ವಿಶೇಷ

ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ

ಅನೇಕರು ಮನೆ ಮುಂದೆ ಉದ್ಯಾನವನ ನಿರ್ಮಿಸಿಕೊಳ್ಳುತ್ತಾರೆ. ಟೆರೇಸ್ ಮೇಲುಗಡೆಯೂ ಕೆಲವರು ಪುಟ್ಟ ಉದ್ಯಾನವನ ನಿರ್ಮಿಸುತ್ತಾರೆ. ಆದರೆ ತಿರುಪತಿಯ ಕಂಪಲ ಬಾಬು ಅವರು ತಮ್ಮ ಆಟೋ ರಿಕ್ಷಾ ಒಳಗೇ ಉದ್ಯಾನ ನಿರ್ಮಿಸಿಕೊಂಡಿದ್ದಾರೆ.

ರಿಕ್ಷಾದೊಳಗೆ ಉದ್ಯಾನ ನಿರ್ಮಿಸಿದ ಪರಿಸರಪ್ರೇಮಿ ಆಟೋ ಚಾಲಕ: ತಿರುಪತಿಯಲೊಂದು ವಿಶಿಷ್ಟ ಆಟೋ ರಿಕ್ಷಾ
ರಿಕ್ಷಾದಲ್ಲೇ ಉದ್ಯಾನ ಸೃಷ್ಟಿಸಿರುವ ಪರಿಸರ ಪ್ರೇಮಿ ಅಟೋ ಚಾಲಕ ಬಾಬು
Published On :

ತಿರುಪತಿ: ತಿರುಪತಿ ನಿವಾಸಿ ಆಟೋ ರಿಕ್ಷಾ ಚಾಲಕ ಕೊಂಪಲ ಬಾಬು ಅವರು ಓರ್ವ ಪರಿಸರ ಪ್ರೇಮಿ. 58 ವರ್ಷದ ಅವರು ಕಳೆದ ಹಲವು ವರ್ಷಗಳಿಂದ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪರಿಸರ ಪ್ರೇಮವನ್ನು ಸಾರಲು ಅವರು ಬಳಸಿಕೊಂಡಿದ್ದು ತಮ್ಮ ರಿಕ್ಷಾವನ್ನೇ.

ಅನೇಕರು ಮನೆ ಮುಂದೆ ಉದ್ಯಾನವನ ನಿರ್ಮಿಸಿಕೊಳ್ಳುತ್ತಾರೆ. ಟೆರೇಸ್ ಮೇಲುಗಡೆಯೂ ಕೆಲವರು ಪುಟ್ಟ ಉದ್ಯಾನವನ ನಿರ್ಮಿಸುತ್ತಾರೆ. ಆದರೆ ತಿರುಪತಿಯ ಕಂಪಲ ಬಾಬು ಅವರು ತಮ್ಮ ಆಟೋ ರಿಕ್ಷಾ ಒಳಗೇ ಉದ್ಯಾನ ನಿರ್ಮಿಸಿಕೊಂಡಿದ್ದಾರೆ. 

ಇದರಿಂದಾಗಿ ಪ್ರಯಾಣಿಕರು ರಿಕ್ಷಾಗೆ ಆಕರ್ಷಿತರಾಗುತ್ತಿದ್ದಾರೆ. ಹಲವು ಮಂದಿ ಪ್ರಯಾಣಿಕರು ಈ ರಿಕ್ಷಾದಲ್ಲಿ ಕುಳಿತರೆ ಉದ್ಯಾನವನದಲ್ಲಿ ಕುಳಿತ ಅನುಭವವಾಗುತ್ತದೆ ಎಂದು ಹೇಳಿರುವುದಾಗಿ ಬಾಬು ಅವರು ಹೇಳುತ್ತಾರೆ. 

ಸುಮಾರು 300 ಮಂದಿ ಕಾಯಂ ಪ್ರಯಾಣಿಕರು ಬಾಬು ಅವರ ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಏನೇ ಅಗತ್ಯವಿದ್ದರೂ ಬಾಬು ಅವರ ರಿಕ್ಷಾವನ್ನು ಬಳಸಿಕೊಳ್ಳುತ್ತಿದ್ದಾರೆ. ಬಾಬು ತಮ್ಮ ಮನೆಯಲ್ಲಿ ನರ್ಸರಿ ಹೊಂದಿದ್ದಾರೆ. ಆಸಕ್ತಿ ಇದ್ದವರಿಗೆ ಉಚಿತವಾಗಿ ಗಿಡಗಳನ್ನು ನೀಡುತ್ತಾರೆ.

Related Article

ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ

ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಲಾಠಿ ಹಿಡಿವ ಕೈಗಳಲ್ಲಿ ಸ್ಲೇಟು ಬಳಪ: ಸ್ಮಾರ್ಟ್ ಫೋನ್ ಇಲ್ಲದೆ ಶಿಕ್ಷಣ ವಂಚಿತರಾದ ಬಡ ಮಕ್ಕಳಿಗೆ ಪೊಲೀಸರಿಂದ ಪಾಠ

ಬರಡು ಭೂಮಿಯಲ್ಲಿ ಸೋಲಾರ್ ಬೆಳೆ ತೆಗೆದ ರಾಜಸ್ಥಾನ ರೈತ: ತಿಂಗಳಿಗೆ 4 ಲಕ್ಷ ರೂ. ಆದಾಯ

ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಗಮನ ಸೆಳೆದ ಪುಸ್ತಕಪ್ರೇಮಿ ಮಲಯಾಳಿ ರಿಕ್ಷಾ ಡ್ರೈವರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.