಕಿವಿಗಳನ್ನಿಟ್ಟಾಗ ಅರ್ಜುನನ ಪ್ರತಿಯೊಂದು ತಲೆಗೂದಲಿನಲ್ಲೂ 'ಶ್ರೀಕೃಷ್ಣ ಶ್ರೀಕೃಷ್ಣ' ಎಂಬ ನಾಮೋಚ್ಛಾರಣೆ ಕೇಳಿಬರುತ್ತಲಿದೆ. ನಾರದರಿಗೆ ಆಶ್ಚರ್ಯ ಉಂಟಾಯಿತು.
 ತಮ್ಮ ಅಜ್ಞಾನಕ್ಕಾಗಿ ಅವರು ಶ್ರೀಕೃಷ್ಣನ ಕ್ಷಮೆಯಾಚಿಸಿದರು. ನಂತರ ಉಭಯ ಕುಶಲೋಪರಿ ಮಾತುಕತೆಗಳು ಆರಂಭವಾದವು.

- ಎ.ಕೆ. ಪಟ್ಟಾಭಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.