ವಿಶೇಷ

ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್

ಬೆಳಿಗ್ಗೆ ಬ್ರೇಕ್ ಫಾಸ್ಟ್ ಸೇವನೆ ನಂತರ ಆಯುಷ್ ಸಿಂಹ ನಿದ್ದೆಗೆ ಶರಣಾಗುತ್ತದೆ. ಆತ ಕ್ರಿಯಾಶೀಲನಾಗುವುದು ರಾತ್ರಿಯ ಹೊತ್ತಿನಲ್ಲಿ. ಕಳೆದ 2 ವರ್ಷಗಳಿಂದ ಆಯುಷ್ ಗೆ ವಿಶೇಷ ಟ್ರೀಟ್ಮೆಂಟ್ ನೀಡಲಾಗುತ್ತಿದೆ.

ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್
ಆಯುಷ್ ಸಿಂಹ
Published On :

ತಿರುವನಂತಪುರಂ: ಕೇರಳ ರಾಜ್ಯದಲ್ಲೇ ಅತಿ ಹಿರಿಯ ಸಿಂಹ ಎನ್ನುವ ಕೀರ್ತಿ 'ಆಯುಷ್' ಎಂಬ ಸಿಂಹದ್ದು. ತಿರುವನಂತಪುರಂನ ಮೃಗಾಲಯ ಅದರ ವಾಸಸ್ಥಾನ. ಅದರ ವಯಸ್ಸು 18.

ಇತ್ತೀಚಿನ ದಿನಗಳಲ್ಲಿ ಮೃಗಾಲಯದಲ್ಲಿ ಸಾರ್ವಜನಿಕರಿಗೆ ಸಿಂಹ ದರ್ಶನ ನೀಡುತ್ತಿಲ್ಲ. ಅದಕ್ಕೆ ಕಾರಣ ಅದರ ವಯಸ್ಸು. ಅಲ್ಲದೆ, ಇನ್ನೊಂದು ಕಾರಣವೆಂದರೆ ಆಯುಷ್ ಸಿಂಹಕ್ಕೆ ಮೃಗಾಲಯ ಸಿಬ್ಬಂದಿ ಬೇರೆಡೆ ರಾಜಾತಿಥ್ಯ ಒದಗಿಸುತ್ತಿದ್ದಾರೆ. 

ಬೆಳಿಗ್ಗೆ ಬ್ರೇಕ್ ಫಾಸ್ಟ್ ಸೇವನೆ ನಂತರ ಆಯುಷ್ ಸಿಂಹ ನಿದ್ದೆಗೆ ಶರಣಾಗುತ್ತದೆ. ಆತ ಕ್ರಿಯಾಶೀಲನಾಗುವುದು ರಾತ್ರಿಯ ಹೊತ್ತಿನಲ್ಲಿ. ಕಳೆದ 2 ವರ್ಷಗಳಿಂದ ಆಯುಷ್ ಗೆ ವಿಶೇಷ ಟ್ರೀಟ್ಮೆಂಟ್ ನೀಡಲಾಗುತ್ತಿದೆ. 

ಮೃಗಾಲಯದ ವೈದ್ಯರಾದ ಜೇಕಬ್ ಅಲೆಕ್ಸಾಂಡರ್ ಅವರು ಬಂದರೆ ಆಯುಷ್ ಪ್ರತಿಕ್ರಿಯಿಸುತ್ತಾನೆ. ವೈದ್ಯರು ಆಯುಷ್ ಎಂದು ಕರೆದಾಗ ಗೋಡೆ ಬಳಿ ತಲೆಯನ್ನು ಉಜ್ಜುತ್ತದೆ. ಅದರರ್ಥ ತಾನು ಆರೋಗ್ಯವಾಗಿದ್ದೇನೆ ಎಂದು.

ಆಯುಷ್ ಹಿಂದೆ ತುಂಬಾ ಆಕ್ಟಿವ್ ಆಗಿದ್ದ. ಉಗ್ರ ಸ್ವಭಾವದವನೂ ಆಗಿದ್ದ. ಆದರೆ ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್ ಆಗಿ ಒಂದೇ ಕಡೆ ಬಿದ್ದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಅಯುಷ್ ನನ್ನು ನಡೆಯುವಂತೆ ಮಾಡಲು ಮೃಗಾಲಯದ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆಗಿರಲಿಲ್ಲ. ಮಸಾಜ್, ಫಿಸಿಯೊಥೆರಪಿ ಸೇರಿದಂತೆ ಎಲ್ಲಾ ಬಗೆಯ ಪ್ರಯತ್ನಗಳೂ ನಿಷ್ಪ್ರಯೋಜಕವಾದವು.  

ಇಂದು ಆತನಿಗೆ ದಿನಕ್ಕೆ 6 ಕೆ.ಜಿ ಮಾಂಸ, ವಿಟಮಿನ್ ಮತ್ತಿತರ ಸಪ್ಲಿಮೆಂಟುಗಳನ್ನು ನೀಡಲಾಗುತ್ತಿದೆ. ಬೋರಾಗದಂತೆ ಮರದ ಚೆಂಡನ್ನು ಆತನಿಗೆ ನೀಡಲಾಗಿದೆ. ಆದರೆ ಆಯುಷ್ ಗೆ ಬಾಲ್ ಜೊತೆ ಆಟವಾಡಲು ಮನಸ್ಸೇ ಇಲ್ಲ ಎನ್ನುತ್ತಾರೆ ವೈದ್ಯರು.

Related Article

ಕಲ್ಲಿದ್ದಲು ತ್ಯಾಜ್ಯದಿಂದ ಅತ್ಯಾಕರ್ಷಕ ಆಭರಣ ಸೃಷ್ಟಿ: ಭಾರತೀಯ ವಿಜ್ಞಾನಿಗಳ ಸಾಧನೆ

12ನೇ ವಯಸ್ಸಿಗೇ ಮದುವೆಯಾಗಿ ಶಾಲೆ ಬಿಟ್ಟಿದ್ದ ಕೇರಳ ಮಹಿಳೆ ಈಗ ಹೈಸ್ಕೂಲ್ ಶಿಕ್ಷಕಿ

ಪತ್ನಿ ಮೇಲಿನ ಪ್ರೀತಿಯಿಂದ ತಾಜ್​ಮಹಲ್​ ಮಾದರಿಯ ಮನೆ ಕಟ್ಟಿಸಿಕೊಟ್ಟ ಮಧ್ಯಪ್ರದೇಶ ವ್ಯಕ್ತಿ!

ಶರಣಾಗತ ನಕ್ಸಲ್ ಮಹಿಳೆಯರಿಂದ ಫಿನೈಲ್ ತಯಾರಕ ಘಟಕ ಸ್ಥಾಪನೆ; ಮಹಾರಾಷ್ಟ್ರ ಪೊಲೀಸರ ಸಹಕಾರ

ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.