ಜನರಿಗೆ ಮೂಲ ಆದಾಯ, ಶಾಲೆ, ಆಸ್ಪತ್ರೆ ಸೌಲಭ್ಯ: ಇದು ಫುಟ್ ಬಾಲ್ ಆಟಗಾರ ಸಾಡಿಯೊ ಮಾನೆ ಹಳ್ಳಿಯನ್ನು ರೂಪಾಂತರಿಸಿದ ಕಥೆ...
ಸೆನೆಗಲೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಬಡತನದಲ್ಲಿ ಹುಟ್ಟಿ ಬೆಳೆದು ನಂತರ ತನ್ನ ಹಳ್ಳಿಯನ್ನು ಯಾವ ರೀತಿ ಪರಿವರ್ತಿಸಿದ ಎಂಬ ರೋಚಕ ಕಥೆಯಿದು.

"ನನಗೆ ಹತ್ತು ಫೆರಾರಿಗಳು, 20 ವಜ್ರದ ಗಡಿಯಾರಗಳು, ಎರಡು ಜೆಟ್ ವಿಮಾನಗಳು ಏಕೆ ಬೇಕು? ಅದರಿಂದ ಜನರಿಗೆ ಏನು ಉಪಯೋಗ, ನಾನು ಹಸಿವಿನಿಂದ ಬಳಲುತ್ತಿದ್ದೆ, ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆ. ಬರಿಗಾಲಿನಲ್ಲಿ ಆಟವಾಡುತ್ತಿದ್ದೆ. ಶಾಲೆಗೆ ಹೋಗುತ್ತಿರಲಿಲ್ಲ, ಇವತ್ತು ನಾನು ಬೇರೆಯವರಿಗೆ ಸಹಾಯ ಮಾಡುವ ಮಟ್ಟಕ್ಕೆ ಬೆಳೆದಿದ್ದೇನೆ, ಸಹಾಯ ಮಾಡುತ್ತೇನೆ'' ಇದು ಸೆನೆಗಲೀಸ್ ವೃತ್ತಿಪರ ಫುಟ್ ಬಾಲ್ ಆಟಗಾರ ಸಾಡಿಯೊ ಮಾನೆ ಮಾತುಗಳು.
ಊಹಿಸಿಕೊಳ್ಳಿ, ಕ್ರೀಡಾ ತಾರೆಯೊಬ್ಬರು ಇದನ್ನು ಹೇಳುವುದು ಮಾತ್ರವಲ್ಲ, ಆ ರೀತಿ ಬದುಕಿ ತೋರಿಸಿದ್ದಾರೆ. ಅವರು ಮತ್ಯಾರೋ ಅಲ್ಲ, ಸಾಡಿಯೊ ಮಾನೆ. ಸೆನೆಗಲೀಸ್ ಫುಟ್ಬಾಲ್ ಸೂಪರ್‌ಸ್ಟಾರ್ ಬಡತನದಲ್ಲಿ ಹುಟ್ಟಿ ಬೆಳೆದು ನಂತರ ತನ್ನ ಹಳ್ಳಿಯನ್ನು ಯಾವ ರೀತಿ ಪರಿವರ್ತಿಸಿದ ಎಂಬ ರೋಚಕ ಕಥೆಯಿದು.
ಆಫ್ರಿಕಾದ ಬಡ ಪ್ರದೇಶಗಳಲ್ಲಿ ಒಂದಾದ ದ್ರಾಕ್ಷಿಹಣ್ಣಿನ ತೋಟದ ಮಧ್ಯೆ ಹುಟ್ಟಿಕೊಂಡ ಕನಸು ಈಗ ಅಂತಾರಾಷ್ಟ್ರೀಯ ವೃತ್ತಿಜೀವನವಾಗಿ ರೂಪಾಂತರಗೊಳ್ಳುವಲ್ಲಿಯವರೆಗೆ ಬೆಳೆಯಿತು. ಮಾನೆ ಅವರು 2019 ರಲ್ಲಿ ಚಾಂಪಿಯನ್ಸ್ ಲೀಗ್ ನ್ನು ಗೆದ್ದು, ತನ್ನ ಹಳ್ಳಿಯಾದ ಬಂಬಾಲಿಯಲ್ಲಿ ಬೆಳಗಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ.
ಬಂಬಾಲಿಯು ಸೇಧಿಯು ಪ್ರಾಂತ್ಯದಲ್ಲಿದೆ, ಅಲ್ಲಿ ಸುಮಾರು ಶೇಕಡಾ 70ರಷ್ಟು ಮಂದಿ ಬಡ ಕುಟುಂಬದ ಹಿನ್ನೆಲೆಯವರು.
ಮಾನೆ ತನ್ನ ಗಳಿಕೆಯ ಒಂದು ಮಿಲಿಯನ್ ಪೌಂಡ್‌ಗಳನ್ನು ಬಂಬಾಲಿಯಾಗೆ ಮೀಸಲಿಡುವ ಮೂಲಕ ಹಳ್ಳಿಯನ್ನು ಬೆಳಗಿಸಿದ್ದಾರೆ. ಶಾಲೆಗಳ ನಿರ್ಮಾಣಕ್ಕೆ 3 ಲಕ್ಷ ಡಾಲರ್, ಆಸ್ಪತ್ರೆಗಳ ನಿರ್ಮಾಣಕ್ಕೆ 6 ಲಕ್ಷ ಡಾಲರ್ ಹಣ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಇಂಟರ್‌ನೆಟ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ.
ಏಳನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಇವರು ಊರಿನಲ್ಲಿ ಅಂಚೆ ಕಚೇರಿ, ಪೆಟ್ರೋಲ್ ಬಂಕ್, ಮಸೀದಿಯನ್ನು ಕಟ್ಟಿಸಿದ್ದಾರೆ. ಪ್ರಸಿದ್ಧ ಸಾರ್ವಜನಿಕ ಮೂಲ ಆಧಾಯ ಯೋಜನೆ ಅನುಷ್ಠಾನಗೊಂಡು ಪ್ರತಿ ತಿಂಗಳು ಬಡ ಕುಟುಂಬಗಳಿಗೆ 76 ಡಾಲರ್ ಧನ ಸಹಾಯ ಮಾಡುತ್ತಾರೆ.
ನಮ್ಮ ದೇಶದ ಕ್ರೀಡಾ ತಾರೆಗಳು, ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ಸಾಡಿಯೋ ಮಾನೆ ರೀತಿ ಯೋಚಿಸಿ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ನಮ್ಮ ದೇಶ ಎಷ್ಟು ಉದ್ದಾರವಾಗಬಹುದಲ್ಲವೇ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


