ನ್ಯಾನೋಕಥೆಗಳು
ಆತನು ಅದೆಲ್ಲಿಂದಲೋ ತಂದು, ಅಕ್ಕರೆಯಿಂದ ನೆಟ್ಟು, ಪ್ರೀತಿಸಿ, ಪೋಷಿಸಿದ ಸಸ್ಯವು ಬೆಳೆದು ಹೆಮ್ಮರವಾಯಿತು. ಆದರೆ ನೆರಳು, ಹವಾ, ಹಣ್ಣುಗಳನ್ನು ನೀಡುವ ಬದಲು ಆತನ ಮೇಲೆಯೇ ಮುರಿದು ಬಿದ್ದು, ಆತನ ಸಾವಿಗೆ ಕಾರಣವಾದದ್ದು ವಿಪರ್ಯಾಸ.
ಮುಂಜಾನೆಯ ಹೊಂಬಿಸಿಲಿನಲ್ಲಿ ಶ್ರೇಷ್ಠರು ತಮ್ಮೊಳಗೆ ಯಾರೆಂಬ ತರ್ಕದಲ್ಲಿ ತೊಡಗಿದ್ದ ದಾಸವಾಳ ಹಾಗೂ ದೂರ್ಲೆ ಹಲ್ಲುಗಳನ್ನು ಪೂಜಾರಿಯು ಕೋಯ್ದು ದೇವರ ಮುಡಿಯಲ್ಲಿ ಇರಿಸಿದಾಗ ತಾವೆಲ್ಲರೂ ಸಮಾನರು ಎಂಬ ಅರಿವು ಉಂಟಾಯಿತು.
-ಅರವಿಂದ ಹೆಗಡೆ ಹೊಸ್ತೋಟ
ಭೂಮಿಯ ಮೇಲೆ ಪ್ರೀತಿಸಲು ಜನರು, ಉಪಯೋಗಿಸಲು ವಸ್ತುಗಳಿದ್ದವು. ಆದರೆ ಬಹುತೇಕ ಮಂದಿ ವಸ್ತುಗಳನ್ನು ಪ್ರೀತಿಸಿ, ಜನರನ್ನು ಉಪಯೋಗಿಸಿಕೊಳ್ಳುತ್ತಿದ್ದರು!?
ತನ್ನ ಮಗನಿಗೆ ಮಾರಣಾಂತಿಕ ಕಾಯಿಲೆಯಿರುವ ವಿಷಯವನ್ನು ಮುಚ್ಚಿಟ್ಟು ಬಡ ಸುಂದರ ಕನ್ಯೆಯೊಂದಿಗೆ ಮಗನ ಮದುವೆ ಮಾಡಿದಳು. ವಿವಾಹವಾಗಿ ಕೆಲ ದಿನಗಳು ಸಂದ ನಂತರ, ಮಗನು ಮಡಿಯಲು, ಅವನ ಸಾವಿಗೆ 'ಸೊಸೆಯ ಕಾಲ್ಗುಣ ಸರಿಯಿಲ್ಲ' ಎಂಬ ಸುದ್ದಿ ಹಬ್ಬಿಸಿದಳು!
ದಂಪತಿಗಳು ಮಕ್ಕಳಾಗದ್ದಕ್ಕೆ ವ್ಯಕ್ತಿಯೊಬ್ಬನ ಸಲಹೆಯಂತೆ, ಅದೀಗ ತಾನೆ ಮರಿ ಹಾಕಿದ್ದ ಕುರಿಯನ್ನು ತಂದು ದೇವರಿಗೆ ಹರಕೆಯಾಗಿ ಬಲಿ ಕೊಟ್ಟಿದ್ದರು!?
-ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

