ಮಕರಂದ/ದೋಣಿ

ಪೂರ್ಣಚಂದ್ರ ದರ್ಶನ

ಪೂರ್ಣಚಂದ್ರ ದರ್ಶನ
Published On :

ಕನ್ನಡದ ಓದುಗರೆದೆಯಲ್ಲಿ 'ಮಾಯಾಲೋಕ' ಸೃಷ್ಟಿಸಿ ಹೋದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬದುಕಿನಲ್ಲೂ, ಬರಹಗಳಲ್ಲೂ ವಿಶೇಷತೆ ಮೆರೆದವರು. ಅವರ ಬದುಕೂ ಸಾಹಿತ್ಯದಷ್ಟೇ ಥ್ರಿಲ್ಲಾಗಿ ಓದಿಸಿಕೊಂಡು ಹೋಗುತ್ತದೆ. ತೇಜಸ್ವಿ ಬದುಕಿನ ಬಗ್ಗೆ ಸಾಕಷ್ಟು ಬರಹಗಳು ಬಂದಿವೆ. ಅಲ್ಲದೆ, ಕೃಪಾಕರ ಸೇನಾನಿ ಅವರೂ ಒಂದು ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಈ ದೃಶ್ಯಚರಿತೆಗೆ ಹೊಸ ಸೇರ್ಪಡೆಯಾಗಿರುವುದು 'ಮತ್ತೆ ಮತ್ತೆ ತೇಜಸ್ವಿ'. ಯುವ ರಂಗಕಲಾವಿದ- ನಿರ್ದೇಶಕ ಪರಮೇಶ್ವರ್ 'ಮತ್ತೆ ಮತ್ತೆ ತೇಜಸ್ವಿ' ಡಾಕ್ಯುಮೆಂಟರಿಯನ್ನು ನಿರ್ದೇಶಿಸಿದ್ದು, ತೇಜಸ್ವಿಯವರ ಒಡನಾಡಿಗಳೆಲ್ಲ ಇಲ್ಲಿ ಮಾತಾಗಿದ್ದಾರೆ. ತೇಜಸ್ವಿಯವರ ಕಾಣದ ಮುಖಗಳ ಅನಾವರಣ ಇಲ್ಲಿದೆ. ತೇಜಸ್ವಿ ಮಿತ್ರರಾದ ರಘು, ಶ್ರೀರಾಮ್, ಕಡಿದಾಳ್ ಶಾಮಣ್ಣ, ಪ್ರದೀಪ್ ಕೆಂಜಿಗೆ, ಬಾಪು ದಿನೇಶ್, ಜಿ.ಎಚ್. ನಾಯಕ... ಮತ್ತಿತರರು ಇದರಲ್ಲಿ ತೇಜಸ್ವಿಯವರ ಬದುಕಿನ ಪರಿಸರವನ್ನು ಬಿಚ್ಚಿಟ್ಟಿದ್ದಾರೆ. ಡಿವಿಡಿಗಾಗಿ ಸಂಪರ್ಕಿಸಿ, ಮೊ. 90080 99686.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.