ಮಕರಂದ/ದೋಣಿ

ಊಸರವಳ್ಳಿ

ಬೇಸಿಗೆ ಕಾಲದಲ್ಲಿ ಒಣಗಿದ್ದ ಮರದ ಕೊಂಬೆಯೊಂದಕ್ಕೆ ಅಂಟಿಕೊಂಡು ತಲೆ ಎತ್ತಿ ಬಾಲವನ್ನು ಅಲ್ಲಾಡಿಸದೆ ಊಸರವಳ್ಳಿಯೊಂದು ತನ್ನ ಬಣ್ಣ ಬದಲಾಯಿಸಿತು....

ಊಸರವಳ್ಳಿ
Published On :

ಬೇಸಿಗೆ ಕಾಲದಲ್ಲಿ ಒಣಗಿದ್ದ ಮರದ ಕೊಂಬೆಯೊಂದಕ್ಕೆ ಅಂಟಿಕೊಂಡು ತಲೆ ಎತ್ತಿ ಬಾಲವನ್ನು ಅಲ್ಲಾಡಿಸದೆ ಊಸರವಳ್ಳಿಯೊಂದು ತನ್ನ ಬಣ್ಣ ಬದಲಾಯಿಸಿತು.
ಹಚ್ಚಹಸುರನ್ನು ಕಾಣುವ ಹಂಬಲ ಮನಸ್ಸಲ್ಲಿ. ಬಣ್ಣಗುಂದಿದ ತನ್ನ ದೇಹಕ್ಕೆ ಹಸಿರಿನ ಸ್ಪರ್ಶನೀಡುವ ಹಪಾಹಪಿ. ಆದರೇನು ಮಾಡುವುದು?
ತನ್ನ ಸುತ್ತಲಿರುವ ಮನುಷ್ಯ ತನ್ನ ಬಣ್ಣವನ್ನು ಬದಲಾಯಿಸುವುದನ್ನು ನೋಡಿದಾಗ ದಿಗ್ಬ್ರಮೆ.
ಅರಿಶಿನ, ಹಸಿರು, ಕಪ್ಪು, ಕೆಂಪು... ಸಾಕೋ ಸಾಕಪ್ಪಾ ಈ ಬಣ್ಣ ಬದಲಾವಣೆ... ನನ್ನನ್ನೇ ನಾಚಿಸುವಂತಿದೆಯಲ್ಲಾ!!
ಒಣಗಿದ ಕೊಂಬೆಯಂತಿರುವ ಮಾಸಿದ ಬಣ್ಣ ಸಾಕಾದಾಗ, ಹತ್ತಿರವೇ ಇದ್ದ ಹಸಿರು ಹುಲ್ಲಿಗೆ ಜಿಗಿದದ್ದಾಯ್ತು.
ಹಸಿರು ಬಣ್ಣವೂ ಬೇಜಾರು ಎಂದೆನಿಸಿದಾಗ, ಮಣ್ಣಿನಲ್ಲಿ ಮಿಂದು ಕೆಂಪು ಬಣ್ಣ ಮೆತ್ತಿಕೊಂಡಿತು.
ಆಮೇಲೆ ಹುಲ್ಲುಗಾವಲಿಗೆ ಜಿಗಿದಾಗ, ಹಸಿರು ಎಂಬುದು ಮರೀಚಿಕೆಯೆಂಬಂತೆ ಕಂಡುಬಂತು.
ಆಮೇಲೆ ನಾಲಗೆ ಹೊರಗೆ ಹಾಕಿ, ಕಣ್ಣರಳಿಸಿ ಅದು ತಲೆಯೆತ್ತಿ ಮಣ್ಣಿನ ಬಣ್ಣಕ್ಕೇ ಹೊಂದಿಕೊಂಡು ಸಾಗಿತು.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.