ಒಡಿಶಾ: ಪತ್ನಿಯ ಆಸೆ ಈಡೇರಿಸಲು ಬರೋಬ್ಬರಿ 7 ಕೋಟಿ ರೂ. ದೇಗುಲ ಕಟ್ಟಿಸಿದ ಪತಿ!
ಒಡಿಶಾದ ಉದ್ಯಮಿಯೊಬ್ಬರು ಪತ್ನಿಯ ಬಯಕೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ ಅಪರೂಪದ ಘಟನೆ ವರದಿಯಾಗಿದೆ.

ಜೈಪುರ: ಒಡಿಶಾದ ಉದ್ಯಮಿಯೊಬ್ಬರು ಪತ್ನಿಯ ಬಯಕೆ ಈಡೇರಿಸುವ ಸಲುವಾಗಿ ಬರೋಬ್ಬರಿ 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಕಟ್ಟಿಸಿದ ಅಪರೂಪದ ಘಟನೆ ವರದಿಯಾಗಿದೆ.
ಪ್ರಸ್ತುತ ಹೈದರಾಬಾದ್ನಲ್ಲಿ ನೆಲೆಸಿರುವ ಖೇತ್ರಬಾಸಿ ಲೆಂಕಾ ಎಂಬ ಉದ್ಯಮಿ ತಮ್ಮ ಪತ್ನಿ ವೈಜಯಂತಿ ಅವರಿಗಾಗಿ ಒಡಿಶಾದ ಜೈಪುರ ಜಿಲ್ಲೆಯ ಬಿಂಝಾರ್ಪುರದ ಚಿಕಾನ ಗ್ರಾಮದಲ್ಲಿ ದೇವಿ ‘ಮಾ ಸಂತೋಷಿ’ ಭವ್ಯ ದೇಗುಲ ನಿರ್ಮಾಣವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ವೈಜಯಂತಿ ಅವರು ದೇವಿ ‘ಮಾ ಸಂತೋಶಿ’ಯ ಪರಮ ಭಕ್ತೆಯಾಗಿದ್ದಾರೆ. ಅವರು ತಮ್ಮ ತವರು ಗ್ರಾಮದಲ್ಲಿ ‘ಮಾ ಸಂತೋಷಿ’ ದೇಗುಲ ನಿರ್ಮಿಸಬೇಕೆಂಬ ಇಚ್ಛೆ ಹೊಂದಿದ್ದರು. ಹೀಗಾಗಿ ಲೆಂಕಾ ಅವರು ದೇಗುಲ ನಿರ್ಮಿಸಿದ್ದಾರೆ ಎಂದು ಒಡಿಶಾ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಭಾರತದ ವಾಸ್ತುಶಿಲ್ಪದ ಪ್ರಕಾರ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು, ಮಾ ಸಂತೋಷಿ ದೇವಸ್ಥಾನದಲ್ಲಿ ಶಿವ, ಗಣಪತಿ, ಹನುಮಂತ ಹಾಗೂ ನವಗ್ರಹಗಳನ್ನೂ ಪೂಜಿಸಲು ಅವಕಾಶ ಮಾಡಿಕೊಡಲಾಗಿದೆ.
2008ರಲ್ಲಿ ಆರಂಭವಾಗಿದ್ದ ದೇವಸ್ಥಾನ ನಿರ್ಮಾಣ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದ್ದು, ದಂಪತಿಯ ಆಶಯದಂತೆ ಉದ್ಘಾಟನೆಯೂ ಆಗಿದೆ. ಸುಂದರವಾದ ಕೆತ್ತನೆ ಮತ್ತು ವಿನ್ಯಾಸ ಹೊಂದಿರುವ ದೇಗುಲವು 86 ಅಡಿಗಳಷ್ಟು ವಿಸ್ತಾರವಾದ ಪ್ರವೇಶದ್ವಾರವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


