ಪಶ್ಚಿಮ ಬಂಗಾಳ: ಅಪ್ರಾಪ್ತ ಬಾಲಕಿಯ ವಿವಾಹ ನಿಲ್ಲಿಸಿದ ಕ್ಲಾಸ್ ಮೇಟ್!
ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕೊಲ್ಕತ್ತ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ವಿವಾಹವನ್ನು ಆಕೆಯ ಕ್ಲಾಸ್ ಮೇಟ್ ನಿಲ್ಲಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕಳೆದ ವಾರದಿಂದ ತನ್ನ ಕ್ಲಾಸ್ ಮೇಟ್ ಶಾಲೆಗೆ ಗೈರು ಹಾಜರಿಯನ್ನು ಗಮನಿಸಿದ ಗೊಲಾರ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಶುಹಿಲಾ, ಮದುವೆ ನಿಗದಿಯಾಗಿರುವುದು ಗೊತ್ತಾಗಿದೆ. ನಂತರ ಆಕೆಯ ಮನೆಗೆ ತೆರಳಿ, ಶಾಲೆಗೆ ಕಳುಹಿಸುವಂತೆ ಒತ್ತಾಯಿಸಿದ್ದಾಳೆ. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬಾಲಕಿಯ ಕುಟುಂಬ ಸದಸ್ಯರು ಹಿಂಬಾಗಿಲಿನ ಮೂಲಕ ವರನ ಮನೆಗೆ ರಹಸ್ಯವಾಗಿ ಹುಡುಗಿಯನ್ನು ಕಳುಹಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಕ್ಲಾಸ್ ಮೇಟ್ ಶುಹಿಲಾ, ವರನ ಮನೆಗೆ ತೆರಳಿ, ಅನಿರ್ದಿಷ್ಟಾವದಿ ಪ್ರತಿಭಟನೆ ಆರಂಭಿಸಿದ್ದಾಳೆ. ಇದರಿಂದ ಸಮಸ್ಯೆಯಾಗುವುದನ್ನು ಅರಿತ ವರನ ಕಡೆಯವರು, ಬಾಲಕಿಯನ್ನು ಪ್ರತಿಭಟನಾನಿರತ ವಿದ್ಯಾರ್ಥಿ ಕೈಗೆ ಹಸ್ತಾಂತರಿಸಿದ್ದಾರೆ. ನಂತರ ಆಕೆಯನ್ನು ಶಾಲೆಗೆ ಕರೆದೊಯ್ಯಲಾಗಿದೆ.
ವಿದ್ಯಾರ್ಥಿನಿ ಶುಹಿಲಾ ಧೈರ್ಯವನ್ನು ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ಚಂದ್ರ ಪಾಡಿಯಾ ಕೊಂಡಾಡಿದ್ದಾರೆ. ಆಕೆಯ ಬದ್ಧತೆಯ ಕಾರಣದಿಂದ ಮದುವೆ ನಿಂತಿದೆ ಎಂದು ಅವರು ಹೇಳಿದ್ದಾರೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡುವುದಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಮಾತು ನೀಡಿದ್ದಾರೆ ಎಂದು ಬಿಡಿಒ ದೀಪಕ್ ಕುಮಾರ್ ಘೋಷ್ ಹೇಳಿದ್ದಾರೆ.
ಹಣಕಾಸಿನ ತೊಂದರೆಯಿಂದ ಬಾಲಕಿ ಕುಟುಂಬದವರು ಅಪ್ರಾಪ್ತ ವಯಸ್ಸಿನಲ್ಲಿ ಮದುವೆಗೆ ಮುಂದಾಗಿದ್ದರು ಎಂದು ಬಾಲಕಿಯ ನೆರೆಹೊರೆಯವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


