ಯಲ್ಲಾಪುರದಲ್ಲಿ ಹೊಸ ಏಡಿ ಪತ್ತೆ, ಇದು ದೇಶದ 75ನೇ ಪ್ರಭೇದ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ...

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ‘ದ್ವಿವರ್ಣ’ ಎಂಬ ಹೊಸ ಜಾತಿಯ ಏಡಿ ಪ್ರಭೇದ ಪತ್ತೆಯಾಗಿದ್ದು, ಕಾಕತಾಳೀಯವೆಂಬಂತೆ, ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ದಿನವಾದ ಆಗಸ್ಟ್ 15ರಂದು ಈ ದ್ವಿವರ್ಣಕ್ಕೆ ವೈಜ್ಞಾನಿಕವಾಗಿ ದೇಶದ 75ನೇ ಏಡಿ ಪ್ರಬೇಧ ಎಂಬ ಮನ್ನಣೆ ಸಿಕ್ಕಿದೆ.
ಯಲ್ಲಾಪುರ ಸಮೀಪದ ಪುಟ್ಟ ಹಳ್ಳಿಯ ವನ್ಯಜೀವಿ ಉತ್ಸಾಹಿ ಹಾಗೂ ಛಾಯಾಗ್ರಾಹಕ ಗೋಪಾಲ ಕೃಷ್ಣ ಹೆಗಡೆ ಹಾಗೂ ಕದ್ರಾ ಮೂಲದ ಫಾರೆಸ್ಟ್ ಗಾರ್ಡ್ ಪರಶುರಾಮ ಭಜಂತ್ರಿ ಅವರು ಭರೆಯ ಅರಣ್ಯದಲ್ಲಿ ಈ ವಿಶಿಷ್ಟ, ಆಕರ್ಷಕ ಬಣ್ಣಗಳ ಸಿಹಿನೀರಿನ ಏಡಿಯನ್ನು ಪತ್ತೆ ಹಚ್ಚಿದ್ದಾರೆ.
ಆವಿಷ್ಕಾರವಾದ ಒಂದು ವರ್ಷದ ನಂತರ, ಬಿಳಿ ತಲೆ ಮತ್ತು ನೇರಳೆ ದೇಹವನ್ನು ಹೊಂದಿರುವ ಡ್ಯುಯಲ್-ಟೋನ್ ಏಡಿಗೆ ಘಟಿಯಾನ ದ್ವಿವರ್ಣ ಎಂದು ಹೆಸರಿಸಲಾಗಿದೆ.
ಸ್ಥಳೀಯ ತಜ್ಞರ ಪ್ರಕಾರ, ಏಡಿಯು ಪಶ್ಚಿಮ ಘಟ್ಟಗಳ ಕಲ್ಲಿನ ಹೊರಪದರದ ಜಲಮೂಲಗಳ ನಡುವೆ ವಾಸಿಸುತ್ತದೆ. "ಇದು ವಿಶಿಷ್ಟವಾದ ಏಡಿಗಳಲ್ಲಿ ಒಂದಾಗಿದೆ" ಎಂದು ಹೆಗ್ಡೆ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಈ ಅಪರೂಪದ ಏಡಿಯನ್ನು ಪತ್ತೆಹಚ್ಚಿದ್ದಕ್ಕಾಗಿ ಭಾರತೀಯ ಭೌಗೋಳಿಕ ಸಮೀಕ್ಷೆಯಿಂದ ಹೆಗಡೆ ಮತ್ತು ಭಜಂತ್ರಿ ಅವರಿಗೆ ‘ನಾಗರಿಕ ವಿಜ್ಞಾನಿಗಳು’ ಎಂಬ ಬಿರುದು ಪ್ರದಾನ ಮಾಡಲಾಗಿದೆ.
ಸುಮಾರು 3 ಇಂಚು ಉದ್ದ ಮತ್ತು 2 ಇಂಚು ಅಗಲವಿರುವ ಈ ದ್ವಿವರ್ಣ ಏಡಿ ಪಾಚಿ ಮತ್ತು ಸಣ್ಣಪುಟ್ಟ ಹುಳುಗಳನ್ನು ಸೇವಿಸುತ್ತದೆ, ಜೂನ್ 30, 2021 ರಂದು ನಾವು ಮೊದಲ ಬಾರಿಗೆ ಏಡಿಯನ್ನು ನೋಡಿದ್ದೇವೆ ಎಂದು ಹೆಗ್ಡೆ ಮತ್ತು ಭಜಂತ್ರಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


