12 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದ ಕೇರಳ ರಿಕ್ಷಾ ಡ್ರೈವರ್
12 ಕೋಟಿ ರೂ. ಬಹುಮಾನ ಬಂದಿದ್ದರೂ ತಮ್ಮ ಬದುಕು ಎಂದಿನಂತೆಯೇ ನಡೆಯಲಿದೆ ಎಂದು ಜಯಪಾಲನ್ ಹೇಳಿದ್ದಾರೆ. ಬಹುಮಾನ ಬಂದ ಹಣದಲ್ಲಿ ಮೊದಲು ಸಾಲಗಳನ್ನು ತೀರಿಸುವ ಯೋಚನೆ ಜಯಪಾಲನ್ ಅವರದು.

ಕೊಚ್ಚಿ: ಎರ್ನಾಕುಲಂನ ಮರಡು ಎಂಬಲ್ಲಿನ ನಿವಾಸಿ ಜಯಪಾಲನ್ ಗೆ 12 ಕೋಟಿ ರೂ. ಮೌಲ್ಯದ ಕೇರಳ ಬಂಪರ್ ಲಾಟರಿ ಹೊಡೆದಿದೆ. ಜಯಪಾಲನ್ ಅವರು ವೃತ್ತಿಯಲ್ಲಿ ರಿಕ್ಷಾಚಾಲಕರಾಗಿದ್ದಾರೆ. ಕಳೆದ ಭಾನುವಾರ ಲಾತರಿ ಫಲಿತಾಂಶ ಘೋಷಣೆಯಾಗಿತ್ತು.
ಲಾಟರಿ ಫಲಿತಾಂಶ ಘೋಷಣೆಯಾದ ಬಳಿಕ ವಿಜೇತರು ಯಾರೂ ತಕ್ಷಣವೇ ಮುಂದೆ ಬಂದಿರಲಿಲ್ಲ. ಹೀಗಾಗಿ ಬಹುಮಾನ ವಿಜೇತ ಲಾಟರಿ ಹೊಡೆದವನಿಗಾಗಿ ಇಡೀ ಕೇರಳ ರಾಜ್ಯ ಎದುರು ನೋಡುತ್ತಿತ್ತು. ನಂತರ ಸುದ್ದಿ ಮಾಧ್ಯಮಗಳಿಂದ ವಿಜೇತ ಲಾತರಿಯ ನಂಬರ್ ಜಯಪಾಲನ್ ಕಣ್ಣಿಗೆ ಬಿದ್ದಿತ್ತು.
ರಾತ್ರಿ ನೈಟ್ ಶಿಫ್ಟ್ ಕೆಲಸ ಮಾಡುತ್ತಿದ್ದುದರಿಂದ ಅವರಿಗೆ ಲಾಟರಿ ಫಲಿತಾಂಶ ನೋಡಲು ಆಗಿರಲಿಲ್ಲ. ನಂತರ ಬೆಳಿಗ್ಗೆ ಈ ಬಗ್ಗೆ ಪರಿಶೀಲನೆ ನಡೆಸಿದಾಗ ತಮ್ಮ ನಂಬರ್ ಗೆ ಬಹುಮಾನ ಬಂದಿರುವುದು ಜಯಪಾಲನ್ ಗೆ ಗೊತ್ತಾಗಿತ್ತು. ಅವರು ಪ್ರತಿವರ್ಷ ಕೇರಳ ಲಾಟರಿ ಖರೀದಿಸುತ್ತಿದ್ದರು.
12 ಕೋಟಿ ರೂ. ಬಹುಮಾನ ಬಂದಿದ್ದರೂ ತಮ್ಮ ಬದುಕು ಎಂದಿನಂತೆಯೇ ನಡೆಯಲಿದೆ ಎಂದು ಜಯಪಾಲನ್ ಹೇಳಿದ್ದಾರೆ. ಬಹುಮಾನ ಬಂದ ಹಣದಲ್ಲಿ ಮೊದಲು ಸಾಲಗಳನ್ನು ತೀರಿಸುವ ಯೋಚನೆ ಜಯಪಾಲನ್ ಅವರದು. ಬಹುಮಾನದ ಮೊತ್ತದಲ್ಲಿ ಶೇ.10 ಪ್ರತಿಶತ ಲಾಟರಿ ಟಿಕೆಟ್ ಮಾರಿದ ಏಜೆನ್ಸಿಗೆ ಹೋಗುತ್ತದೆ.ನಂತರ ತೆರಿಗೆ ಎಲ್ಲಾ ಕಟ್ ಆಗಿ ಜಯಪಾಲನ್ ಕೈಗೆ 7.39 ಕೋಟಿ ರೂ. ಸಿಗಲಿದೆ.
Related Article
ಲಾಟರಿ ಮೂಲಕ 16 ಕೋಟಿಯ ಜೀವೌಷಧಿ: ಮಾರಣಾಂತಿಕ ಕಾಯಿಲೆಯಿಂದ ಮರುಜೀವ ಪಡೆದ ಭಟ್ಕಳದ ಮಗು!
60 ಸೆಕೆಂಡುಗಳಲ್ಲಿ 426 ಪಂಚು ಕೊಟ್ಟು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ ಭಾರತದ ಪಂಚ್ ವೀರ
ಜಿಂಕೆಗಳಿಗಾಗಿ 45 ಎಕರೆ ಭೂಮಿ ಮೀಸಲಿಟ್ಟ ರೈತ: ಕಳೆದ 20 ವರ್ಷಗಳಲ್ಲಿ ಜಿಂಕೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ
ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ
ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ
ಸ್ಕೇಟಿಂಗ್ ನಲ್ಲಿ ಮೈಸೂರಿನ ಗ್ರಾಮೀಣ ಭಾಗದ ಮಕ್ಕಳ ಸಾಧನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


