ಕೈಮಗ್ಗ ಕಾರ್ಖಾನೆಯಾಗಿ ಬದಲಾದ ಸೆಂಟ್ರಲ್ ಜೈಲು: ಕೈದಿಗಳು ತಯಾರಿಸಿದ ವಸ್ತ್ರ ಮಾರಿ 40 ಲಕ್ಷ ರೂ. ಆದಾಯ
ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಇಲ್ಲಿನ ವಸ್ತ್ರಗಳಿಗೆ ಬೇಡಿಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೋಪಾಲ್: 2016ರಲ್ಲಿ 22 ವರ್ಷದವನಾಗಿದ್ದ ಯುವಕ ಮಣಿರಾಂ ಎಂಬಾತನಿಗೆ ಅತ್ಯಾಚಾರ ಪ್ರಕರಣದಡಿ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಮಧ್ಯಪ್ರದೇಶ ಹೈಕೋರ್ಟ್ ನಿಂದ ಭರವಸೆಯ ಆಶಾಕಿರಣ ಮೂಡಿ ಆತ ಬಿಡುಗಡೆಯಾಗಿದ್ದಾನೆ.
ಸೆಂಟ್ರಲ್ ಜೈಲಿನಿಂದ ಹೊರಬಂದಿರುವ ಆತುದ್ಯೋಗಕ್ಕಾಗಿ ಏನು ಮಾಡುವುದು, ತನಗೆ ಯಾರು ಕೆಲಸ ಕೊಡುತ್ತಾರೆ, ಭವಿಷ್ಯ ಹೇಗೆ ಎಂಬುದರ ಚಿಂತೆ ಮಾಡುತ್ತಿಲ್ಲ. ಜೈಲಿನ ಜೀವನ ಆತನನ್ನು ಬದಲಿಸಿದೆ. ಕೈಮಗ್ಗದಲ್ಲಿ ಸೀರೆ ತಯಾರಿ ಮಾಡುವ ಕಲೆಯನ್ನು ತರಬೇತಿ ನೀಡುವ ಕೇಂದ್ರವನ್ನು ಆತ ಶುರುಮಾಡುತ್ತಿದ್ದಾನೆ.
ಮಣಿರಾಂ ರೀತಿಯೇ ಅವನ ಜೊತೆಯಿದ್ದ 175 ಮಂದಿ ಸಹಕೈದಿಗಳು ಕೂಡ ಜೈಲಿನಲ್ಲಿ ಕೈಮಗ್ಗ ತರಬೇತಿ ಪಡೆದು ಸೀರೆ ಸೇರಿದಂತೆ ವಸ್ತ್ರ ತಯಾರಿಯಲ್ಲಿ ತೊಡಗಿದ್ದರು. ಮೂರು ವರ್ಷಗಳ ಕಾಲ ಕಠಿಣ ತರಬೇತಿ ಪಡೆದು ಅವರೆಲ್ಲರೂ ಹುರಿಗೊಂಡಿದ್ದಾರೆ. ಹಲ ವರ್ಷಗಳಿಂದ ಜೈಲಿನಿಂದಲೇ ತಯಾರಿಸುತ್ತಿದ್ದ ವಸ್ತ್ರಗಳು ಜಾಗತಿಕ ಮಟ್ತದಲ್ಲಿ ಮಾರುಕಟ್ಟೆಯನ್ನು ಪಡೆದುಕೊಂಡಿದೆ.
ಜೈಲಿನಿಂದ ಬಿಡುಗಡೆಯಾಗಿರುವ ಮಣಿರಾಂ ತನ್ನ ಗ್ರಾಮದಲ್ಲಿ ಕೈಮಗ್ಗ ಘಟಕ ಹಾಗೂ ತರಬೇತಿ ಕೇಂದ್ರವನ್ನು ತೆರೆಯುತ್ತಿದ್ದಾರೆ. ದಿಗಂಬರ್ ಜೈನ್ ಸಮುದಾಯ ಮತ್ತು ಸೆಂಟ್ರಲ್ ಜೈಲು ಸಹಯೋಗದೊಂದಿಗೆ ತಾನು ಕೈಮಗ್ಗ ತರಬೇತಿ ಪಡೆಯುವಂತಾಯಿತು ಎಂದು ಮಣಿರಾಂ ಸ್ಮರಿಸುತ್ತಾರೆ.
ಜೈಲಿನಲ್ಲಿದ್ದುಕೊಂಡೇ ಅವರು 70,000 ರೂ. ಸಂಪಾದಿಸಿದ್ದಾಗಿ ಮಣಿರಾಂ ಹೆಮ್ಮೆಯಿಂದ ಹೇಳುತ್ತಾರೆ. ಅಲ್ಲದೆ ಈಗ ಘತಕ ಶುರುಮಾಡಲು ಬ್ಯಾಂಕ್ ಸಾಲ ತೆಗೆಯಲು ಜೈಲು ಆಡಳಿತ ಮಂಡಳಿಯೇ ಸಹಕಾರ ನೀಡಿದೆ.
ಮಧ್ಯಪ್ರದೇಶ ಸೆಂಟ್ರಲ್ ಜೈಲ್ ಕೈದಿಗಳು ತಯಾರಿಸಿದ ವಸ್ತ್ರ ಮಾರಾಟದಿಂದ 40 ಲಕ್ಷ ಆದಾಯ ಗಳಿಸಿದೆ ಎನ್ನುವುದು ಗಮನಾರ್ಹ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಇಲ್ಲಿನ ವಸ್ತ್ರಗಳಿಗೆ ಬೇಡಿಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Article
ಕೋಟಿ ಕೋಟಿ ಬೆಲೆಯ ದುಬಾರಿ ಮೀನು: ನೋಡೋದಕ್ಕೆ ಜನ ಜಂಗುಳಿ; ಈ ಮೀನು ಹಿಡಿದರೆ ಜೈಲೇ ಗತಿ!
ಬಂಗಾಳದ ವಲಸೆ ಕಾರ್ಮಿಕನಿಗೆ ಒಲಿದ 70 ಲಕ್ಷ ರೂ. ಕೇರಳ ಬಂಪರ್ ಲಾಟರಿ: ಪೊಲೀಸ್ ಠಾಣೆಗೆ ಓಡಿದ ವಿಜೇತ
ಕೂತಿ ಎಂದರೆ ಹೊಡಿ ಸೀಟಿ: ಕೊಡಗಿನಲ್ಲೊಂದು ಮಾದರಿ ಆತ್ಮನಿರ್ಭರ್ ಗ್ರಾಮ
ರೈಲು ಬೋಗಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ: ಮಕ್ಕಳನ್ನು ಸೆಳೆಯಲು ಮುಖ್ಯೋಪಾಧ್ಯಾಯರ ತಂತ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


