ನ್ಯಾನೋಕಥೆಗಳು
ಮನೆಯಲ್ಲೇ ದೇವರಂತಿರುವ ತಂದೆತಾಯಿಯರನ್ನು ಮನೆಗಾವಲನ್ನಾಗಿ ಮಾಡಿ ದಂಪತಿಗಳಿಬ್ಬರೂ ದೇವರ ದರ್ಶನಕ್ಕೆಂದು ಪ್ರವಾಸದ ನೆಪದಲ್ಲಿ ಊರೂರು ತಿರುಗುತ್ತಿದ್ದರು.
ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆಯ ನಾಟಕ ಮಾಡುತ್ತಿದ್ದ ಭ್ರಷ್ಟನೊಬ್ಬ ತನಗೆ ದಿನವೂ ಮಾಮೂಲು ಕೊಡುವವನ ಫೋನ್ ಬಂದ ಕೂಡಲೇ ಕ್ಯಾಂಡಲ್ ನಂದಿಸಿ ಎಂಜಲು ಕಾಸು ನುಂಗಲು ಓಡಿಹೋದ.
ಅದ್ಯಾವುದೋ ಪಕ್ಷದ ಕಾರ್ಯಕರ್ತರು ಮತದಾರರನ್ನು ಓಲೈಸಲು ಅಕ್ಕಿ ಹಂಚುತ್ತಿದ್ದಾರೆಂದು ಅವರನ್ನೆಲ್ಲ ಅಟ್ಟಾಡಿಸಿಕೊಂಡು ಹೊಡೆದು ಸುಸ್ತಾದ ಈ ಪಕ್ಷದ ಕಾರ್ಯಕರ್ತರಿಗೆ ರಾತ್ರಿ ಪಾನಗೋಷ್ಠಿಯ ಪಾರ್ಟಿ ನೀಡಲಾಯಿತು.
ಪಿಜ್ಜಾ ತಿಂದು ಕೇಳಿದಷ್ಟು ದುಡ್ಡು ಕೊಟ್ಟು ಹೊರಟ ವ್ಯಕ್ತಿಯೊಬ್ಬ ತನ್ನ ಚಪ್ಪಲಿ ಹೊಲೆದ ಮುದುಕನಿಗೆ ಕೊಡುವ 5 ರುಪಾಯಿ ಹೆಚ್ಚಾಯಿತು ಎಂದೆನಿಸಿ 3 ರುಪಾಯಿ ಕೊಟ್ಟು ಕಾಲವನ್ನು ಬೈಯುತ್ತಾ ಮನೆಗೆ ಹೋದ.
= ಮಧು ಮಾಲ್ವೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

