14 ವರ್ಷಗಳ ಹಿಂದೆ ಕಾಣೆಯಾದ ಹುಡುಗಿ ಮನೆಗೆ ವಾಪಸ್: ಜಾರ್ಖಂಡ್ ಸರ್ಕಾರದ ಕಾರ್ಯಕ್ಕೆ ಶ್ಲಾಘನೆ
ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. 14 ವರ್ಷಗಳ ಹಿಂದೆ ಕಾಣೆಯಾದ ಬಾಲಕಿಯನ್ನು ಪಾಲಕರ ಬಳಿ ಸೇರಿಸಲಾಗಿದೆ.

ರಾಂಚಿ: ಸರ್ಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಇಲ್ಲಿದೆ. ಜಯಂತಿ ಲಕ್ರ ಎನ್ನುವ ಬಾಲಕಿ ಜಾರ್ಖಂಡ್ ರಾಜ್ಯದ ಗುಮ್ಲಾ ಗ್ರಾಮದ ನಿವಾಸಿ. ಆಕೆ 14 ವರ್ಷಗಳ ಹಿಂದೆ ಕಾಣೆಯಾಗಿದ್ದಳು.
ಇದನ್ನೂ ಓದಿ: ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೆಬಲ್!
ಬಾಲಕಿ ಪತ್ತೆಗಾಗಿ ಪಾಲಕರು ಪೊಲೀಸರಿಗೆ, ಸಂಬಂಧ ಪಟ್ತವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಮುಖ್ಯಮಂತ್ರಿಯರವಲ್ಲಿಗೂ ದೂರು ತಲುಪಿತ್ತು. ಆದರೆ ಬಾಲಕಿಯ ಇರುವಿಕೆ ಬಗ್ಗೆ ಕ್ಲೂಗಳು ಸಿಕ್ಕಿರಲಿಲ್ಲ.
ಇದನ್ನೂ ಓದಿ: ಬಾಲಕನ ಜೀವ ಉಳಿಸಿದ ಕಾರ್ಮಿಕನಿಗೆ ರೈಲ್ವೇ ಇಲಾಖೆ ಗೌರವ
ಕೆಲದಿನಗಳ ಹಿಂದೆ ಕಾಣೆಯಾಗಿದ್ದ ಜಯಂತಿ ಲಕ್ರ ಪಂಜಾಬಿನಲ್ಲಿ ಇರುವ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿತ್ತು. ಒಡನೆಯೇ ಸೊರೆನ್ ಅವರು ಬಾಲಕಿಯನ್ನು ಮರಳಿ ಕರೆತರಲು ಅಗತ್ಯ ಏರ್ಪಾಡು ಮಾಡುವಂತೆ ಆದೇಶ ನೀಡಿದರು.
ಅದರಂತೆ ಅಧಿಕಾರಿಗಳು ಪಂಜಾಬ್ ನಲ್ಲಿ ಕೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಜಯಂತಿಯನ್ನು ಮರಳಿ ಮನೆಗೆ ಕರೆತಂದಿದ್ದಾರೆ.
Related Article
ಮಹಾರಾಷ್ಟ್ರ: ಓಡಿ ಹೋಗಿದ್ದ, 'ಕಾಣೆಯಾಗಿದ್ದ' 56 ಯುವತಿಯರು ಮರಳಿ ಕುಟುಂಬಕ್ಕೆ ಸೇರ್ಪಡೆ!
ಮಹದೇಶ್ವರ ಬೆಟ್ಟ: ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!
ಬೆಂಗಳೂರು: 3 ತಿಂಗಳ ಹಿಂದೆ ಕಾಣೆಯಾಗಿದ್ದ ಅರ್ಚಕನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ
ಕಾಣೆಯಾಗಿದ್ದ ವೈದ್ಯಾಧಿಕಾರಿ ಹಾಸನದಲ್ಲಿ ಪತ್ತೆ; ಹೇಳಿಕೆಯಲ್ಲಿ ಗೊಂದಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


